ಮೂತ್ರಪಿಂಡಗಳ ಕ್ಯಾನ್ಸರ್
★ ಮೂತ್ರಪಿಂಡಗಳು ಫಿಲ್ಟರ್ ಮಾಡುತ್ತಿರುತ್ತವೆ.ಆದ್ದರಿಂದ ನಿತ್ಯವೂ ಅವು ಅನೇಕ ರಾಸಾಯನಿಕಗಳು, ವಿಷ ಪದಾರ್ಥಗಳ ಸಂಪರ್ಕಕ್ಕೆ ಗುರಿಯಾಗುತ್ತವೆ.
★ರಾಸಾಯನಿಕ ಜೊತೆ ಇಷ್ಟೊಂದು ಸಂಪರ್ಕ ಇದ್ದರೂ ಸಹ ಮೂತ್ರಪಿಂಡಗಳಿಗೆ ಕ್ಯಾನ್ಸರ್ ತಗಲುವುದು ಬಹಳ ಕಡಿಮೆ. ಒಂದು ವೇಳೆ ಹಾಗೆ ಕ್ಯಾನ್ಸರ್ ಬಂದರೆ ಅದು ಬಹಳ ಅಪಾಯಕ್ಕೆ ದಾರಿ ಮಾಡುತ್ತದೆ.
★ಮೂತ್ರಪಿಂಡಗಳ ಕ್ಯಾನ್ಸರು ಗಳಲ್ಲಿ ಸರ್ವೇಸಾಮಾನ್ಯವಾದದ್ದು ಎಂಬುದು.
★ ಈ ಕ್ಯಾನ್ಸರ್ ಹೆಚ್ಚಾಗಿ 40- ರಿಂದ 70 ವಯಸ್ಸಿನ ಮಧ್ಯದವರಿಗೆ,ಬರುತ್ತದೆ. ಇದರ ಮುಖ್ಯ ಲಕ್ಷಣ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು.
★ ಆರಂಭದಲ್ಲಿ ನೋವೇ ನೋ ಇರದು. ಕೆಲವರಿಗೆ ಸ್ವಲ್ಪ ಮಟ್ಟಿನ ಬೆನ್ನುನೋವಿರಬಹುದು. ಇಲ್ಲವೇ ಕಿಬ್ಬೊಟ್ಟೆಯ ಮೇಲ್ಭಾಗದಲ್ಲಿ ಗೆಡ್ಡೆ ಯಿರುವಂತೆ ಅನ್ನಿಸಬವುದು.
★ತೂಕ ಕಡಿಮೆಯಾಗುವುದು, ಹಸಿವಾಗದಿರುವುದು,ವಾಕರಿಕೆ, ವಾಂತಿ, ಅಲಸ್ಯ, ಬಲಹೀನತೆಗಳು ಉಳಿದ ಲಕ್ಷಣಗಳು.
★ಕ್ಯಾನ್ಸರ್ ಪಿಡಿತ ಕಿಡ್ನಿಯನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದು ಹಾಕುವುದರ ಹೊರತು ಅನ್ಯಮಾರ್ಗವಿಲ್ಲ.
★ಕ್ಯಾನ್ಸರನ್ನು ಪ್ರಾರಂಭದ ಹಂತದಲ್ಲಿ ಎಷ್ಟು ಬೇಗ ಗುರುತಿಸುವರೆಂಬುದರ ಮೇಲೆ, ಆ ವ್ಯಕ್ತಿ ಬದುಕುವುದು ಅವಲಂಬಿಸಿರುತ್ತದೆ.
★ ಆದ್ದರಿಂದ ಮೇಲೆ ಹೇಳದ ಮಾರ್ನಿಂಗ್ ಸಿಗ್ನಲ್ ಗಳನ್ನು ಲಕ್ಷಣಗಳನ್ನು ಗಮನಿಸುತ್ತಿರುವುದು, ಕ್ರಮಬದವಾಗಿ ಪರೀಕ್ಷೆ ಮಾಡಿಸಿಕೊಳ್ಳುವುದೂ ಬಹಳ ಅಗತ್ಯ.
★ಇವಲ್ಲದೆ, ಪ್ರತಿ ಎರಡು ವರ್ಷಗಳಿಗೊಮ್ಮೆ ಕಿಡ್ನಿಗಳನ್ನು ಅಲ್ಟ್ರಾಸೋನೋಗ್ರಫಿ ಪರೀಕ್ಷೆಗೆ ಒಳಪಡಿಸಿಕೊಳ್ಳುವುದು ಸಹ ಒಳ್ಳೆಯದು.