ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 15 ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಟೀಚಿಂಗ್ ಫೀಲ್ಡ್ ನಲ್ಲಿ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಏಪ್ರಿಲ್ 24, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಹುದ್ದೆಯ ಮಾಹಿತಿ:
ಅಗ್ರಿಕಲ್ಚರಲ್ ಎಕನಾಮಿಕ್ಸ್- 2
ಅಗ್ರಿಕಲ್ಚರಲ್ ಎಂಟೊಮಾಲಜಿ- 2
ಅಗ್ರಿಕಲ್ಚರಲ್ ಮಾರ್ಕೆಟಿಂಗ್ ಕೋ-ಆಪರೇಷನ್- 2
ಅಗ್ರಿಕಲ್ಚರಲ್ ಮೈಕ್ರೊಬಯಾಲಜಿ- 2
ಆಗ್ರೋನಮಿ- 2
ಜೆನೆಟಿಕ್ಸ್ ಪ್ಲಾಂಟ್ಸ್ ಬ್ರೀಡಿಂಗ್- 2
ಫಿಜಿಕಲ್ ಎಜುಕೇಷನ್- 1
ಸಾಯಿಲ್ ಸೈನ್ಸ್ & ಅಗ್ರಿಕಲ್ಚರಲ್ ಕೆಮಿಸ್ಟ್ರಿ- 2
ವಿದ್ಯಾರ್ಹತೆ:
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ, ಪಿಎಚ್.ಡಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 42 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳು- 1 ವರ್ಷ
SC/ST ಅಭ್ಯರ್ಥಿಗಳು- 3 ವರ್ಷ
ಅರ್ಜಿ ಶುಲ್ಕ:
ಮಾಜಿ ಸೈನಿಕ, PWD ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ
SC/ST ಅಭ್ಯರ್ಥಿಗಳು- 1000 ರೂ.
ಸಾಮಾನ್ಯ ಅಭ್ಯರ್ಥಿಗಳು- 2000 ರೂ.
ಪಾವತಿಸುವ ಬಗೆ- ಆಫ್ ಲೈನ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ವೇತನ:
ಮಾಸಿಕ ₹ 57,700-1,82,400
ಉದ್ಯೋಗದ ಸ್ಥಳ:
ಬೆಂಗಳೂರು