ಮನೆ ಸುದ್ದಿ ಜಾಲ ಉಕ್ರೇನ್-ರಷ್ಯಾ ಸಂಧಾನ ಯಶಸ್ವಿ: ಕೀವ್‍ನಲ್ಲಿ ಸೇನಾ ಚಟುವಟಿಕೆ ಕಡಿಮೆ ಮಾಡಲು ರಷ್ಯಾ ಸಮ್ಮತಿ

ಉಕ್ರೇನ್-ರಷ್ಯಾ ಸಂಧಾನ ಯಶಸ್ವಿ: ಕೀವ್‍ನಲ್ಲಿ ಸೇನಾ ಚಟುವಟಿಕೆ ಕಡಿಮೆ ಮಾಡಲು ರಷ್ಯಾ ಸಮ್ಮತಿ

0

ಇಸ್ತಾಂಬುಲ್: ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಧಾನ ಯಶಸ್ವಿಯಾಗಿದ್ದು ರಾಜಧಾನಿ ಕೈವ್ ಸುತ್ತಮುತ್ತ, ಉತ್ತರ ಉಕ್ರೇನ್‌ನಲ್ಲಿ ರಷ್ಯಾ ತನ್ನ ಮಿಲಿಟರಿ ಚಟುವಟಿಕೆಯನ್ನು ‘ಅಮೂಲಾಗ್ರವಾಗಿ’ ಕಡಿಮೆ ಮಾಡಲಾಗುವುದು ಎಂದು ಮಾಸ್ಕೋದ ಸಂಧಾನಕಾರರು ಮಂಗಳವಾರ ತಿಳಿಸಿದ್ದಾರೆ.

ಉಕ್ರೇನ್‌ನ ತಟಸ್ಥತೆ ಮತ್ತು ಪರಮಾಣು-ಅಲ್ಲದ ಸ್ಥಿತಿಯ ಕುರಿತು ಒಪ್ಪಂದವನ್ನು ಸಿದ್ಧಪಡಿಸುವ ಮಾತುಕತೆಗಳು ಪ್ರಾಯೋಗಿಕ ಕ್ಷೇತ್ರಕ್ಕೆ ಸ್ಥಳಾಂತರಗೊಂಡಿವೆ. ಕೈವ್ ಮತ್ತು ಪ್ರದೇಶಗಳಲ್ಲಿ ಮಿಲಿಟರಿ ಚಟುವಟಿಕೆಯನ್ನು ಆಮೂಲಾಗ್ರವಾಗಿ ಕಡಿಮೆ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ರಷ್ಯಾದ ಉಪ ರಕ್ಷಣಾ ಸಚಿವ ಅಲೆಕ್ಸಾಂಡರ್ ಫೋಮಿನ್ ಹೇಳಿದರು.

ಟರ್ಕಿಯ ಇಸ್ತಾನ್ ಬುಲ್ ನಲ್ಲಿ ನಡೆದ ಉಭಯ ರಾಷ್ಟ್ರಗಳ ನಾಯಕರ ಮಾತುಕತೆ ಫಲಪ್ರದವಾಗಿದ್ದು ರಷ್ಯಾದೊಂದಿಗಿನ ಸಂಘರ್ಷವನ್ನು ಪರಿಹರಿಸಲು ಟರ್ಕಿಯಲ್ಲಿ ಮಂಗಳವಾರ ನಡೆದ ಮಾತುಕತೆಯಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಇಂದಿನ ಸಭೆಯ ಫಲಿತಾಂಶಗಳು ಉಭಯ ದೇಶಗಳ ಅಧ್ಯಕ್ಷರ ಸಭೆಗೆ ಮುನ್ನುಡಿ ಬರೆದಿವೆ ಎಂದು ಉಕ್ರೇನಿಯನ್ ಸಮಾಲೋಚಕ ಡೇವಿಡ್ ಅರಾಖಮಿಯಾ ಹೇಳಿದರು.

ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ತಿಂಗಳ ಬಳಿಕ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ ಶಾಂತಿ ಮಾತುಕತೆಯಲ್ಲಿ ಉಕ್ರೇನಿಯನ್ ಪ್ರತಿನಿಧಿಗಳೊಂದಿಗಿನ ಅರ್ಥಪೂರ್ಣ ಪ್ರಗತಿಯನ್ನು ರಷ್ಯಾದ ಸಮಾಲೋಚಕರು ಸ್ವಾಗತಿಸಿದರು. ಯುದ್ಧ ಪೀಡಿತ ಉಕ್ರೇನ್ ನೆಲದಲ್ಲಿ ಮಾನವೀಯ ಪರಿಸ್ಥಿತಿ ಮತ್ತು ರಷ್ಯಾ ಒತ್ತಾಯ ಮಾಡುತ್ತಿರುವ ವಿಷಯಗಳಲ್ಲಿ ಉಕ್ರೇನ್ ತಟಸ್ಥ ನೀತಿ ತಾಳುವ ಬಗ್ಗೆ ಇಂದಿನ ಸಭೆ ಕೇಂದ್ರೀಕೃತವಾಗಿತ್ತು. ಉಕ್ರೇನ್ ನ್ಯಾಟೋ ಸದಸ್ಯತ್ವ ಪಡೆಯುವ ಉದ್ದೇಶದಿಂದ ಹಿಂದೆ ಸರಿದಿದೆ.  ಶೀಘ್ರದಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಾತುಕತೆ ನಡೆಸೋ ಸಾಧ್ಯತೆಯಿದೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ 34 ದಿನ ದಾಟಿದೆ. ಇದು ಎರಡನೇ ಮಹಾಯುದ್ಧದ ನಂತರದ ಅತಿದೊಡ್ಡ ಯುರೋಪಿಯನ್ ಸಂಘರ್ಷವಾಗಿದೆ.

ಹಿಂದಿನ ಲೇಖನಹಿರಿಯ ವಕೀಲರು ಕ್ಲೈಂಟ್‌ಗಾಗಿ ಜೂನಿಯರ್ ವಕೀಲರೊಂದಿಗೆ ಜಂಟಿ ವಕಾಲತ್ ಸಲ್ಲಿಸುವಲ್ಲಿ ಯಾವುದೇ ಅಕ್ರಮವಿಲ್ಲ: ಕೇರಳ ಹೈಕೋರ್ಟ್
ಮುಂದಿನ ಲೇಖನ9 ದಿನದಲ್ಲಿ 8 ಬಾರಿ ತೈಲ ದರ ಏರಿಕೆ