ರೋಹಿಣ್ಯಾದ ಘೃತ :
ಭಷಗಾತ್ಮಯಿಕಂ ವುದ್ವಾ ಪಿತ್ತ ಗುಲ್ಬನು ಪಾಚರೇತ್ ॥
ವಿರೇಚನಿಕ ಸಿದ್ದೇನ ಸರ್ಪಿವಾ ತಿಕ್ತಕೇನ ವಾ ॥
ರೋಹಿಣೀ ಕಟುಕಾನಿಂಬ ಮಧುಕ ತ್ರಿಫಲಾಷ್ಟ್ರ ಚ |
ಕರ್ಪಾಸಸ್ಥಾಯ ಮಾಣಾ ಚ ಪಟೋಲ ತ್ರಿವೃತೋ ಪಲೆ ॥
ದ್ವಿ ಫಲೇಚ ಮಸೂರಾಣಾಂ ಸಾಧ್ಯ ಮಷ್ಯಗುಣೇ ಲಿಂಭಸಿ |
ಶ್ವತಾಚ್ಛೇಪಂ ಘೃತಸಮಂ ಸರ್ಪಿಪಕ್ಷ ಚತುಷ್ಪಲಂ ॥ 116 1
ಪಿಬೇತ್ ಸಂಮೂರ್ಚ್ಛಿತಂ ತೇನ ಗುಲ್ನಃ ಶ್ಯಾಮತ ಪೈತಿಕಃ |
ಜ್ವರ ಕೃಷ್ಣಾ ಚ ಶೂಲಂಚ ಭಮೋ ಮೂರ್ಚ್ಛಾ ಅರುಚಿ ಸ್ಥಿಥಾ ॥
ವೈದ್ಯನು ಪಿತ್ತ ಗುಲ್ಬವನ್ನು ಚಿಕಿತ್ಸೆ ಮಾಡುವಾಗ ವಿರೇಚನ ಮಾಡಿಸಬೇಕಾಗುತ್ತದೆ. ಕಟುಕ ರೋಹಿಣಿ, ಬೇವು, ಮಧುಕ, ತ್ರಿಫಲದ ತಿರುಳು ಮತ್ತು ತ್ರಯಾಂಮಣ ಇವುಗಳನ್ನು. ತಲಾ 10 ಗ್ರಾಂ, ಪಟೋಲ ಮತ್ತು ತ್ರಿವೃತ್ 40 ಗ್ರಾಂ ಮತ್ತು ಮಸೂರ 80 ಗ್ರಾಂ ಇವೆಲ್ಲವನ್ನು 8 ಭಾಗ ನೀರಿಗೆ ಹಾಕಿ ಕುದಿಸಿ ನಂತರ ಕಷಾಯದ ಸಮಭಾಗ ತುಪ್ಪ ಸೇರಿ- ತಯಾರಿಸಿದ ಘೃತವಾದ ಸೇವನೆಯಿಂದ ಪಿತ್ತಜ ಗುಲ್ಮ, ಜ್ವರ, ಬಾಯಾರಿಕೆ, ನೋವು ತಲೆಸುತ್ತು, ಹಸಿವಿಲ್ಲದಿರುವಿಕೆ ಮುಂತಾದ ತೊಂದರೆಗಳು ನಿವಾರಣೆಯಾಗುತ್ತವೆ.
13. ದ್ರಾಕ್ಷಾ ಮಧೂಕಂ ಖರ್ಜೂರಂ ವಿದಾರೀಂ ಸಶತಾವರೀಂ ।
ಪರೂಷ ಕಾಣಿ ತ್ರಿಫಲಾಂ ಸಾದಯೇತ್ಫಲ ಸಂಮಿತಂ
ಜಲಾಡತೇ ಪಾದಾಶೇಷೆ ರಸ ಮಾಮಲಕಪ್ಪ ಚ |
ಘೃತಮಿಕ್ಷುರಸಂ ಕ್ಷೀರಮ್ ಮಭಯಾಕಲ್ಯ ಪಾದಿತಂ ||
ಸಾದಯೇತ್ ಘೃತಂ ಸಿದ್ಧಂ ಶರ್ಕರಾ ಕೌದ್ರ ಪಾದಿಕಂ | ಪ್ರಯೇಗಾತ್ ಪಿತ್ತ ಗುಲ್ಕಘಂ ಸರ್ವ ಪಿತ್ತ ವಿಕಾರಾನುತ್||
ದ್ರಾಕ್ಷಿ, ಮಧುಕ, ಖರ್ಜೂರ, ವಿದಾರಿ, ಶತಾವರಿ, ಪರುಷಕ, ತ್ರಿಫಲ ಇವುಗಳನ್ನು ತಲಾ 40 ಗ್ರಾಂ ತೆಗೆದು ಕೊಂಡು 2.56 ಲೀ.ನೀರಿನಲ್ಲಿ ಕುದಿಸಿ 1/4 ಭಾಗದ ಕಷಾಯಕ್ಕೆ ತುಪ್ಪ, ಕಬ್ಬಿನ ಹಾಲು, ಹಾಲು ಮತ್ತು1/4 ಭಾಗ ಅಳಲೆಕಾಯಿ ಕಲ್ಕವನ್ನು ಕಾಯಿಸಬೇಕು. ಕೊನೆಯಲ್ಲಿ ಸಕ್ಕರೆ ಮತ್ತು ಜೇನನ್ನು (ತಲಾ 4 ಭಾಗ) ಸೇರಿಸಿ ತಯಾರಿಸಿದ ಘೃತ ಸೇವನೆಯಿಂದ ಪಿತ್ತದಿಂದ ಉಂಟಾದ ಗುಲ್ಮ ರೋಗ ಮತ್ತು ಪಿತ್ತ : ವಿಕಾರಗಳು ನಿವಾರಣೆಯಾಗುತ್ತವೆ.
ಮಿಶ್ರಕಃ ಸ್ನೇಹಃ :
ತ್ರಿವೃತಾಂ ತ್ರಿಫಲಾಂ ದಂತೀಂ ದಶಮೂಲಂ ಫಲೋತಂ ।
ಜಲೇ ಚತುರ್ಗುಣೇ ಪಕ್ಷ್ವಾ ಚತುರ್ಭಾಗಸ್ಥಿತಂ ರಸಂ ||
ಸರ್ಪಿರೇರಂಡಜಂ ತೈಲಂ ಕ್ಷೀರಂ ಚೈಕತ್ರ ಸದಾಯೇತ್ |
ಸ ಸಿದ್ಯೋ ಮಿಶ್ರಕ ಸ್ನೇಹಃ ಸಕ್ಷೌದ್ರಃ ಕಫ ಗುಲ್ಮನುತ್ ॥
ಕಫವಾತ ವಿಭಂದೇಷು ಕುಷ್ಟಪ್ಲೀ ಹೋದರೇಷು ಚ ।
ಪ್ರಾಯೋಕ್ಕೊ ಮಿಶ್ರಕಃ ಸ್ನೇಹೋ ಯೋನಿಶೂಲೇಷು ಚಾದಿಕಂ ॥
ಶ್ರೀವೃತ್, ತ್ರಿಫಲ, ದಂತಿ, ದಶಮೂಲ – ಇವುಗಳನ್ನು ತಲಾ 40 ಗ್ರಾಂ ತೆಗೆದುಕೊಂಡ ನಾಲ್ಕು ಭಾಗ ನೀರಿನೊಡನೆ ಕುದಿಸಿ1/4 ಭಾಗ ಕಷಾಯ ಉಳಿದ ನಂತರ ತುಪ್ಪ ಹರಳೆಣ್ಣೆ ಮತ್ತು ಹಾಲು ಸೇರಿಸಿ ತಯಾರಿಸಿದ ಘೃತ ಪಾಕವನ್ನು ಜೇನುತುಪ್ಪದೊಡು ಸೇವಿಸುವುದರಿಂದ ಗುಲ್ಮ ವಾಸಿಯಾಗುತ್ತದೆ. ಮಲಬದ್ಧತೆ, ಕುಷ್ಠರೋಗ, ಪ್ಲೇಹರೋಗ ಮತ್ತು ಯೋನಿನೋವು ನಿವಾರಣೆಯಾಗುತ್ತದೆ.
ಅಧ್ಯಾಯ – 7
15. ತ್ರಿಫಲಾತಿವಿನಾ ಕಟುಕಾನಿಂಬ ಕಳಿಂಗಕ ವಚಾ ಪಾದೋಲನಮ್ । ಮಾಗದೀಕಾರ ಜನೀದ್ವಯ ಪದ್ಮಕ ಮೂರ್ವಾ ವಿಶಾಲಕಮ್ |
ಭೂನಿ೦ಬ ಪಲಾಶಾನಂ ದಧ್ಯಾದ್ವಿಫಲಂ ತತ ಸ್ಥಿವೃತ್ ದ್ವಿಗುಣ |
ತಸ್ಸಾಶ್ಚ ಪುನಬ್ರಾಹ್ಮೀ ತಚೂರ್ಣಂ ಸುಪ್ತಿನುಕ್ ಪರಮಮ್ ||
ತ್ರಿಫಲ, ಅತಿವಿಷ, ಕಟುಕಾ, ಬೇವು, ಇಂದ್ರಯವ, ಬಜೆ, ಪಟೋಲ, ಹಿಪ್ಪಲಿ, ಆರಿಸಿನ, ಮರದರಿಸಿನ, ಪದ್ಮಕ, ಮೂರ್ವ, ವಿಶಾಲ, ಭೂನಿಂಬ – ಇವುಗಳನ್ನು ತಲಾ 8 ಗ್ರಾಂ ತೆಗೆದುಕೊಂಡು ತ್ರಿವೃತ್ 160 ಗ್ರಾಂ ಮತ್ತು 320 ಗ್ರಾಂ ಬ್ರಾಹ್ಮಯೊಡನೆ ಮಿಶ್ರಣ ಮಾಡಿ ಸೇವಿಸುವುದರಿಂದ ಜೋಮು (numbness) ನಿವಾರಣೆಯಾಗುತ್ತದೆ.
16. ತ್ರಿಫಲಾಸಾವಶ್ಚ ಗೌಡಃ ಸಚಿತ್ರಕಃ ಕುಷ್ಟ ರೋಗವಿನಿಹಂತ |
ಕ್ರಮುಕ ದಶಮೂಲ ದಂತೀ ವರಾಂಗ ಮಧುಯೋಗ ಸಂಯುಕ್ತ ||
ತ್ರಿಫಲ, ಬೆಲ್ಲ, ಚಿತ್ರಮೂಲ, ಕ್ರಮುಕ, ದಶಮೂಲ, ದಂತಿ ಮತ್ತು ಜೇನು ಮಿಶ್ರಣ ಮಾಡಿ ತಯಾರಿಸಿದ ಆಸವ ಕುಷ್ಠರೋಗ ಚಿಕಿತ್ಸೆಗೆ ಉಪಯುಕ್ತ.
17. ತ್ರಿಫಲಾನಿಂಬ ಪಟೋಲಂ ಮಂಜಿಷ್ಠಾ ರೋಹಿಣಿ ವಚಾ ರಜನಿ
ಏಷ ಕಷಾಯೇ ಲಭ್ಯಸ್ತೋನಿಹಂತಿ ಕಫ ಪಿತ್ತಂ ಕುಪ್ಟಮ್ ||
ಏರೇವ ಚ ಸರ್ಪಿ: ಸಿದ್ಧಂ ವಾತೊಲ್ಬಣಂ ಜಯತಿ ಕುಲ್ಬಮ್ । ಏಷ ಚ ಕಲ್ಲೊ ದಿಷ್ಟಃ ಖದಿರಾಸನ ದಾರು ನಿಂಬಾನಮ್ | 101 |
ತ್ರಿಫಲ, ಬೇವು, ಪಟೋಲ, ಮಂಜಿಷ್ಠ, ರೋಹಿಣಿ, ಬಜೆ ಮತ್ತು ಅರಿಸಿನ – ಇವುಗಳ ಕಷಾಯವನ್ನು ಸೇವಿಸುವುದರಿಂದ ಕುಷ್ಠ ನಿವಾರಣೆಯಾಗುತ್ತದೆ. ಈ ದ್ರವ್ಯಗಳ ಜೊತೆ ಖಥಿರಾ, ಆಸನ, ದೇವದಾರು ಮತ್ತು ಬೇವು ಸೇರಿಸಿ ತಯಾರಿಸಿದ ಕಲ್ಕ ಕುಷ್ಠ ಚಿಕಿತ್ಸೆಗೆ ಉಪಯುಕ್ತ.
7 ಉಪಯುಕ್ತ.
ತಿಕ್ಕ ಷಟ್ಫಲಕಂ ಧೃತಂ :
ನಿಂಬ ಪಟೋಲಂ ದಾರ್ವಿ ದುರಾಲಾಭಂ ತಿಕ್ಕರೋಹಿಣೀಂ । ಕುರ್ಯಾದ್ರ್ದ ಪಲಾಂಶಂ ಪಪಟಕಂ ತ್ರಯೋ ಮಾಣಂ ಚ ॥
ಸಲಿಲಾಡಂಕ ಸಿದ್ಧಾನಂ ರಸೇ ಅಪ್ಪಭಾಗ ಸ್ಥಿತೇ ಕ್ಷಿಪೇತ್ ಪೂತೇ । ಚಂದನಾ ಕಿರಾತತಿಕ್ಕಕ ಮಗಧಿಕಾ ಸ್ಥಾಯ ಮಾಣಾಮ್ ಚ | |
ಮುಸ್ತಂ ವತ್ರಕ ಬೀಜಂ ಕಲ್ಕೀ ಕೃತ್ಯಾರ್ಧ ಕಾರ್ಷಿಕಾನ್ ಭಾಗಾನ್ | ನವಸರ್ಪಿಷಶ್ವ ಶಟ್ಫಲ ಮೇತತ್ ತ್ರಿದ್ಧಂ ಫೃತಂ ಪೇಯಂ ||
ಕುಷ್ಟ ಜ್ವರ ಗುಲ್ಲಾ ಶೋಗ್ರಹಣೀ ಪಾಂಡ್ಯಾಮಯಶ್ಚಯ ಥುಹಾರಿ । ಪಾಮಾ ವಿಸರ್ಪ ಪೀಡಕಾ ಕಂಡೂ ಮದಗಂಡನುತ್ತಿದ್ರಮ್ ॥
ಬೇವು, ಪಟೋಲ, ದಾರು ಹರಿದ್ರ (ಮರದರಿಶಿನ), ತಿಕ್ಕ ರೋಹಿಣಿ, ತ್ರಿಫಲ ಪರ್ಪಾಟಕ, ತ್ರಯಂಮಣಾ, ಇವುಗಳನ್ನು ತಲಾ 20 ಗ್ರಾಂ ತೆಗೆದುಕೊಂಡು, 2.56 ಲೀಟರ ನೀರಿನಲ್ಲಿ ಕುದಿಸಿ 1/8 ಭಾಗದ ಕಷಾಯವನ್ನು ಸೋಸಿಕೊಂಡು ಶ್ರೀಗಂಧ, ಕಿರಾತತಿಕೃ ಹಿಪ್ಪಲಿ, ತ್ರಯಂಮಣಾ, ಮುಸ್ತ, ಇಂದ್ರಜವ – ಇವುಗಳನ್ನು ತಲಾ 5 ಗ್ರಾಂ ತೆಗೆದುಕೊಂಡು ಕಲ್ಕ ತಯಾರಿಸಿ ಎಲ್ಲವನ್ನೂ 240 ಗ್ರಾಂ ತುಪ್ಪಕ್ಕೆ ಮಿಶ್ರಣ ಮಾಡಿ ಕುದಿಸಿ ತಯಾರಿಸಿದ ಘೃತ ಪಾಕವನ್ನು ಸೇವಿಸುವುದರಿಂದ ಕುಷ್ಠ, ಜ್ವರ, ಗುಲ್ಮ, ಮೂಲವ್ಯಾಧಿ, ಅಜೀರ್ಣ ರೋಗ, ರಕ್ತ ಹೀನತೆ, ಶೋಬೆ, ವಿಸರ್ಪ, ಕುರ, ನವೆ, ಊತವಿರುವ ಗ್ರಂಥಿ ಮುಂತಾದವುಗಳು ವಾಸಿಯಾಗುತ್ತವೆ.