Saval TV on YouTube
ಉಡುಪಿ(Udupi): ಮೀನುಗಾರಿಕೆಗೆ ತೆರಳಿದ್ದ ದೋಣಿ ಉಚ್ಚಿಲ ಸಮೀಪದ ಕಡಲಿನಲ್ಲಿ ಸೋಮವಾರ ಮುಳುಗಡೆಯಾಗಿದ್ದು, ಏಳು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಉಚ್ಚಿಲದ ನಿವಾಸಿ ವಿಮಲಾ ಸಿ. ಪುತ್ರನ್ ಮಾಲೀಕತ್ವದ ಶ್ರೀ ಗಿರಿಜಾ ದೋಣಿ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿತ್ತು. ಹವಾಮಾನ ವೈಪರೀತ್ಯದಿಂದ ಕಡಲು ಪ್ರಕ್ಷುಬ್ಧಗೊಂಡಿರುವ ಕಾರಣ ದೈತ್ಯ ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿ ಸಿಲುಕಿ ಮುಳುಗಡೆಯಾಗಿದೆ.
ಸಮೀಪದಲ್ಲಿದ್ದ ಮೀನುಗಾರರು ನೆರವಿಗೆ ಧಾವಿಸಿ ಅಪಾಯದಲ್ಲಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ.
ಬೋಟ್’ನಲ್ಲಿದ್ದ ಬಲೆ ಹಾಗೂ ಹೈ ಸ್ಪೀಡ್ ಎಂಜಿನ್ ಸಮುದ್ರ ಪಾಲಾಗಿದ್ದು 6.5 ಲಕ್ಷ ನಷ್ಟ ಸಂಭವಿಸಿದೆ ಎಂದು ಮಾಲೀಕರು ತಿಳಿಸಿದ್ದಾರೆ.
ಕಾಪು ಶಾಸಕ ಲಾಲಾಜಿ ಮೆಂಡನ್ ಮೀನುಗಾರರನ್ನು ಭೇಟಿ ನೀಡಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.














