ಬೆಂಗಳೂರು (Bengaluru): ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಟ್ವಿಟರ್ ಖಾತೆಯಿಂದ ಬ್ಲೂ ಟಿಕ್ ಮಾಯಾವಾಗಿದೆ. ಇದರಿಂದ ಅಪ್ಪು ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಸುಮಾರು 9 ತಿಂಗಳುಗಳಾಗುತ್ತಿದೆ. ಇಷ್ಟು ದಿನ ಪುನೀತ್ ರಾಜ್‌ಕುಮಾರ್ ಟ್ವಿಟರ್ ಖಾತೆಯಲ್ಲಿದ್ದ ನೀಲಿ ಟಿಕ್ ಈಗ ಮಾಯವಾಗಿದೆ. ಈ ಬೆಳವಣಿಗೆಯನ್ನು ನೋಡಿ ಪವರ್‌ಸ್ಟಾರ್ ಫ್ಯಾನ್ಸ್ ಮತ್ತಷ್ಟು ನೋವು ಅನುಭವಿಸುವಂತಾಗಿದೆ.
ಪುನೀತ್ ರಾಜ್‌ಕುಮಾರ್ ಟ್ವಿಟರ್ ಖಾತೆಯಿಂದ ನೀಲಿ ಟಿಕ್ ತೆಗೆದುಹಾಕಲು ಸಾಕಷ್ಟು ಕಾರಣವಿದೆ. ಅಪ್ಪು ಅಗಲಿದ ಬಳಿಕ ಅವರ ಟ್ವಿಟರ್ ಅಕೌಂಟ್ ಅಧಿಕೃತ ಖಾತೆಯಾಗಿ ಉಳಿದಿಲ್ಲ. ಅಲ್ಲದೆ ಕಳೆದ 8 ತಿಂಗಳಿಂದ ಅವರ ಖಾತೆಯನ್ನು ಆಕ್ಟಿವ್ ಆಗಿಲ್ಲ. ಈ ಕಾರಣಕ್ಕೆ ಪುನೀತ್ ರಾಜ್‌ಕುಮಾರ್ ಟ್ವಿಟರ್ ಖಾತೆಯಿಂದ ನೀಲಿ ಟಿಕ್ ಅನ್ನು ತೆಗೆದು ಹಾಕಲಾಗಿದೆ.
ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಟ್ವಿಟರ್ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಪ್ಪು ಖಾತೆಯಿಂದ ನೀಲಿ ಟಿಕ್ ತೆಗೆದಿದ್ದು ಯಾಕೆ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದರೊಂದಿಗೆ ಅಭಿಮಾನಿಗಳು ಅಭಿಮಾನ ಮಾಡಲು ಪವರ್‌ಸ್ಟಾರ್ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.