ಉಡುಪಿ : ಮೀನುಗಾರಿಕೆಗೆ ತೆರಳಿದ್ದ ಸ್ಥಳೀಯ ಮೀನುಗಾರರ ದೋಣಿ ಮಗುಚಿಬಿದ್ದು ಮೀನುಗಾರರು ನಾಪತ್ತೆಯಾಗಿರೋ ಘಟನೆ ಗಂಗೊಳ್ಳಿಯ ಮಡಿ ಲೈಟ್ ಹೌಸ್ ಬಳಿ ಇಂದು ಸಂಭವಿಸಿದೆ.
ನೀರಿನ ರಭಸಕ್ಕೆ ದೋಣಿ ಮುಳುಗಿದ್ದು, ನೋಡನೋಡ್ತಿದ್ದಂತೆ ಮೀನುಗಾರರು ನೀರುಪಾಲಾಗಿದ್ದಾರೆ.ನಾಪತ್ತೆಯಾದವರನ್ನು ರೋಹಿತ್ ಖಾರ್ವಿ(38), ಸುರೇಶ ಖಾರ್ವಿ(45) ಜಗನ್ನಾಥ್ ಖಾರ್ವಿ(43) ಎಂದು ಗುರುತಿಸಲಾಗಿದೆ.ಓರ್ವ ಮೀನುಗಾರ ಬಚಾವ್ ಆಗಿದ್ದಾನೆ
ಗಂಗೊಳ್ಳಿ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು ಸಮುದ್ರದಲ್ಲಿ ಕಡಲ ಅಬ್ಬರ ಜೋರಾಗಿದೆ.ಮೀನುಗಾರರ ಹಿತದೃಷ್ಟಿಯಿಂದ ನೀರಿಗೆ ಇಳಿಯದಂತೆ ಹೇಳಲಾಗಿತ್ತು. ಆದ್ರೆ ನೀರಿಗೆ ಇಳಿದ ಪರಿಣಾಮ ಘಟನೆ ನಡೆದಿದೆ. ಸ್ಥಳೀಯ ಸಿಬ್ಬಂದಿಯಿಂದ ಓರ್ವವನ್ನು ರಕ್ಷಣೆ ಮಾಡಲಾಗಿದ್ದು ಮೂವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಯುತ್ತಿದೆ.














