ಮನೆ ರಾಜ್ಯ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ: ಟೋಲ್ ದರ ಹೆಚ್ಚಳ ಆದೇಶ ವಾಪಸ್

ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ: ಟೋಲ್ ದರ ಹೆಚ್ಚಳ ಆದೇಶ ವಾಪಸ್

0

ರಾಮನಗರ: ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ನ ಟೋಲ್ ದರ ಹೆಚ್ಚಳವನ್ನು ಮುಂದೂಡಿರುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಿಳಿಸಿದೆ.

ಇಂದಿನಿಂದ ಹೆದ್ದಾರಿ ಟೋಲ್ ದರವನ್ನು ಶೇ 22 ರಷ್ಟು ಹೆಚ್ಚಳ ಮಾಡಿ ಪ್ರಾಧಿಕಾರವು ಆದೇಶ ಹೊರಡಿಸಿತ್ತು.

ಮಾ. 14ರಿಂದ ಈ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಆರಂಭ ಆಗಿದ್ದು, ಎರಡು ವಾರದಲ್ಲೇ ಟೋಲ್ ದರ ಏರಿಸಿದ್ದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಯನ್ನು ಸದ್ಯಕ್ಕೆ ಕೈಬಿಟ್ಟಿರುವುದಾಗಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದಿನ ಲೇಖನಬೆಂಗಳೂರಿನ ಕೃಷಿ ವಿವಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಕೆನಡಾದಿಂದ ಅಮೇರಿಕಾಕ್ಕೆ ಅಕ್ರಮ ಪ್ರವೇಶಕ್ಕೆ ಯತ್ನ: ಭಾರತೀಯರು ಸೇರಿದಂತೆ 8 ಮಂದಿ ಸಾವು