ಮುಂಬೈ: ಅಕ್ರಮ ಹಣದ ವರ್ಗಾವಣೆ ತಡೆ ಪ್ರಕರಣದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಾಸ್ಕರ್ ಹೊಂದಿದ್ದ 55 ಲಕ್ಷ ರೂ. ಮೌಲ್ಯದ ಫ್ಲ್ಯಾಟ್ ಒಂದನ್ನು ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಥಾಣೆಯ ಬಿಲ್ಡರ್ ಒಬ್ಬರನ್ನು ಬೆದರಿಸಿ ಗ್ಯಾಂಗ್ ಅದನ್ನು ವಶಪಡಿಸಿಕೊಂಡಿತ್ತು. ಈ ಬಗ್ಗೆ 2017ರಲ್ಲಿ ಪೊಲೀಸರು ಅಕ್ರಮ ಹಣವರ್ಗಾವಣೆ ಆರೋಪದ ಅನ್ವಯ ಕೇಸು ದಾಖಲಿಸಿಕೊಂಡಿದ್ದರು.














