ಮನೆ ರಾಜಕೀಯ ಅಧಿಕಾರದ ವಿಚಾರ ನೋಡಿಕೊಳ್ಳಲು ಎಐಸಿಸಿ ಇದೆ: ಡಿ.ಕೆ.ಶಿವಕುಮಾರ್

ಅಧಿಕಾರದ ವಿಚಾರ ನೋಡಿಕೊಳ್ಳಲು ಎಐಸಿಸಿ ಇದೆ: ಡಿ.ಕೆ.ಶಿವಕುಮಾರ್

0

ಬೆಂಗಳೂರು: ಯಾರಾದರೂ ಏನು ಬೇಕಾದರೂ ಹೇಳಿಕೊಳ್ಳಲಿ. ನಾನು ಆ ಬಗ್ಗೆ ಏನೂ ಮಾತಾಡುವುದಿಲ್ಲ. ಅಧಿಕಾರ ಮತ್ತಿತರ ಪಕ್ಷದ ವಿಚಾರಗಳನ್ನು ನೋಡಿಕೊಳ್ಳಲು ಎಐಸಿಸಿ ಇದೆ  ಎಂದು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

Join Our Whatsapp Group

ಸಿದ್ದರಾಮಯ್ಯ ಅವರೇ ಮುಂದಿನ ಐದು ವರ್ಷವೂ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ, ಸಿ.ಎಂ ಅಧಿಕಾರ ಹಂಚಿಕೆ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ’ ಎಂದು ಸಚಿವ ಎಂ. ಬಿ. ಪಾಟೀಲ ಅವರು  ಸೋಮವಾರ ಹೇಳಿದ್ದರು.

ಈ ಬಗ್ಗೆ ಸುದ್ದಿಗಾರರ ಕೇಳಿದ ಪ್ರಶ್ನೆಗೆ ಮಂಗಳವಾರ ಉತ್ತರಿಸಿದ ಶಿವಕುಮಾರ್, ಎಲ್ಲ ವಿಚಾರಗಳನ್ನು ನೋಡಿಕೊಳ್ಳಲು ಪಕ್ಷದ ರಾಷ್ಟ್ರೀಯ ಮುಖಂಡರು ಇದ್ದಾರೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಮಾತ್ರ ನಮ್ಮ ಆದ್ಯತೆ ಎಂದರು.

ಹಿಂದಿನ ಲೇಖನಮನೆ ಬಳಿ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ: ಮಚ್ಚು, ಕೊಡಲಿಯಿಂದ ವ್ಯಕ್ತಿ ಮೇಲೆ ಹಲ್ಲೆ
ಮುಂದಿನ ಲೇಖನಹನುಮಂತನಗರದ ಆನಂದ  ಮಿಲನಾದ್ರಿ