ಮನೆ ಸಾಹಿತ್ಯ ಲೈಂಗಿಕ ಬೆಳವಣಿಗೆಯ ತಿಳುವಳಿಕೆ

ಲೈಂಗಿಕ ಬೆಳವಣಿಗೆಯ ತಿಳುವಳಿಕೆ

0

         ಹದಿಹರೆಯದಲ್ಲಿ   ಗಂಡು ಮಕ್ಕಳಲ್ಲಿಯೂ, ಹೆಣ್ಣು ಮಕ್ಕಳಲ್ಲಿಯೂ ಲೈಂಗಿಕ ಬೆಳವಣಿಗೆಗಳು ಆಗುತ್ತವೆ. ಈ ಬೆಳವಣಿಗೆಗಳು ಸ್ವಾಭಾವಿಕವಾದರೂ ಲೈಂಗಿಕ ಬೆಳವಣಿಗೆಯೊಂದಿಗೆ ಜೊತೆ ಸೇರಿಕೊಳ್ಳುವ ಸಾಮಾಜಿಕ ನಿಯಮಗಳನ್ನು ಗೊಂದಲದಲ್ಲಿ ಕೆಡಹಿ ಹಾಕಿ ಬಿಡುತ್ತವೆ.

Join Our Whatsapp Group

ಉದಾಹರಣೆಗೆ ಪ್ರಾರ್ಥಮಿಕ ಶಾಲೆಗಳಲ್ಲಿ ಒಟ್ಟಾಗಿ ಕಬ್ಬಡಿ ಆಡಲು ಆಗುವುದಿಲ್ಲ. ಯಾಕೆ ಎನ್ನುವುದಕ್ಕೆ ಖಚಿತವಾದ ಉತ್ತರ ಇಲ್ಲ.ಆದರೆ ಈ ರೀತಿಯ ನಿಯಮಗಳಿಗೆ ಸಾಮಾಜಿಕ ನಂಬಿಕೆಗಳು ಮತ್ತು ಧೋರಣೆಗಳು ಕಾರಣವಾಗಿರುತ್ತವೆ ಎನ್ನುವುದಂತೂ ಸತ್ಯವೇ ಆಗಿದೆ. ಲೈಂಗಿಕ ಬೆಳವಣಿಗೆಗಳು ತಾನಾಗಿಯೇ ಸೃಷ್ಟಿಸುವ ಆತಂಕಗಳೊಂದಿಗೆ ಸಾಮಾಜಿಕ ನಿಯಮಗಳಿಗೆ ತಮ್ಮನ್ನು ತಾವು ಒಳಪಡಿಸಿಕೊಳ್ಳುವುದು ಹದಿಹರೆಯದ ಮಕ್ಕಳನ್ನು ವಿಕ್ಷಿಪ್ತಗೊಳಿಲು ಅವಕಾಶವಿದೆ.ಈ ಹಂತದಲ್ಲಿ ವಿಕ್ಷಿಪ್ತಗೊಳ್ಳಬಾರದು. ವಿಕ್ಷಿಪ್ತಗೊಳ್ಳದೆ ಇರಬೇಕಾದರೆ ಮೊದಲು ಲೈಂಗಿಕ ಬೆಳವಣಿಗೆಯನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕು.ಅಥವಾ ಯಾರೋ ಹೇಳುವುದನ್ನು ಕೇಳಿ, ಯಾವುದೋ ತೃತೀಯ ದರ್ಜೆಯ ಪುಸ್ತಕಗಳನ್ನು ಓದಿ ಅರ್ಥಹೀನ ಕಲ್ಪನೆಗಳನ್ನು ರೂಪಿಸಿಕೊಳ್ಳಬಾರದು.

ಜ್ಞಾನವನ್ನು ಪಡೆಯಬೇಕಾದರೆ ತಜ್ಞ ವೈದ್ಯರುಗಳು ವೈಜ್ಞಾನಿಕ ವಿಧಾನದಲ್ಲಿ ಬರೆದಿರುವ ಪುಸ್ತಕಗಳನ್ನು ಓದಿ ಅರ್ಥಮಾಡಿಕೊಳ್ಳಬೇಕು ಹಾಗೆ ಓದುವಾಗಲೂ ಒಂದು ಮನೋಭಾವವನ್ನು ರೂಪಿಸಿ ಕೊಳ್ಳಬೇಕು. ಸಾಮಾನ್ಯವಾಗಿ ಲೈಂಗಿಕ ಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳುವುದನ್ನು ಅಶ್ಲೀಲ ಮತ್ತು ಅಸಭ್ಯ ಎಂದು ಭಾವಿಸುವ ಮನೋಭಾವವಿರುವುದರಿಂದ ಲೈಂಗಿಕ ಬೆಳವಣಿಗೆಯು ಕಾಣಿಸಿಕೊಳ್ಳುವ ಅಂಗಗಳ ಬಗ್ಗೆ ಅಸಹ್ಯಕಾರ ಮನೋಭಾವ ಮತ್ತು ಸ್ವಾಭಾವಿಕ ಕುತೂಹಲಗಳೆರಡೂ ಉಂಟಾಗುತ್ತವೆ. ಲೈಂಗಿಕ ಬೆಳವಣಿಗೆಯುವ ಅಸಹ್ಯವೂ ಅಲ್ಲ, ಅಶ್ಲೀಲವು ಅಲ್ಲ ಹೃದಯ, ಮೆದುಳು, ಕಣ್ಣು, ಕಿವಿಗಳೆಲ್ಲ ಇದ್ದ ಹಾಗೆ ಅವು ಕೂಡ. ಅವುಗಳ ಬಗ್ಗೆ ಅಶ್ಲೀಲ ಭಾವವನ್ನು ಹೊಂದಬಾರದು. ಮೇಲಾಗಿ  ಲೈಂಗಿಕ ಅಂಗಗಳ ಬಗ್ಗೆ ನಿರ್ಲಕ್ಷ ಮಾಡಬಾರದು. ಅವುಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕು.ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಋತುಸ್ರಾವ ಕೊಂಚ ದೈಹಿಕ ಆಯಾಸವನ್ನು ಉಂಟುಮಾಡುತ್ತದೆ ಆದರೆ ಅದರಿಂದ ಆರೋಗ್ಯಕ್ಕೇನೂ ತೊಂದರೆ ಆಗುವುದಿಲ್ಲ. ಅದು ಅಗೌರವದ ಅಥವಾ ಅವಮಾನದ ವಿಷಯವಲ್ಲ ಗಂಡು ಮಕ್ಕಳಲ್ಲಿ ವೀರ್ಯೋತ್ವಾದನೆ ಆಗುತ್ತದೆ. ನಾನಾ ಕಾರಣಗಳಿಂದ ಕೆಲವೊಮ್ಮೆ ವೀರ್ಯಸ್ರಾವವೂ ಆಗುತ್ತದೆ.

ಅದರಿಂದ ಏನೋ ಅನಾಹುತವಾಯಿತೆಂದು ಗಂಡು ಮಕ್ಕಳೂ ಆತಂಕ ಪಡಬೇಕಾಗಿಲ್ಲ. ಇದೆಲ್ಲವೂ ತೀರಾ ಸಹಜವಾದ ಜೈವಿಕ ಕ್ರಿಯೆಗಳು, ಸಮಾಜದಲ್ಲಿ ಗಂಡು ಮತ್ತು ಹೆಣ್ಣಿನ ಕಾರ್ಯ ವ್ಯತ್ಯಾಸದ ಆಧಾರದಲ್ಲಿ ಕೆಲವು ನಿಯಮಗಳನ್ನು ನಾವೇ ರೂಪಿಸಿಕೊಂಡಿರುವುದರಿಂದ ಈ ಅಂತದಲ್ಲಿ ಸಮಾಜದ ನಿಯಮಗಳನ್ನು ಒಪ್ಪಬೇಕಾಗುತ್ತದೆ, ಅಷ್ಟೇ.