ತುಮಕೂರು: ಶಿರಾ ಪಟ್ಟಣದಲ್ಲಿ ಪರವಾನಗಿ ಇಲ್ಲದೆ ಓಡಿಸುತ್ತಿದ್ದ 15 ಆಟೋಗಳು ಹಾಗೂ 1 ಶಾಲಾ ಬಸ್ ನ್ನು ತುಮಕೂರು ಆರ್ ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇನ್ಶೂರೆನ್ಸ್, ಡಿಎಲ್ ಇಲ್ಲದೇ ವಾಹನ ಓಡಿಸುತ್ತಿದ್ದ ಚಾಲಕರಿಗೆ ಆರ್ ಟಿಒ ಇನ್ಸ್ ಪೆಕ್ಟರ್ ಶರೀಫ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಶಾಕ್ ನೀಡಿದ್ದಾರೆ.
ಬಹಳ ದಿನಗಳಿಂದ ಸಾರಿಗೆ ಇಲಾಖೆಗೆ ಕಣ್ಣುತಪ್ಪಿಸಿ ಈ ವಾಹನಗಳು ಸಂಚರಿಸುತ್ತಿದ್ದವು. ಇದೀಗ ವಶಕ್ಕೆ ಪಡೆದಿದ್ದು, ಸಾರಿಗೆ ಇಲಾಖೆ ಅಧಿಕಾರಿಗಳಿಂದ ತನಿಖೆ ಮುಂದುವರೆದಿದೆ.