ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸುವ ಭಾರತೀಯ ಆರ್ಥಿಕ ಸೇವೆಗಳ (ಐಇಎಸ್) ಮತ್ತು ಭಾರತೀಯ ಅಂಕಿ ಅಂಶಗಳ ಸೇವೆ (ಐಎಸ್ಎಸ್ಇ) ಪರೀಕ್ಷೆಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಆರ್ಥಿಕ ಸಚಿವಾಲಯದ ಅತ್ಯುನ್ನತ ಹುದ್ದೆಗಳು ಇವಾಗಿದ್ದು, ಒಟ್ಟು 47 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ : ಒಟ್ಟು ಹುದ್ದೆಗಳು 47
ಭಾರತೀಯ ಆರ್ಥಿಕ ಸೇವೆ – 12
ಭಾರತೀಯ ಅಂಕಿ ಅಂಶಗಳ ಸೇವಾ ಪರೀಕ್ಷೆ – 35
ವಿದ್ಯಾರ್ಹತೆ :
ಭಾರತೀಯ ಆರ್ಥಿಕ ಸೇವೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಥಶಾಸ್ತ್ರ, ಅಪ್ಲೈಡ್ ಎಕನಾಮಿಕ್ಸ್, ಬ್ಯುಸಿನೆಸ್ ಎಕನಾಮಿಕ್ಸ್, ಎಕೋನಾಮೆಟ್ರಿಕ್ಸ್ನಲ್ಲಿ ಪದವಿಯನ್ನು ಹೊಂದಿರಬೇಕು.
ಭಾರತೀಯ ಅಂಕಿಂಶಗಳ ಸೇವೆಗೆ ಅಭ್ಯರ್ಥಿಗಳು ಸಂಖ್ಯಾಶಾಸ್ತ್ರ, ಮ್ಯಾಥಮೆಟಿಕಲ್ ಸ್ಟಾಟಿಸ್ಟಿಕ್ ಅಥವಾ ಅಪ್ಲೈಡ್ ಸ್ಟಾಟಿಸ್ಟಿಕ್ಸ್ನಲ್ಲಿ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ : ಅಭ್ಯರ್ಥಿಗಳು ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷಗಳ ವಯೋಮಿತಿ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ, ವಿಕಲಚೇತನರಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ : ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪ.ಜಾ, ಪ.ಪಂ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಇತರೆ ಅಭ್ಯರ್ಥಿಗಳಿಗೆ 200 ರೂ. ಅರ್ಜಿ ಶುಲ್ಕ ನಿಗದಿಸಲಾಗಿದೆ.
ಈ ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ವೈಯಕ್ತಿಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಈ ಹುದ್ದೆಗಳಿಗೆ ಫೆಬ್ರವರಿ 12ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್ 4 ಆಗಿದೆ. ಅರ್ಜಿ ಪರಿಷ್ಕರಣೆಗೆ ಮಾರ್ಚ್ 5 ರಿಂದ 11ರ ವರೆಗೆ ಕಾಲಾವಕಾಶವಿದೆ.
ಈ ಹುದ್ದೆ ಅಧಿಸೂಚನೆ ಹಾಗೂ ಹೆಚ್ಚಿನ ಮಾಹಿತಿಗಾಗಿ upsc.gov.in ಭೇಟಿ ನೀಡಬಹುದಾಗಿದೆ.














