ಮನೆ ಸುದ್ದಿ ಜಾಲ ಭಾರತಕ್ಕೆ 50% ತೆರಿಗೆ ಹಾಕಿ; ಯುರೋಪ್‌ಗೆ ಅಮೆರಿಕ ಸರ್ಕಾರ ಮನವಿ..!

ಭಾರತಕ್ಕೆ 50% ತೆರಿಗೆ ಹಾಕಿ; ಯುರೋಪ್‌ಗೆ ಅಮೆರಿಕ ಸರ್ಕಾರ ಮನವಿ..!

0

ವಾಷಿಂಗ್ಟನ್‌ : ಭಾರತದ ಮೇಲೆ ತಾನು ಹೇಗೆ ಸುಂಕ ವಿಧಿಸಿದ್ದೇನೋ ಅದೇ ರೀತಿ ನೀವು ಸುಂಕ ವಿಧಿಸಬೇಕೆಂದು ಯುರೋಪಿಯನ್‌ ಒಕ್ಕೂಟಗಳಿಗೆ ಟ್ರಂಪ್‌ ಸರ್ಕಾರ ಒತ್ತಾಯಿಸುತ್ತಿದೆ ಎಂದು ವರದಿಯಾಗಿದೆ.

ಆರಂಭದಲ್ಲಿ ಭಾರತದಿಂದ ಆಮದಾಗುವ ವಸ್ತುಗಳಿಗೆ 25% ತೆರಿಗೆ ವಿಧಿಸಿದ ಅಮೆರಿಕ ಈಗ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ 25% ತೆರಿಗೆ ವಿಧಿಸಿದೆ. ಹೀಗಾಗಿ ಭಾರತದಿಂದ ಆಮದಾಗುವ ಕೆಲ ವಸ್ತುಗಳಿಗೆ 50% ಸುಂಕ ಹೇರಿದೆ.

ತಾನು ಹೇರಿದ ಸುಂಕಾಸ್ತ್ರ ಅಷ್ಟೊಂದು ಪರಿಣಾಮ ಬೀರದ ಕಾರಣ ಅಮೆರಿಕ ಈಗ ಯುರೋಪ್‌ ದೇಶಗಳನ್ನು ಒತ್ತಾಯಿಸುತ್ತಿದೆ. ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸದೇ ಇದ್ದರೆ ಯುರೋಪ್ ಭಾರತದ ಮೇಲೆ ದ್ವಿತೀಯ ಸುಂಕಗಳನ್ನು ವಿಧಿಸಬೇಕೆಂದು ಶ್ವೇತ ಭವನ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಷ್ಯಾ ಕಚ್ಚಾ ತೈಲವನ್ನು ಖರೀದಿಸುವುದನ್ನು ಮುಂದುವರಿಸುತ್ತಿರುವುದರಿಂದ ರಷ್ಯಾ ಉಕ್ರೇನ್‌ನಲ್ಲಿ ಯುದ್ಧಕ್ಕೆ ಭಾರತ ಸಹಕಾರ ನೀಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ. ಚೀನಾದ ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಾತುಕತೆ ನಡೆಸಲಿರುವ ಬೆನ್ನಲ್ಲೇ ಅಮೆರಿಕದ ಒತ್ತಡ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ.