ಮನೆ ರಾಷ್ಟ್ರೀಯ ಉಗ್ರರ ಗ್ರೆನೇಡ್ ದಾಳಿಗೆ ಇಬ್ಬರು ಕಾರ್ಮಿಕರು ಬಲಿ

ಉಗ್ರರ ಗ್ರೆನೇಡ್ ದಾಳಿಗೆ ಇಬ್ಬರು ಕಾರ್ಮಿಕರು ಬಲಿ

0

ಶ್ರೀನಗರ(Srinagar): ಉಗ್ರರು ನಡೆಸಿದ ಗ್ರೆನೇಡ್ ದಾಳಿಗೆ ಉತ್ತರ ಪ್ರದೇಶ ಮೂಲದ ಇಬ್ಬರು ಕಾರ್ಮಿಕರು ಬಲಿಯಾಗಿದ್ದಾರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌’ನ ಹರ್ಮನ್‌ ಪ್ರದೇಶದಲ್ಲಿ ನಡೆದಿದೆ.

ಹತ್ಯೆಯಾದವರು ಉತ್ತರ ಪ್ರದೇಶದ ಕನೂಜ್‌ನ ಕಾರ್ಮಿಕರು. ದಾಳಿ ನಡೆಸಿದ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.

ಕಾಶ್ಮೀರಿ ಪಂಡಿತರನ್ನು ಗುಂಡಿಕ್ಕಿ ಹತ್ಯೆಗೈದು ಒಂದು ದಿನದಲ್ಲೇ ಈ ದಾಳಿ ನಡೆದಿದೆ. ಮೊನೀಶ್‌ ಕುಮಾರ್‌ ಮತ್ತು ರಾಮ್‌ ಸಾಗರ್‌ ಮೃತ ದುರ್ದೈವಿಗಳು. ಹ್ಯಾಂಡ್‌ಮೇಡ್‌ ಗ್ರೆನೇಡ್‌ ದಾಳಿಯಿಂದ ಇಬ್ಬರು ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ ಎಂದು ಕಾಶ್ಮೀರ ವಲಯದ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಅ.15ರಂದು ಕಾಶ್ಮೀರಿ ಪಂಡಿತ್‌ ಕೃಷ್ಣನ್‌ ಭಟ್‌ ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು.