ಮನೆ ಉದ್ಯೋಗ ನವೋದಯ: ಬೋಧಕ, ಬೋಧಕೇತರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ನವೋದಯ: ಬೋಧಕ, ಬೋಧಕೇತರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ನವೋದಯ ವಿದ್ಯಾಲಯ ಸಮಿತಿ 5000 ಬೋಧಕ ಮತ್ತು ಬೋಧಕೇತರ ಉದ್ಯೋಗಗಳ ನೇಮಕಾತಿ ಆರಂಭಗೊಂಡಿದೆ. ನೇಮಕ ಮಾಡಲು ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಇದು ಫೆಬ್ರವರಿ 2023ರೊಳಗೆ ನೇಮಕಾತಿ ಪೂರ್ಣಗೊಳ್ಳುತ್ತದೆ. ಇಲ್ಲಿ ಕೆಲವು ಹುದ್ದೆಗಳನ್ನು ಕೊನೆಯ ಸುತ್ತಿನ ಪ್ರಮೋಶನ್ ಮೂಲಕ ಭರ್ತಿ ಮಾಡಲಾಗುತ್ತದೆ.

ಜುಲೈನಲ್ಲಿ ಶಿಕ್ಷಣ ಸಚಿವಾಲಯವು 2021 ರ ಹೊತ್ತಿಗೆ ಕೇಂದ್ರ ಸರ್ಕಾರವು ನಿರ್ವಹಿಸುವ ನವೋದಯ ವಿದ್ಯಾಲಯಗಳಲ್ಲಿ ಬೋಧಕ ಹುದ್ದೆಗಳಲ್ಲಿ 3,156 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿತ್ತು. ಅದರ ಪ್ರಕಾರ ಜಾರ್ಖಂಡ್ನಲ್ಲಿ 230ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ.

ನಾಲ್ಕು ತಿಂಗಳಲ್ಲಿ ಸುಮಾರು ಐದು ಸಾವಿರ ಉದ್ಯೋಗಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದೆ.

ಶಿಕ್ಷಣ ಸಚಿವಾಲಯದ ಸಂಯೋಜಿತ ನವೋದಯ ವಿದ್ಯಾಲಯ ಸಂಘಟಯು ಈ ಹುದ್ದೆಗಳು ಬೋಧಕ ಮತ್ತು ಬೋಧಕೇತರ ವಿಭಾಗಗಳಾಗಿರುತ್ತದೆ. ಎರಡೂ ಹುದ್ದೆಗಳ ಭರ್ತಿಗೂ ಅರ್ಜಿ ಆಹ್ವಾನಿಸಲಾಗಿದೆ. ದೇಶಾದ್ಯಂತ ಸುಮಾರು 700 ವಸತಿ ನವೋದಯ ವಿದ್ಯಾಲಯಗಳಿವೆ ಎಂದು ಸಚಿವಾಲಯದ ಟ್ವೀಟ್ ಮಾಡಿದೆ.

ನೂತನ ಶಿಕ್ಷಣ ನೀತಿ 2020 ರ ಶಿಫಾರಸುಗಳನ್ನು ಜಾರಿಗೊಳಿಸುವ ಅಗತ್ಯತೆಗಳನ್ನು ಪರಿಗಣಿಸಿ ಎನ್ವಿಎಸ್ ನೇಮಕಾತಿ ಪ್ರಕ್ರಿಯೆ 2022 ಅನ್ನು ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದೇಶದ ಪ್ರತಿ ಶಾಲೆಯಲ್ಲಿ 30ವಿದ್ಯಾರ್ಥಿಗಳಿಗೆ  1 ಶಿಕ್ಷಕರಂತೆ ಅನುಪಾತವನ್ನು ಕಡ್ಡಾಯ ನಿರ್ವಹಿಸಬೇಕು ಎಂದು ನೀತಿ ನಿಯಮ ಹೇಳುತ್ತದೆ ಆ ಪ್ರಕಾರ ನೇಮಕಾತಿ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯ ಸಾಮಾಜಿಕ- ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಹೊಂದಿರುವ ಪ್ರದೇಶಗಳಲ್ಲಿ 25 ವಿದ್ಯಾರ್ಥಿಗಳಿಗೆ  1 ಶಿಕ್ಷಕರಂತೆ ಅನುಪಾತವನ್ನು ಗುರಿಯಾಗಿಟ್ಟುಕೊಳ್ಳಬೇಕು ಎಂದು ನೀತಿ ಹೇಳುತ್ತದೆ.

ನವೋದಯ ವಿದ್ಯಾಲಯಗಳು ಸಹ- ಶಿಕ್ಷಣ ವಸತಿ ಶಾಲೆಗಳಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ನವೋದಯ ತೆರೆಯಲಾಗಿದೆ.  NVS ಪ್ರಸ್ತುತ ದೇಶದಾದ್ಯಂತ ಹರಡಿರುವ ಸುಮಾರು 700 ವಸತಿ ಶಾಲೆಗಳನ್ನು ನಿರ್ವಹಿಸುತ್ತಿದೆ. ಈ ಶಾಲೆಗಳು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಸಿ) ನಿಗದಿಪಡಿಸಿದ ಪಠ್ಯಕ್ರಮವನ್ನು ಅನುಸರಿಸುತ್ತಿದೆ. ಇದು 6ರಿಂದ 12ನೇ ತರಗತಿವರೆಗಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ವಸತಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ.

ನೂತನ ಶಿಕ್ಷಣ ನೀತಿ 2020 ದೇಶದಾದ್ಯಂತ ಹೆಚ್ಚಿನ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸಲು ಶಿಫಾರಸು ಮಾಡಿದೆ. ಸ್ಥಳೀಯವಾಗಿ ವಾಸಿಸುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಶೈಕ್ಷಣಿಕ ಅವಕಾಶಗಳನ್ನು ಹೆಚ್ಚಿಸುವ ಸಲುವಾಗಿಯೇ ಈಗ ನೇಮಕಾತಿ ಆರಂಭಗೊಂಡಿದೆ.

ಹಿಂದಿನ ಲೇಖನಮೈ ಕೈ ಸೆಳೆತಕ್ಕೆ ಅರಿಶಿನ-ಆಲಂ ಮನೆಮದ್ದು
ಮುಂದಿನ ಲೇಖನನನ್ನ ಮಗನ ಸಾವಿನ ಹಿಂದೆ ಕಾಣದ ಕೈಗಳಿವೆ: ಶಾಸಕ ಎಂ ಪಿ ರೇಣುಕಾಚಾರ್ಯ