ಮನೆ ಮನರಂಜನೆ ಅರ್ಧಶತಕ ಬಾರಿಸಿದ `ಬಡವ ರಾಸ್ಕಲ್​’

ಅರ್ಧಶತಕ ಬಾರಿಸಿದ `ಬಡವ ರಾಸ್ಕಲ್​’

0

ನಟ ರಾಕ್ಷಸ ಡಾಲಿ ಧನಂಜಯ ಅಭಿನಯದ ’ಬಡವ ರಾಸ್ಕಲ್’ ಚಿತ್ರವನ್ನು ಪ್ರೇಕ್ಷಕರು ಗೆಲ್ಲಿಸಿದ್ದಾರೆ.

ಕಳೆದ ಡಿಸೆಂಬರ್ 24 ಕ್ಕೆ ಡಾಲಿಯ ‘ಬಡವ ರಾಸ್ಕಲ್’ ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗಿತ್ತು‌.‌ ಆದರೆ, ಈ ಸಿನಿಮಾ ರಿಲೀಸ್ ಆದ ಒಂದೇ ವಾರಕ್ಕೆ ಕೊರೋನಾ ಮೂರನೇ ಅಲೆ ರಾಜ್ಯಕ್ಕೆ ಅಪ್ಪಳಿಸಿತ್ತು‌. ಆದರೂ, ‘ಬಡವ ರಾಸ್ಕಲ್’ ಚಿತ್ರ ಯಶಸ್ವಿಯಾಗಿ 50ದಿನಗಳನ್ನು ಪೂರೈಸಿದೆ. ಡಾಲಿ ಧನಂಜಯ  ಚಿತ್ರರಂಗಕ್ಕೆ ಬಂದು ಬರೋಬರಿ  9 ವರ್ಷಗಳ ನಂತರ ನಾಯಕನಾಗಿ ಗೆಲುವಿನ ಹೂಮಾಲೆ ದಕ್ಕಿದೆ.
ಈ ಸಂಭ್ರಮದ ಕ್ಷಣವನ್ನು ಡಾಲಿ ನಿಜವಾಗಿಯೂ ಸಂಭ್ರಮಿಸಿದ್ದಾರೆ. ಡಾಲಿ ಧನಂಜಯ ಖಳನಟನಾಗಿ ದುಡಿದ ಎಲ್ಲಾ ಹಣವನ್ನು  ತನ್ನ ಸುತ್ತ ಇದ್ದಂತಹ ಪ್ರತಿಭೆಗಳ ಮೇಲೆ ಖರ್ಚು ಮಾಡಿದರು. ಸಾಲ ಸೋಲ ಮಾಡಿ ಡಾಲಿ ‘ಬಡವ ರಾಸ್ಕಲ್’ ಸಿನಿಮಾ ಮಾಡಿದ್ದರು. ಶ್ರಮಕ್ಕೆ ತಕ್ಕ ಪ್ರತಿಫಲ ಇದ್ದೆ ಇರುತ್ತೆ ಅನ್ನೋ ಮಾತಿನಂತೆ ಡಾಲಿಗೆ ‘ಬಡವ ರಾಸ್ಕಲ್’ ಚಿತ್ರ ಕೈ ಬಿಡಲಿಲ್ಲ.  ಜೊತೆಗೆ ತಾನು ನಂಬಿದ ಸ್ನೇಹತರ ಪ್ರತಿಭೆಗಳು ಡಾಲಿಗೆ ನಾಯಕನಾಗಿ ಗೆಲುವು ತಂದು ಕೊಟ್ಟಿದ್ದು, ಈ ಗೆಲುವನ್ನು ಡಾಲಿ ಸಂಭ್ರಮಿಸಿದ್ದಾರೆ.
ಬಡವ ರಾಸ್ಕಲ್ ಚಿತ್ರ ಅರ್ಧ ಶತಕ ಬಾರಿಸ್ತಿದಂತೆ ಬಡವನ ಗೆಲುವಿಗೆ ತೆರೆಹಿಂದೆ ತೆರೆ ಮುಂದೆ ಶ್ರಮಿಸಿದ ಎಲ್ಲರನ್ನೂ ಒಂದುಗೂಡಿಸಿ ನೆನಪಿನ ಕಾಣಿಕೆ ಕೊಟ್ಟು ಆತ್ಮೀಯವಾಗಿ ಗೌರವಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಕಣ್ಮರೆಯಾಗ್ತಿದ್ದ ಹಳೆಯ ಸುಂದರ ದಿನಗಳನ್ನು ಕಣ್ಮುಂದೆ ತಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ರಿಲೀಸ್ ಆದ ಮೂರೇ ದಿನಕ್ಕೆ ಗೆದ್ದರು ಸರಿ ಸೋತರು ಸರಿ ಸಕ್ಸಸ್ ಮೀಟ್ ಅಂತ ಮಾಡಿ ಮಾಧ್ಯಮಗಳ ಮೂಲಕ ಚಿತ್ರದಲ್ಲಿ ಕೆಲಸ ಮಾಡಿದವರಿಗೆ ಧನ್ಯವಾದ ಸಲ್ಲಿಸುವ ಸಂಸ್ಕೃತಿ ಟ್ರೆಂಡ್ ಆಗಿದೆ. ಆದರೆ, ಡಾಲಿ  ಈ ಟ್ರೆಂಡ್ ಗೆ ಶರಣಾಗದೆ  ಬಡವನ ಬಳಗವನ್ನು ಒಂದು ಕಡೆ ಸೇರಿಸಿ ಅದ್ದೂರಿ ಕಾರ್ಯಕ್ರಮ ಮಾಡುವ ಮೂಲಕ ಸಿನಿಮಾ ತಂಡವನ್ನು ಗೌರವಿಸಿದ್ದಾರೆ.