ಕೊಳ್ಳೇಗಾಲ: ಮೂರು ಕೆ.ಜಿ. ತೂಕದ ತಿಮಿಂಗಿಲ ವಾಂತಿ ಸಾಗಿಸುತ್ತಿದ್ದ ಇಬ್ಬರನ್ನು ಅರಣ್ಯ ಸಂಚಾರದಳ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಭಟ್ಕಳ ಮೂಲದ ಆನಂದ್ ಮಂಜುನಾಥ್ ದೇವಾಡಿಗ(48), ಬಾಬು ಅಣ್ಣಪ್ಪ ನಾಯಕ(49) ಬಂಧಿತರು.
ತಾಲೂಕಿನ ಟಗರಪುರ ಸಮೀಪ ಕಾರಿನಲ್ಲಿ ಅಪರಿಚಿತರು ತಮಿಳುನಾಡಿನಲ್ಲಿ ತಿಮಿಂಗಲ ವಾಂತಿ ಮಾರಾಟ ಮಾಡಲು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ತಿಳಿದ ಅರಣ್ಯ ಸಂಚಾರ ದಳದ ಸಬ್ ಇನ್ಸ್ ಪೆಕ್ಟರ್ ವಿಜಯರಾಜ್ ಮತ್ತು ತಂಡದವರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ತಿಮಿಂಗಿಲ ವಾಂತಿ, 1 ಆಲ್ಲೋ ಕಾರು, 7000 ರೂ. ನಗದು, ಎರಡು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ವಿಚಾರಣೆ ವೇಳೆ ಆರೋಪಿಗಳು ಭಟ್ಕಳದ ಸಮೀಪ ಸಮುದ್ರದ ತೀರದಲ್ಲಿ ತಿಮಿಂಗಲ ವಾಂತಿ ಸಿಕ್ಕಿದ್ದು, ಇದನ್ನು ಮಾರಾಟ ಮಾಡಲು ಕೊಯಮತ್ತೂರಿನ ಕಡೆಗೆ ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Saval TV on YouTube