ಜಟಿಲತೆಗಳು
★ಕಿಡ್ನಿಯಲ್ಲಿ ಮೂತ್ರಪಿಂಡ ಕೀವು ಸೇರಿ ಹಾನಿಗೀಡಾಗುತ್ತದೆ.
ಚಿಕಿತ್ಸೆ
★ಕಿಡ್ನಿ ಕಲ್ಲು ಸಣ್ಣದಾಗಿ5ಮೀ.ಮೀ. ಒಳಗಿದ್ದರೆ ವಿಶೇಷ ಚಿಕಿತ್ಸೆಯ ಅಗತ್ಯವಿಲ್ಲದೆಯೇ ಮೂತ್ರದೊಡನೆ ಹೊರ ಹೋಗುತ್ತದೆ.
★ ಐದರಿಂದ 10 ಮಿ.ಮೀ. ಇರುವ ಕಲ್ಲುಗಳು ತಮ್ಮಷ್ಟಕ್ಕೆ ತಾವೇ ಹೊರಗೆ ಹೋಗಹುದು.
★5 ರಿಂದ 10 ಮಿ.ಮಿ.ಮೀರಿದ ಗಾತ್ರದ ಕಲ್ಲನ್ನು ಸರ್ಜರಿ ಮೂಲಕ,ಇಲ್ಲವೇ ಲಿಥೋಟ್ರಿಪ್ಸಿ ಈ ಮೂಲಕ ಹೋಗಲಾಡಿಸಬೇಕಾಗುತ್ತದೆ.
★ ಹೀಗೆ ಮಾಡಿದ ಚಿಕ್ಕ ಚಿಕ್ಕ ಚೂರುಗಳಾಗಿ ಒಡೆದು ಆ ಚೂರುಗಳು ಮೂರು ನಾಲ್ಕು ತಿಂಗಳುಗಳಲ್ಲಿ ಮೂತ್ರದ ಮೂಲಕ ಒಂದೊಂದಾಗಿ ಹೊರಹೋಗುತ್ತವೆ
★ಲಿಥೋಟ್ರಿಪ್ಸಿ ಮೂಲಕ ಮಾಡುವ ಚಿಕಿತ್ಸೆಯಲ್ಲಿ ಎಕ್ಸರೇ ಗಳ ಮೂಲಕ ಕಲ್ಲು ಎಲ್ಲೆದೆಯೆಂದು ಕಂಡುಹಿಡಿದು,ಸರಿಯಾಗಿ ಆ ಭಾಗಕ್ಕೆ ಗಳನ್ನು ಫೋಕಸ್ ಮಾಡಲಾಗುತ್ತದೆ. ಈ ಪ್ರಕ್ರಿಯೆಗೆ ಒಂದು ಗಂಟೆಯಿಂದ 3 ಗಂಟೆಯವರೆಗೆ ಸಮಯ ಹಿಡಿಯುತ್ತದೆ.
ಸರ್ಜರಿ ಶಸ್ತ್ರ ಚಿಕಿತ್ಸೆ
ಸರ್ಜರಿಯಲ್ಲಿ ಡಾಕ್ಟರ್ ಕಿಡ್ನಿಯನ್ನು ತೆರೆದು ಒಳಗಿರುವ ಕಲ್ಲುಗಳನ್ನು ಒಂದೊಂದಾಗಿ ಹೊರತೆಗೆಯುತ್ತಾರೆ.
★ ಸರ್ಜರಿಯಲ್ಲಿರುವ ಅನಾನುಕೂಲವೇನೆಂದರೆ, ಕಿಡ್ನಿಯನ್ನು ಕೊಯ್ದು ತೆರೆದಾಗಲೆಲ್ಲ ಅದು ತನ್ನ ಸಾಮರ್ಥ್ಯವನ್ನು ಒಂದು ಬಾರಿ ಶೇ.20 ರಷ್ಟು ಕಳೆದುಕೊಳ್ಳುತ್ತದೆ
★ಕಿಡ್ನಿ ಕಲ್ಲುಗಳನ್ನು ತೊಲಗಿಸಲು Ureteroscopy Percutaneous Nepholithotomy,Lithoclast, Lasers ಎಂಬ ಮತ್ತೆ ಕೆಲವು ಅತ್ಯಾಧುನಿಕ ಪದ್ಧತಿಗಳು ಇವೆ
ಕಿಡ್ನಿಯಲ್ಲಿ ಕಲ್ಲುಂಟಾಗದಂತೆ ವಹಿಸುವ ಮುಂಜಾಗ್ರತಾ ಕ್ರಮಗಳು
★ನೀರನ್ನು ಧಾರಳವಾಗಿ ಕುಡಿಯಬೇಕು. ಇದರಿಂದ ಮೂತ್ರ ತೆಳುವಾಗುತ್ತದೆ. ಹೆಚ್ಚಾಗಿ ನೀರು ಕುಡಿಯುವುದರಿಂದ ಉಪ್ಪು, ಖನಿಜ ಲವಣಗಳು ಸಾಂದ್ರಗೊಳ್ಳದೆ ಕಿಡ್ನಿಯಲ್ಲಿ ಕಲ್ಲುಗಳು ಉತ್ಪತ್ತಿಯಾಗುವುದಿಲ್ಲ. ದಿನವೂ ಸುಮಾರು ಮೂರು ಲೀಟರ್ ನೀರು ಕುಡಿಯುವುದು ಒಳ್ಳೆಯದು. ಬೇಸಿಗೆ ಕಾಲದಲ್ಲಿ ಇನ್ನೂ ಹೆಚ್ಚಾಗಿ ಕುಡಿಯಬೇಕು.
★ಕಿಡ್ನಿಗಳಲ್ಲಿ ಉಂಟಾಗುವ ಕಲ್ಲುಗಳಲ್ಲಿ ಶೇಕಡ 92 ಭಾಗ ಕ್ಯಾಲ್ಸಿಯಂ ಮೂಲಭವಾಗಿಯೂ, ಕ್ಯಾಲ್ಸಿಯಂ ಉತ್ಪಾದನೆಗಳ ಮೂಲಕವೂ ಏರ್ಪಡುತ್ತವೆ. ಆದರೆ ಕಿಡ್ನಿಯಲ್ಲಿ ಕಲ್ಲುಗಳ ಉತ್ಪತ್ತಿಯಾಗುವ ಸಂಭವವಿರುವವರು ಕ್ಯಾಲ್ಸಿಯಂ ಉತ್ಪನ್ನಗಳನ್ನು ಪೂರ್ತಿಯಾಗಿ ಬಿಡಬಾರದು. ತಕ್ಕ ಪ್ರಮಾಣದಲ್ಲಿ ಮಿತವಾಗಿ ಮಾತ್ರ ತೆಗೆದುಕೊಳ್ಳಬೇಕು. ಈ ವಿಷಯದಲ್ಲಿ ವೈದ್ಯರ ಸಲಹೆ ತೆಗೆದುಕೊಳ್ಳುವುದು ಒಳ್ಳೆಯದು. ಕ್ಯಾಲ್ಸಿಯಂ ಅಧಿಕವಾಗಿರುವ ಪದಾರ್ಥಗಳು ಹಾಲು ಬೆಣ್ಣೆ ಗಳಂತಹ ಡೈರಿ ಆಹಾರಗಳು.
★ಕೆಲವು ಬಗೆಯ ಆಂಟಾಸಿಡ್ ಳಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ನಿಮಗೆ ಕಿಡ್ನಿಯಲ್ಲಿ ಕ್ಯಾಲ್ಸಿಯಂ ಸ್ಟೋನ್ಸ್ ಇದ್ದು. ನೀವು ಅಂಟಾಸಿಡ್ ಮಾತ್ರೆಗಳನ್ನು ಬಳಸುತ್ತಿದ್ದರೆ. ಆ ಮಾತ್ರೆಗಳು ಕ್ಯಾಲ್ಸಿಯಂ ಬೇಸ್ಡ್ ಇದರಂತೆ ನೋಡಿಕೊಳ್ಳಿ. ಡಾಕ್ಟರ್ ಸಲಹೆ ಮೇರೆಗೆ ಬೇರೊಂದು ಬ್ರಾಂಡ್ ನ ಅಂಟಾಸಿಡ್ ಉಪಯೋಗಿಸಿ. ಮೂತ್ರ ಪಿಂಡಗಳು ಹಾನಿಗೊಳಾಗುವಷ್ಟು ನಿರ್ಲಕ್ಷ ಕೂಡದು
★ಮೂತ್ರಪಿಂಡಗಳಲ್ಲಿನ ಕಲ್ಲಿನ ಕಾರಣದಿಂದ ನೋವಿಂದ ಬಾಧೆ ಪಡುವವರು ಔಷಧಗಳು, ಇಂಜೆಕ್ಷನ್ ಗಳ ಮೂಲಕ ಆ ನೋವನ್ನು ತಗ್ಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
★5 ಒಂದು ಬಾರಿ ಆ ನೋವು ಕಡಿಮೆಯಾದರೆ,ಮುಂದೆ ಕಲ್ಲುಗಳ ಬಗೆಗೆ ಚಿಂತಿಸದೆ ಡಾಕ್ಟರ್ಲ್ಲಿಗೆ ಹೋಗದೆ ವರ್ಷಗಟ್ಟಲೆ ನಿರ್ಲ ಕ್ಷ್ಯ ತೋರಿಸುತ್ತಾರೆ.
★ಕಲ್ಲು ಮೂತ್ರಪಿಂಡದಿಂದ ಯುರೇಡರ್ ಎಂಬ ನಾಳಕ್ಕೆ ಸಾಗ್ರಿತ್ತಿರುವಾಗಲೇ ನೋವುಂಟಾಗುತ್ತದೆ.
★ಕಲ್ಲು ಯುರೇಟರ್ ನಾಳದಲ್ಲಿ ಸಿಕ್ಕಿ ಹಾಕಿಕೊಂಡರೆ, ಅದು ಮೂತ್ರಪಿಂಡದಿಂದ ಹರಿಯುವ ಮೂತ್ರಕ್ಕೆ ಅಡ್ಡಿಪಡಿಸುತ್ತದೆ. ಆದ್ದರಿಂದ ಆ ಕಲ್ಲಿನಿಂದಾಗಿ ನಿಮಗೆ ನೋವುಂಟಾಗದಿದ್ದರೂ ಸಹUrinary Tract lnfection ಉಂಟಾಗಿ,ಮೂತ್ರಪಿಂಡಗಳು ಹಾನಿಗೊಳಗಾಗುವ ಅಪಾಯವಿದೆ.
★ಆದ್ದರಿಂದ ಮೂತ್ರಪಿಂಡಗಳಲ್ಲಿ ಕಲ್ಲುಗಳಿರುವಾಗ ನೋವು ಕಡಿಮೆ ಮಾಡುವ ಔಷಧಗಳಿಂದಲೇ ತೃಪ್ತರಾಗದೆ,, ಸರ್ಜರಿ ಮೂಲಕ ಇಲ್ಲವೇ Lithotripsy ಕಲ್ಲು ಕರಗಿಸುವಿಕೆ ಮೂಲಕ ಆ ಕಲ್ಲುಗಳನ್ನು ತಪ್ಪದೆ ತೊಲಗಿಸಿಕೊಳ್ಳಬೇಕು.














