ಮನೆ ಮನೆ ಮದ್ದು ತುಳಸಿ

ತುಳಸಿ

0

ತುಳಸಿ ಔಷಧೀಯ ಗುಣಗಳ ದೆಸೆಯಿಂದ ಖಂಡಿತ ಇದಕ್ಕೆ ಪೂಜಾರ್ಹ ಸ್ಥಾನದೊರೆಕಿದೆ. ಮನೆ ಅಂಗಳದಲ್ಲಿ ತಟ್ಟನೆ ದೊರಕಲೆಂದು ಕಟ್ಟೆ ಕಟ್ಟಿ ಪೂಜಿಸ ತೊಡಗಿರಬಹುದು. ರಾಮ ತುಳಸಿ, ವಿಷ್ಣು ತುಳಸಿ, ಕೃಷ್ಣ ತುಳಸಿ, ಕರ್ಪೂರ ತುಳಸಿ, ನಿಂಬೆ ತುಳಸಿ, ಪ್ರಭೇದಗಳನ್ನು ಗುರುತಿಸುವರು.

ಕರಿ, ಹಸಿರಲೆಯ ಜಾತಿ ಸಾಮಾನ್ಯವಾಗಿ ನೆಟ್ಟು ಬಳಸುವ ಪ್ರಭೇದಗಳು, ಸುರಾಸ (ಅತಿಂಗೂಗಿ ರಸ)  ಎಂಬ ಮೂಲ ಹೆಸರಿಂದ ತುಳಸಿ ಪದ ಹುಟ್ಟಿದೆ. ನೆಟ್ಟು ಬೆಳೆಸಿದ ಈ ಕಾಡು ಮೂಲದ ಎರಡು ಉಪಜಾತಿ ಸಹ ಬಳಕೆಯಲ್ಲಿದೆ.

ಔಷಧಿಯ ಗುಣಗಳು :-

1.ಬೀಜ ಸಿಹಿ ಲೋಳೆಯಾಗಿರುವುದು. ನೀರಲ್ಲಿ ನೆನೆಸಿ ಶರಬತ್ತು ರೂಪದಲ್ಲಿ ಕುಡಿಸಿದರೆ ಊರಿಮೂತ್ರ, ಮೂತ್ರ ಕಟ್ಟು ನಿವಾರಣೆ ಆಗುತ್ತದೆ.

2.ನೆಗಡಿ, ಜ್ವರ, ಗಂಟಲು, ನೋವು ಪರಿಹಾರಕ್ಕಾಗಿ ತುಳಸಿ ಎಲೆ ರಸ ಜೊತೆ ಜೇನು ಹಾಕಿದರೆ ಖಂಡಿತ ಪರಿಹಾರ ಸಿಗುವುದು.

3.ಕಿವಿನೋವಿಗೆ ಎಲೆ ರಸ ತೊಟ್ಟಿಕಿಸಬಹುದು. ಎಲೆ ರಸ ಹಚ್ಚಿದರೆ ಕೂಡಲೇ ಚರ್ಮದ ಗಾಯ ಕಲೆ,ನವೆ ಪರಿಹಾರ, ಕೀಟ ಕಡಿತದ ಉಪಶಮನ.

4. ಗಂಟಲ ದನಿ ಬಿದ್ದಾಗ ಹತ್ತಾರು ಎಲೆಗಳನ್ನು ಜಿಗಿದು ತಿಂದರೆ ಕೂಡಲೇ ಪರಿಹಾರವಾಗುತ್ತದೆ.

5.ಉಷ್ಣ ಸ್ವಭಾವದ ತುಳಸಿಯ ಬಳಕೆ ಕಫ, ಜ್ವರ, ಕೆಮ್ಮು, ಶೀತ ಪರಿಹಾರಕ್ಕೆ ಮುಖ್ಯವಾಗಿದೆ. ಆರೆದ ಎಲೆಯ ರಸ ಕೂಡಿಸಿದರೆ ಪರಿಹಾರವಾಗುತ್ತದೆ.