ಶ್ರೀರಂಗಪಟ್ಟಣ:ಬಟ್ಟೆ ಒಗೆಯಲು ಹೋದ ಇಬ್ಬರು ಯುವತಿಯರು ಕಾಲು ಜಾರಿ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಕಾಳೇನಹಳ್ಳಿ ಶೆಡ್ಡು ಗ್ರಾಮದ ಬಳಿ ನಡೆದಿದೆ.
ಗ್ರಾಮದ ಲೀನಾಮತಿ (೧೯) ಹಾಗೂ ಮೀನಾ (೧೭) ಮೃತ ಯುವತಿಯರು.
ಘಟನೆ ವಿವರ:ಹಲವಾರು ವರ್ಷಗಳ ಹಿಂದೆ ಕಲ್ಲು ಕೋರೆ ಮಾಡುತ್ತಿದ್ದ ಈ ಹಳ್ಳದಲ್ಲಿ ನೀರು ತುಂಬಿರುವು
ದರಿಂದ ಅಕ್ಕ ಪಕ್ಕ ಕೆಲಸ ಮಾಡುವ ಕುಟುಂಬಗಳು ಈ ಸ್ಥಳದಲ್ಲೇ ಬಟ್ಟೆ ಒಗೆಯುತ್ತಿದ್ದರು.ಪ್ರತಿ ಬಾರಿಯಂತೆ ಶುಕ್ರವಾರ ೪ ಮಂದಿ ಬಟ್ಟೆ ಒಗೆಯಲು ಹೋದ ಸಮಯಕ್ಕೆ ೬ ವರ್ಷದ ಮಗು ಕಾಲು ಜಾರಿ ನೀರಿಗೆ ಬಿದ್ದಿದೆ.ಅದನ್ನ ಮೇಲೆತ್ತಿ ರಕ್ಷಣೆ ಮಾಡಲು ಕೂಗಿಕೊಂಡು ಹೋಗಿ ಒಬ್ಬರಿಗೊಬ್ಬರು ಹಿಡಿದುಕೊಳ್ಳುವಾಗ ೪ ಮಂದಿಯು ಕೂಡ ನೀರಲ್ಲಿ ಬಿದ್ದಿದ್ದಾರೆ.ಪಕ್ಕದಲ್ಲಿ ಕಲ್ಲು ಕುಳಿ ಮಾಡುವ ಕಾರ್ಮಿಕರು ಬಂದು ಇಬ್ಬರನ್ನು ರಕ್ಷಣೆ ಮಾಡಿದ್ದು ಮತ್ತಿಬ್ಬರು ನೀರಲ್ಲೇ ಮುಳುಗಿ ಪ್ರಾಣ ಬಿಟ್ಟಿದ್ದಾರೆ.ಇವರೆಲ್ಲರೂ ಕೋರೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಕುಟುಂಬದ ಮಕ್ಕಳು.
ಸ್ಥಳಿಯರಿಂದ ಪೊಲೀಸರಿಗೆ ಮಾಹಿತಿ ತಿಳಿದು ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್‌ಠಾಣೆಯ ಸಿಪಿಐ ಬಿ.ಜಿ.ಕುಮಾರ್ ಆಗಮಿಸಿ ಸ್ಥಳ ಪರಿಶೀಲಿಸಿ, ಶವಗಳನ್ನು ನೀರಿನಿಂದ ಮೇಲೆತ್ತಿ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿರಿಸಿದ್ದಾರೆ.ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.