ಮುಂಬೈ: ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಏಪ್ರಿಲ್ ನಲ್ಲಿ 890 ಕೋಟಿ ವಹಿವಾಟು ನಡೆಸಿದ್ದು, ಅದರ ಮೌಲ್ಯವೇ 14.07 ಲಕ್ಷ ಕೋಟಿ ರೂ. ಆಗಿರುವ ಹಿನ್ನೆಲೆ ದಾಖಲೆ ನಿರ್ಮಾಣವಾಗಿದೆ ಎಂದು ಭಾರತದ ರಾಷ್ಟ್ರೀಯ ಪಾವತಿ ನಿಗಮ ಹೇಳಿದೆ.
ಕಳೆದ ತಿಂಗಳು ಯುಪಿಐ ವಹಿವಾಟು ಪ್ರಮಾಣ 2022 ಏಪ್ರಿಲ್ ಗೆ ಹೋಲಿಕೆ ಮಾಡಿದರೆ ಶೇ.59 ಏರಿಕೆ ಕಂಡಿದೆ. ಒಂದು ವರ್ಷದ ಹಿಂದಿನದ್ದಕ್ಕೆ ಹೋಲಿಕೆ ಮಾಡಿದರೆ ವಹಿವಾಟು ಮೌಲ್ಯ ಕೂಡ ಶೇ.49 ಹೆಚ್ಚಾಗಿದೆ ಎಂದು ಪಾವತಿ ನಿಗಮ ಹೇಳಿದೆ.
ಫೆಬ್ರವರಿಗೆ ಹೋಲಿಕೆ ಮಾಡಿದರೆ, ಮಾರ್ಚ್ ನಲ್ಲಿ ವಹಿವಾಟು ಏರಿಕೆಯಾಗಿತ್ತು. ಐಎಂಪಿಎಸ್ ಮೂಲಕ ನಡೆಸಿದ ವಹಿವಾಟು ಪ್ರಮಾಣ ಕೊಂಚ ಇಳಿಕೆಯಾಗಿದ್ದು, 49.6 ಕೋಟಿ ಆಗಿತ್ತು. ಮಾರ್ಚ್ ನಲ್ಲಿ 49.7 ಕೋಟಿ ವಹಿವಾಟು ನಡೆದಿತ್ತು. ಇನ್ನು ಫಾಸ್ಟಾಗ್ ವಹಿವಾಟು ದಾಖಲೆಯ 30.5 ಕೋಟಿ ಆಗಿದ್ದು, ಅದರ ಮೌಲ್ಯ 5,149 ಕೋಟಿ ರೂ. ಆಗಿದೆ.