ಒಮ್ಮೆ ಒಬ್ಬ ಪಾದ್ರಿಯು ದೇವಾಜ್ಞೆಯ ಕುರಿತು ಉಪಾಧ್ಯಕ್ಷಕ್ಕೆ ಸಿದ್ದರಾಗುತ್ತಿದ್ದಾಗ ಸ್ಫೋಟಕ ಶಬ್ದ ಕೇಳಿಸಿತು.ಕೂಡಲೇ ಜನರು ಗಂಭೀರಿಯಿಂದ ಓಡಲಾರಂಭಿಸಿದರು. ಸೇತುವೆ ಒಡೆದುಹೋಗಿ ನೀರು ಪ್ರವಾಹದಂತೆ ಹಳ್ಳಿಯ ಬಳಿ ಹರಿದು ಬಂತು. ಸಹಜವಾಗಿ ಅಲ್ಲಿದ್ದ ಜನರನ್ನು ಬೇರೆಡೆ ಸಾಗಿಸಲಾಯಿತು. ಕೆಳಗೆ ಬೀದಿಯಲ್ಲಿ ನೀರು ಏರುವುದನ್ನು ಪಾದ್ರಿ ನೋಡಿದರು. ಆವರೂ ಒಬ್ಬ ಮನುಷ್ಯರೇ ಅವರಲ್ಲೂ ತಳಮಳ ಶುರುವಾಯಿತು. ಆದರೆ ಅವರು “ದೇವಾಜ್ಞೆಯ ಬಗ್ಗೆ ಉಪದೇಶಕ್ಕೆ ಸಿದ್ದನಾಗುತ್ತಿದ್ದೆ. ನನ್ನ ನಂಬಿಕೆಯನ್ನು ದೇವರು ಪರೀಕ್ಷಿಸುತ್ತಿರಬಹುದು. ನಾನು ಬೋಧಿಸುವುದನ್ನು ಕಾರ್ಯ ರೂಪಕ್ಕೆ ತರಲು ನನಗೆ ಅವಕಾಶವನ್ನು ನೀಡಿದ್ದಾನೆ. ನಾನು ಎಲ್ಲೂ ಓಡಬಾರದು ದೇವರು ನನ್ನನ್ನು ಉಳಿಸುತ್ತಾನೆಂಬ ನಂಬಿಕೆಯಲ್ಲಿ ಇರುತ್ತೇನೆ” ಎಂದು ಯೋಚಿಸಿದರು.
ಆ ವೇಳೆಗೆ ನೀರು ಕಿಟಕಿಯವರೆಗೆ ಬಂತು. ಅಲ್ಲಿಗೆ ಜನರು ತುಂಬಿದ ದೋಣಿ ಬಂತು. “ಪಾದ್ರಿಗಳೇ ಹಾರಿ” ಎಂದು ಜನರು ಕೂಗಿದರು.
“ಮಕ್ಕಳೇ ಇಲ್ಲ ದೇವರು ನನ್ನನ್ನು ಉಳಿಸುತ್ತಾನೆಂದು ನನಗೆ ನಂಬಿಕೆ ಯಿಂದೆ” ಎಂದು ಪಾದ್ರಿ ಹೇಳಿದರು. ಪಾದ್ರಿ ತಮ್ಮ ಮನೆಯ ಚಾವಣಿಯನ್ನು ಏರಿದರು. ಆದರೂ ನೀರು ಹರಿದು ಬರುತ್ತಿತ್ತು ಜನರು ತುಂಬಿದ ಇನ್ನೊಂದು ದೋಣಿ ಬಂದು ಅವರನ್ನು ಕರೆದರೂ ಪಾದ್ರಿ ಬರಲು ನಿರಾಕರಿಸಿದರು.
ಅವರ ಮೊಣಕಾಲಿನವರೆಗೆ ನೀರು ಬಂದು ಮೋಟಾರ್ ಬೋಟಿನಲ್ಲಿ ಅಧಿಕಾರಿಯೊಬ್ಬ ಅಲ್ಲಿಗೆ ಬಂದರು. “ಇಲ್ಲ ಧನ್ಯವಾದ ನಾನು ದೇವರನ್ನು ನಂಬುತ್ತೇನೆ. ಅವನು ಎಂದು ನನ್ನ ಕೈ ಬಿಡುವುದಿಲ್ಲ ”ಎಂದು ಮುಗುಳು ನಗುತ್ತಾ ಪಾದ್ರಿ ಹೇಳಿದರು.
ಕೊನೆಗೆ ಪಾತ್ರೆ ನೀರಿನಲ್ಲಿ ಮುಳುಗಿ ಸ್ವರ್ಗಕ್ಕೆ ಹೋದರು. ಅಲ್ಲಿಗೆ ಹೋದಾಗ ಅವರು ದೇವರಿಗೆ ನೀಡಿದ ಮೊದಲ ದುರೆಂದರೆ “ನಿನ್ನನ್ನು ನಾನು ನಂಬಿದೆ ಆದರೆ ನನ್ನನ್ನು ರಕ್ಷಿಸಲು ನೀನು ಏನು ಮಾಡಲಿಲ್ಲ “
“ಆಯಿತು…. ” ಎಂದು ದೇವರು ಉತ್ತರಿಸಿದನು.
ಪ್ರಶ್ನೆಗಳು
1.ದೇವರು ಪಾದ್ರಿಗೆ ಏನು ಹೇಳಿದರು?
2.ಈ ಕಥೆಯ ನೀತಿಯೇನು?
ಉತ್ತರಗಳು
1.ನಾನು ನಿನಗಾಗಿ ಮೂರು ದೋಣಿಗಳನ್ನು ಕಳಿಹಿಸಿದೆ.
2.ಆಗಾಗ್ಗೆ ನಮ್ಮ ರಕ್ಷಣೆಗೆ ದೇವನು ಬರುತ್ತಾನೆಂದು ನಂಬುವುದು ಮೂರ್ಖತನ.ನಾವೇ ಪ್ರಯತ್ನ ಮಾಡಬೇಕು. ನಮ್ಮ ಬದುಕನ್ನು ರಕ್ಷಿಸಿಕೊಳ್ಳಲು ಶ್ರಮಿಸಬೇಕು. ಮಿಕ್ಕಿದ್ದನ್ನು ದೇವನು ಮಾಡುತ್ತಾನೆ ನಾವು ಕಾರಣ ಮತ್ತು ಕಾರ್ಯಗಳ ಪರಿಣಾಮವನ್ನು ನಂಬಬೇಕು. ದೇವರಲ್ಲಿ ನಾವು ನಂಬಿಕೆ ಇರಬೇಕು. ಪರಿಸ್ಥಿತಿಗೆ ತಕ್ಕಂತೆ ಕೆಲಸ ಮಾಡಬೇಕು “ತಮ್ಮನ್ನು ರಕ್ಷಿಸುವವರನ್ನು ದೇವರು ರಕ್ಷಿಸುತ್ತಾನೆ.”