ಮನೆ ಕಾನೂನು ಉಡುಪಿ: ಅಪಘಾತದಲ್ಲಿ ಪಾದಚಾರಿ ಸಾವು: ಆರೋಪಿಗೆ ಜೈಲು ಶಿಕ್ಷೆ

ಉಡುಪಿ: ಅಪಘಾತದಲ್ಲಿ ಪಾದಚಾರಿ ಸಾವು: ಆರೋಪಿಗೆ ಜೈಲು ಶಿಕ್ಷೆ

0

ಉಡುಪಿ(Udupi): ಅತಿವೇಗ ಹಾಗೂ ಅಜಾಗರೂಕತೆಯಿಂದ ಲಾರಿ ಚಲಾಯಿಸಿ ಪಾದಚಾರಿಗೆ ಡಿಕ್ಕಿ ಹೊಡೆಸಿ ಸಾವಿಗೆ ಕಾರಣವಾದ ಆರೋಪಿಗೆ ನಗರದ 1ನೇ ಹೆಚ್ಚುವರಿ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

2021ರ ಫೆ. 28ರಂದು ಮಂಗಳೂರಿನ ಶಾಂತಿಗುಡ್ಡೆ ಮನೆ ನಿವಾಸಿ ಅಬೂಬಕ್ಕರ್ ಅವರು ಬ್ರಹ್ಮಾವರ ತಾಲೂಕು ಹಲುವಳ್ಳಿ ಗ್ರಾಮದ ಹೆಬ್ರಿ-ಬ್ರಹ್ಮಾವರ ಮುಖ್ಯ ರಸ್ತೆಯ ಧಾರಣ-ಕಂಬಳ ಎಂಬಲ್ಲಿ ಕಂಟೈನರ್ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಕೃಷ್ಣ ಪುತ್ರನ್ ಅವರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರ ತೊಡೆ, ಕಾಲುಗಳಿಗೆ ಹಾಗೂ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಮೃತಪಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಬ್ರಹ್ಮಾವರ ಠಾಣೆಯ ವೃತ್ತ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1ನೇ ಹೆಚ್ಚುವರಿ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಅವರು ಆರೋಪಿ ಅಬೂಬಕ್ಕರ್’ನಿಗೆ 2 ವರ್ಷ 6 ತಿಂಗಳ ಕಾರಾಗೃಹ ವಾಸ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮೋಹಿನಿ ಕೆ. ವಾದ ಮಂಡಿಸಿದ್ದಾರೆ.

ಹಿಂದಿನ ಲೇಖನಪರಿಸರ ಸ್ನೇಹಿಯಾದ ಸ್ವಚ್ಛ ಇಂಧನ ಬಳಕೆ ಅತಿಮುಖ್ಯ: ವೈ.ಬಿ.ರಾಮಕೃಷ್ಣ
ಮುಂದಿನ ಲೇಖನಸೆಕ್ಷನ್ 3 ಅಧಿಕೃತ ರಹಸ್ಯ ಕಾಯಿದೆಯಡಿ ಪೊಲೀಸ್ ಠಾಣೆಯೊಳಗೆ ವಿಡಿಯೋ ಚಿತ್ರೀಕರಣ “ಬೇಹುಗಾರಿಕೆ” ಅಲ್ಲ: ಬಾಂಬೆ ಹೈಕೋರ್ಟ್