ವಿಜಯಪುರ: ಮನೆಯ ಬಳಿ ವಾಹನ ಪಾರ್ಕಿಂಗ್ ಮಾಡುವ ವಿಚಾರಕ್ಕೆ ಗಲಾಟೆಯಾಗಿದ್ದು, ಮಚ್ಚು ಹಾಗೂ ಕೊಡಲಿಯಿಂದ ಕೊಚ್ಚಿ ವ್ಯಕ್ತಿ ಮೇಲೆ ಹಲ್ಲೆ ಮಾಡಿರುವ ಘಟನೆ ವಿಜಯಪುರ ನಗರದ ಟಕ್ಕೆಯಲ್ಲಿ ನಡೆದಿದೆ.
ಮನೆಯ ಎದುರು ನಿಲ್ಲಿಸಿದ ಬೈಕ್ ತೆಗೆಯುವ ವಿಚಾರಕ್ಕೆ ಜಗಳವಾಗಿ ಕಿರಣ ಗಜಕೊಶ ಎಂಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ಕಿರಣ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬಸಯ್ಯ ಹಿರೇಮಠ, ಗೌರಮ್ಮ ಹಿರೇಮಠ, ಸಿದ್ದರಾಮಯ್ಯ ಹಿರೇಮಠ ಅವರಿಂದ ಮಚ್ಚು ಹಾಗೂ ಕೊಡಲಿಯಿಂದ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ.
ಜೊತೆಗೆ ಹಲ್ಲೆ ಮಾಡಿರುವ ದೃಷ್ಯ ಸಿಸಿ ಕೆಮೆರಾದಲ್ಲಿ ಸೆರೆಯಾಗಿದ್ದು, ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Saval TV on YouTube