ಮನೆ ಸುದ್ದಿ ಜಾಲ ಉಕ್ರೇನ್ – ರಷ್ಯಾ ಸಮರ: ಜಾಗತಿಕ ಮಟ್ಟದಲ್ಲಿ ರಷ್ಯಾ ವಿರುದ್ಧ ಪ್ರತಿಭಟಿಸುವಂತೆ ಉಕ್ರೇನ್ ಅಧ್ಯಕ್ಷ ಮನವಿ

ಉಕ್ರೇನ್ – ರಷ್ಯಾ ಸಮರ: ಜಾಗತಿಕ ಮಟ್ಟದಲ್ಲಿ ರಷ್ಯಾ ವಿರುದ್ಧ ಪ್ರತಿಭಟಿಸುವಂತೆ ಉಕ್ರೇನ್ ಅಧ್ಯಕ್ಷ ಮನವಿ

0

ಕೀವ್(ಉಕ್ರೇನ್): ತಮ್ಮ ದೇಶದ ವಿರುದ್ಧ ರಷ್ಯಾ ಸೇನೆಯ ಭೀಕರ ದಾಳಿಯನ್ನು ವಿಶ್ವಾದ್ಯಂತ ಜನತೆ ಬೀದಿಗಿಳಿದು ಖಂಡಿಸಿ ಉಕ್ರೇನ್ ನೊಂದಿಗೆ ಕೈ ಜೋಡಿಸಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆನೆಸ್ಕಿ ಮನವಿ ಮಾಡಿಕೊಂಡಿದ್ದಾರೆ.

ಗುರುವಾರ ಮಾರ್ಚ್ 24ಕ್ಕೆ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಒಂದು ತಿಂಗಳಾಗುತ್ತಿರುವ ಹಿನ್ನೆಲೆಯಲ್ಲಿ ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ಅವರು, ರಷ್ಯಾ ಸೇನೆಯ ಯುದ್ಧ ಉಕ್ರೇನ್ ಮೇಲೆ ಮಾತ್ರವಲ್ಲ, ಸ್ವಾತಂತ್ರ್ಯದ ವಿರುದ್ಧ ಯುದ್ಧವಾಗಿದೆ. ಆದ್ಧರಿಂದ ಈ ಯುದ್ಧದ ವಿರುದ್ಧ ಎಲ್ಲರೂ ಒಟ್ಟಾಗಿ ನಿಲ್ಲಲೇಬೇಕು. ಈ ಯುದ್ಧವನ್ನು ನಿಲ್ಲಿಸಲು ಕೊನೆಗಾಣಿಸಲು ಇಂದು ರಷ್ಯಾ ಯುದ್ಧ ಆರಂಭಿಸಿ ಒಂದು ತಿಂಗಳಾದ ನಂತರ ಎಲ್ಲರೂ ಒಟ್ಟಾಗಿ ನಿಲ್ಲಬೇಕೆಂದು ಕೇಳಿಕೊಂಡಿದ್ದಾರೆ. ಈ ವಿಡಿಯೊವನ್ನು ಉಕ್ರೇನ್ ನ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದೆ.

ಝೆಲೆನ್ಸ್ಕಿ ಮಾತನಾಡುತ್ತಾ, “ಇಂದಿನಿಂದ ಇನ್ನು ಮುಂದೆ ನಿಮ್ಮ ನಿಲುವನ್ನು ತೋರಿಸಿ. ನಿಮ್ಮ ಕಚೇರಿಗಳು, ನಿಮ್ಮ ಮನೆಗಳು, ನಿಮ್ಮ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಿಂದ ಬನ್ನಿ. ಶಾಂತಿಯಿಂದ ಉಕ್ರೇನ್‌ಗೆ ಬೆಂಬಲ ನೀಡಿ, ಸ್ವಾತಂತ್ರ್ಯವನ್ನು ಬೆಂಬಲಿಸಲು, ಜೀವನವನ್ನು ಬೆಂಬಲಿಸಲು ಉಕ್ರೇನ್ ಜೊತೆ ಕೈಜೋಡಿಸಿ ಎಂದು ಕೇಳಿಕೊಂಡಿದ್ದಾರೆ.

ಹಿಂದಿನ ಲೇಖನಉಪ ಲೋಕಾಯುಕ್ತರಾಗಿ ನಿವೃತ್ತ ನ್ಯಾಯಮೂರ್ತಿ ಕೆಎನ್ ಫಣೀಂದ್ರ ನೇಮಕ
ಮುಂದಿನ ಲೇಖನದೇಶದಲ್ಲಿ 1938 ಹೊಸ ಕೋವಿಡ್ ಪ್ರಕರಣ ಪತ್ತೆ