ಮನೆ ಅಪರಾಧ ಕೇರಳದಲ್ಲಿ ಮೈಸೂರಿನ ಖ್ಯಾತ ನಾಟಿ ವೈದ್ಯನ ಕೊಲೆ: 3 ವರ್ಷಗಳ ಬಳಿಕ ಪ್ರಕರಣ ಬೆಳಕಿಗೆ

ಕೇರಳದಲ್ಲಿ ಮೈಸೂರಿನ ಖ್ಯಾತ ನಾಟಿ ವೈದ್ಯನ ಕೊಲೆ: 3 ವರ್ಷಗಳ ಬಳಿಕ ಪ್ರಕರಣ ಬೆಳಕಿಗೆ

0

ಮೈಸೂರು (Mysuru)- ಮೈಸೂರಿನ ನಾಟಿ ವೈದ್ಯ ಶಹಬಾಷ್ ಷರೀಫ್ ನಿಗೂಢ ನಾಪತ್ತೆ ಪ್ರಕರಣ ಕೊನೆಗೂ ಬಯಲಾಗಿದೆ. ನಾಟಿ ವೈದ್ಯನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಮೈಸೂರಿನಲ್ಲಿ 2019 ರ ಆಗಸ್ಟ್ ನಲ್ಲಿ ನಾಟಿ ವೈದ್ಯ ಶಹಬಾಷ್ ಷರೀಫ್ ಅವರು ನಿಗೂಢವಾಗಿ ನಾಪತ್ತೆಯಾಗಿದ್ದನು. ಈ ಸಂಬಂಧ ಶಹಬಾಷ್ ಷರೀಫ್ ಕುಟುಂಬಸ್ಥರು ಮೈಸೂರಿನ ಆಲನಹಳ್ಳಿ ಪೋಲಿಸ್ ಸ್ಟೇಷನ್ ಗೆ ದೂರು ನೀಡಿದ್ದರು. ಮೂರು ವರ್ಷವಾದರೂ ಶಹಬಾಷ್ ಷರೀಫ್ ಪತ್ತೆಯಾಗಿರಲಿಲ್ಲ. ಇದೀಗ ಷರೀಫ್ ನಾಪತ್ತೆ ಹಾಗೂ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಿನಿಮಾ ಕಥೆಯನ್ನು ಮೀರಿಸುವಂತಿದೆ.
ಕೇರಳದ ಮಲಪ್ಪುರಂನ ನೀಲಾಂಬರಂನಲ್ಲಿ ಶಹಬೀನ್ ಅಶ್ರಫ್ ಎಂಬಾತನ ಮನೆಯಲ್ಲಿ ದರೋಡೆ ನಡೆದಿತ್ತು. ಏಳು ಜನರಿದ್ದ ತಂಡ ಶಹಬೀನ್ ಅಶ್ರಫ್ ಮನೆಗೆ ನುಗ್ಗಿ 7 ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಶಹಬೀನ್ ಅಶ್ರಫ್ ನೀಲಾಂಬರಂ ಪೋಲಿಸ್ ಸ್ಟೇಷನ್ ಗೆ ದೂರು ನೀಡಿದ್ದನು. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಶಹಬೀನ್ ಅಶ್ರಫ್ ಬರೋಬ್ಬರಿ ಸುಮಾರು 300 ಕೋಟಿ ರೂಪಾಯಿ ಆಸ್ತಿಯ ಒಡೆಯ.
ಕೇರಳ ರಾಜಧಾನಿ ತಿರುವಂತಪುರಂನ ಸಚಿವಾಲಯದ ಮುಂದೆ ನಾಲ್ವರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ಮಾಡುತ್ತಾರೆ. ಈ ವೇಳೆ ತಳ್ಳಾಟ ನೂಕಾಟದಲ್ಲಿ ಅವರಲ್ಲಿದ್ದ ಒಂದು ಪೆನ್ ಡ್ರೈವ್ ಪೋಲಿಸರಿಗೆ ಸಿಗುತ್ತದೆ. ಆ ಪೆನ್ ಡ್ರೈವ್ ತೆಗೆದು ನೋಡಿದಾಗ ಪೋಲಿಸರಿಗೆ ಸ್ಫೋಟಕ ಮಾಹಿತಿಗಳು ಬಯಲಾಗುತ್ತದೆ. ಜೊತೆಗೆ ಆ ಪೆನ್ ಡ್ರೈವ್ ನಲ್ಲಿ ಶಹಬೀನ್ ಅಶ್ರಫ್ ನ ಭೂಗತ ಲೋಕದ ವ್ಯವಹಾರದ ಬಗ್ಗೆ ಕೆಲವು ಮಾಹಿತಿ ಸಿಗುತ್ತದೆ.
ಪೆನ್ ಡ್ರೈವ್ ಮಾಹಿತಿ ಸಿಕ್ಕ ಕೂಡಲೇ ಪೋಲಿಸರು ಆತ್ಮಹತ್ಯೆಗೆ ಯತ್ನಿಸಿದ ಪ್ರತಿಭಟನಾಕಾರರನ್ನು ಬಂಧಿಸಿ ತಮ್ಮ ಟ್ರೀಟ್ ಮೆಂಟ್ ಕೊಟ್ಟಾಗ ಆತ ಶಹಬಾನ್ ಅಶ್ರಫ್ ಹಾಗೂ ಮೈಸೂರಿನಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದ ಶಹಬಾಷ್ ಷರೀಫ್ ಕೊಲೆ ಪ್ರಕರಣದ ಸುಳಿವು ಸಿಗುತ್ತದೆ.
ಶಹಬಾನ್ ಷರೀಫ್ ಮನೆಯಲ್ಲಿ ದರೋಡೆ ಆಗಿರುವ ವಿಚಾರವನ್ನು ತಳಕು ಹಾಕಿದ ಪೋಲಿಸರು ಶಹಬೀನ್ ಅಶ್ರಫ್ ನನ್ನು ವಶಕ್ಕೆ ಪಡೆಯುತ್ತಾರೆ. ತರುವಾಯ ತಿರುವಂತನಪುರಂ ಪೋಲಿಸರು ಇಬ್ಬರನ್ನು ನೀಲಾಂಬರಂ ಪೋಲಿಸರ ವಶಕ್ಕೆ ನೀಡುತ್ತಾರೆ.
ನೀಲಾಂಬರಂ ಪೋಲಿಸರು ಶಹಬೀನ್ ಅಶ್ರಫ್ ಗೆ ಬೆಂಡ್ ಎತ್ತಿದ್ದಾಗ ಶಹಭಾಷ್ ಷರೀಫ್ ಕೊಲೆ ಮಾಡಿರುವ ಬಗ್ಗೆ ಬಾಯ್ಬಿಡುತ್ತಾನೆ.
2019 ರ ಆಗಸ್ಟ್ ನಲ್ಲಿ ಮೈಸೂರಿಗೆ ಬಂದ ಶಹಬೀನ್ ಅಶ್ರಫ್ ಮತ್ತು ಏಳು ಜನರ ತಂಡ ಕುಟುಂಬಸ್ಥರಿಗೆ ಔಷಧ ಕೊಡುವಂತೆ ಕೋರಿ ಕಾರ್ ಬಳಿ ಕರೆ ತರುತ್ತಾರೆ. ಕಾರಿನಲ್ಲಿ ಶಹಬಾಷ್ ಷರೀಫ್ ನನ್ನು ಕಿಡ್ನಾಪ್ ಮಾಡಿ ನೇರವಾಗಿ ಕೇರಳಗೆ ಕರೆದುಕೊಂಡು ಹೋಗುತ್ತಾರೆ.
ಕೇರಳದ ನೀಲಾಂಬರಂನಲ್ಲಿರುವ ತನ್ನ ಮನೆಯಲ್ಲಿ ಶಹಬೀನ್ ಅಶ್ರಫ್ ಕಿಡ್ನಾಪ್ ಮಾಡಿದ್ದ ಶಹಬಾಷ್ ಷರೀಫ್ ನನ್ನು ಕೂಡಿ ಹಾಕುತ್ತಾನೆ. ನಾಟಿ ವೈದ್ಯಕ್ಕೆ ಸಂಬಂಧಿಸಿದ ಸಿಕ್ರೇಟ್ ತಿಳಿಸುವಂತೆ ಚಿತ್ರ ಹಿಂಸೆ ಕೊಡುತ್ತಾರೆ. ಕೈ ಕಾಲಿಗೆ ಕಬ್ಬಿಣದ ಸರಪಳಿ ಕಟ್ಟಿ ಹಿಂಸೆ ನೀಡುತ್ತಿರುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಶಹಬಾಷ್ ಷರೀಫ್ ತನ್ನ ನಾಟಿ ವೈದ್ಯಕ್ಕೆ ಸಂಬಂಧಿಸಿದ ಸಿಕ್ರೇಟ್ ಬಿಟ್ಟು ಕೊಡಲಿಲ್ಲ. ಇದರಿಂದ ಮತ್ತಷ್ಟು ಚಿತ್ರ ಹಿಂಸೆ ನೀಡಿದರು. ಇವರ ಚಿತ್ರಹಿಂಸೆ ತಾಳಲಾರದೆ 60 ವರ್ಷದ ಶಹಬಾಷ್ ಷರೀಫ್ 2020 ರ ಅಕ್ಟೋಬರ್ ನಲ್ಲಿ ಸಾವನ್ನಪ್ಪುತ್ತಾನೆ.
ತರುವಾಯ ತಾವು ಸಿಕ್ಕಿ ಬೀಳಬಾರದೆಂದು ಶಹಬೀನ್ ಅಶ್ರಫ್ ಅಂಡ್ ಗ್ಯಾಂಗ್ ಒಂದು ಪ್ಲಾನ್ ಮಾಡುತ್ತದೆ. ಮರದ ಮಿಲ್ ನಿಂದ ಹಲಗೆ ತಂದು ಅದರ ಮೇಲೆ ಶಹಬಾಷ್ ಷರೀಪ್ ಮೃತದೇಹ ಮಲಗಿಸಿ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸತ್ತಾರೆ. ತರುವಾಯ ನಾಲ್ಕು ಪ್ಲಾಸ್ಟಿಕ್ ಕವರ್ ಗಳಲ್ಲಿ ಮೃತ ದೇಹದ ಮಾಂಸವನ್ನು ತುಂಬಿ ನದಿಗೆ ಎಸೆಯುತ್ತಾರೆ.
ಆದರೆ ಜೊತೆಯಾಗಿ ಮಾಡಿದ ಅಪರಾಧ ಕೃತ್ಯಗಳಲ್ಲಿ ಪಾಲು ಕೊಡಲಿಲ್ಲವೆಂದು ಶಹಬೀನ್ ಅಶ್ರಫ್ ಮನೆಯಲ್ಲೇ ಅವನ ಸಂಗಡಿಗರು ದರೋಡೆ ಮಾಡಿದ್ದರು ಎಂಬ ಸತ್ಯ ಕೂಡ ಪೋಲಿಸರ ವಿಚಾರಣೆ ವೇಳೆ ಬಯಲಾಯಿತು.
ಈ ಮೂಲಕ ಮೈಸೂರಿನ ನಾಟಿ ವೈದ್ಯ ಶಹಬಾಷ್ ಷರೀಫ್ ನಿಗೂಢ ನಾಪತ್ತೆ ಹಾಗೂ ಕೊಲೆ ಪ್ರಕರಣ ಬಯಲಾಗಿದೆ. ಈಗ ಪೋಲಿಸರು ಶಹಬೀನ್ ಅಶ್ರಫ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದು, ಇನ್ನು ನಾಲ್ವರ ಪತ್ತೆಗೆ ವ್ಯಾಪಕ ಬಲೆ ಬೀಸಿದ್ದಾರೆ.
ಈ ಕೊಲೆ ಪ್ರಕರಣದ ಸಣ್ಣ ಸುಳಿವು ಸಿಗುತ್ತಿದ್ದಂತೆ ಕೇರಳದ ಪೋಲಿಸ್ ಇಲಾಖೆ ನಿಪುಣ ಪೋಲಿಸ್ ಅಧಿಕಾರಿಗಳ ತಂಡ ರಚಿಸಿತ್ತು. ಈ ತಂಡ ಈಗ ಇಡೀ ಪ್ರಕರಣ ಬಯಲು ಮಾಡಿದೆ.

ಹಿಂದಿನ ಲೇಖನರಾಜ್ಯದಲ್ಲಿ 156 ಮಂದಿಗೆ ಕೊರೊನಾ ಸೋಂಕು
ಮುಂದಿನ ಲೇಖನದೇವರಾಜ ಮಾರುಕಟ್ಟೆ,ಲ್ಯಾನ್ಸ್ ಡೌನ್ ಬಿಲ್ಡಿಂಗ್ ನೆಲಸಮ ವಿಚಾರ: 10-15 ದಿನಗಳಲ್ಲಿ ನಿರ್ಧಾರ ಪ್ರಮೋದಾದೇವಿ ಒಡೆಯರ್