ಮನೆ ಆರೋಗ್ಯ ಮೈ ಕೈ ಸೆಳೆತಕ್ಕೆ ಅರಿಶಿನ-ಆಲಂ ಮನೆಮದ್ದು

ಮೈ ಕೈ ಸೆಳೆತಕ್ಕೆ ಅರಿಶಿನ-ಆಲಂ ಮನೆಮದ್ದು

0

ಅರಿಶಿನ ಹೇಳಿ ಕೇಳಿ ನಾವು ಬಹಳ ಹಿಂದಿನಿಂದ ಬಳಸಿಕೊಂಡು ಬಂದಿರುವ ಆಯುರ್ವೇದ ಗಿಡಮೂಲಿಕೆ ಪದಾರ್ಥ. ಇದರಲ್ಲಿ ನೈಸರ್ಗಿಕವಾಗಿ ಹಲವಾರು ಔಷಧೀಯ ಗುಣಲಕ್ಷಣಗಳು ಇವೆ. ಇವುಗಳ ಜೊತೆಗೆ ನಮ್ಮ ಮೈಕೈ ನೋವು ಮತ್ತು ಮೈ ಕೈ ಸೆಳೆತ ಕೂಡ ವಾಸಿಯಾಗುತ್ತದೆ ಎಂದು ನಂಬಬಹುದು.

ಅರಿಶಿನ ಮತ್ತು ಆಲಂ ಮಿಶ್ರಣದ ಪ್ರಭಾವ

ಅರಿಶಿನ ನಿಮಗೆಲ್ಲ ಗೊತ್ತಿರುವ ಹಾಗೆ ಒಂದು ನೈಸರ್ಗಿಕ ಆಂಟಿಸೆಪ್ಟಿಕ್. ಇದನ್ನು ನೋವು ನಿವಾರಕವಾಗಿ ಬಳಸುತ್ತಾರೆ. ಅದೇ ರೀತಿ ಆಲಂ ಸಹ ನಮ್ಮ ಕಾಯಿಲೆಯನ್ನು ವಾಸಿ ಮಾಡುವ ಮತ್ತು ರಕ್ತವನ್ನು ತೆಳ್ಳಗೆ ಮಾಡುವ ಗುಣವನ್ನು ಹೊಂದಿದೆ. ನೈಸರ್ಗಿಕವಾಗಿ ಮೈ ಕೈ ನೋವಿಗೆ ಮತ್ತು ಸೆಳೆತಕ್ಕೆ ಇವೆರಡನ್ನು ಅನ್ವಯಿಸಿ ಪರಿಹಾರ ಕಂಡುಕೊಳ್ಳಬಹುದು.

ಇದರ ಬಳಕೆ ಹೇಗೆ?

ಅರಿಶಿನ ಮತ್ತು ಆಲಂ ಮಿಶ್ರಣ ನಮ್ಮ ಮೈ ಕೈ ನೋವು ಮತ್ತು ಮಾಂಸ ಖಂಡಗಳ ಸೆಳೆತವನ್ನು ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಅಷ್ಟೇ ವೇಗವಾಗಿ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇಲ್ಲದಂತೆ ಕಡಿಮೆ ಮಾಡುತ್ತದೆ.

ಈ ಮಿಶ್ರಣವನ್ನು ತಯಾರು ಮಾಡುವ ವಿಧಾನವೆಂದರೆ

• ಒಂದು ಒರಟಾದ ಜಾಗದ ಮೇಲೆ ಚಿಟಿಕೆ ಅರಿಶಿನ ಪುಡಿ ಹಾಕಿ ಅದಕ್ಕೆ ಕೆಲವು ಹನಿಗಳಷ್ಟು ನೀರು ಸೇರಿಸಿ.

• ಇವುಗಳನ್ನು ಮಿಶ್ರಣ ಮಾಡಿದ ನಂತರ ಒಂದು ಸಣ್ಣ ಆಲಂ ಅಂಗಡಿಯಿಂದ ತಂದು ಇದರಲ್ಲಿ ಸೇರಿಸಿ ಗಟ್ಟಿಯಾದ ಪೇಸ್ಟ್ ತಯಾರಿಸಿ. ಅರಿಶಿನದ ಬಣ್ಣಕ್ಕೆ ಹೋಲಿಸಿದರೆ ಈ ಮಿಶ್ರಣ ಸ್ವಲ್ಪ ಕಡಿಮೆ ಬಣ್ಣವನ್ನು ಹೊಂದಿರುವಂತೆ ನೋಡಿಕೊಳ್ಳಿ.

• ಈಗ ಇದನ್ನು ನಿಮಗೆ ಮೈ ಕೈ ಸೆಳೆತ ಇರುವ ಜಾಗಕ್ಕೆ ಅನ್ವಯಿಸಿ ಹಾಗೆ ಬಿಡಿ. ಆದರೆ ನೆನಪಿರಲಿ, ಇದರಿಂದ ಮಸಾಜ್ ಮಾಡಲು ಹೋಗಬೇಡಿ.

ದಿನದಲ್ಲಿ ಎರಡು ಬಾರಿ

ದಿನದಲ್ಲಿ ಎರಡು ಬಾರಿ ಎರಡು ದಿನಗಳವರೆಗೆ ಈ ರೀತಿ ಮಾಡುವುದರಿಂದ ನಿಮ್ಮ ಮೈಕೈ ನೋವು ಮತ್ತು ಮಾಂಸ ಖಂಡಗಳ ಸೆಳೆತ ಹಾಗೂ ಊತ ಕಡಿಮೆಯಾಗುತ್ತದೆ.

ಹಿಂದಿನ ಲೇಖನಸತ್ಯಸಾಯಿಬಾಬಾ ಮಾನವ ಕಲ್ಯಾಣಕ್ಕಾಗಿ ತಮ್ಮ ಬದುಕನ್ನೇ ಗಂಧದ ಕೊರಡಿನಂತೆ ತೇಯ್ದಿದ್ದಾರೆ: ಸಿಎಂ ಬೊಮ್ಮಾಯಿ
ಮುಂದಿನ ಲೇಖನನವೋದಯ: ಬೋಧಕ, ಬೋಧಕೇತರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ