ಮೈಸೂರು : ಬೇಕರಿ ವೃತ್ತಿಪರರಿಗೆ ಟ್ರಾನ್ಸ್ ಕೊಬ್ಬು ನಿಯಂತ್ರಣ ನ ಅನುಷ್ಟಾನವನ್ನು ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಕೂಡಲೇ ನಿಬಂಧನೆಗಳಲ್ಲಿ ತಿಳಿಸಿರುವ ಸೂಚನೆಯ o ತೆ ಪರ್ಯಾಯ ಪದಾರ್ಥಗಳಿಗೆ ಟ್ರಾನ್ಸ್ ಕೊಬ್ಬು ಬದಲಾಗಿ ಪರ್ಯಾಯ ಪದಾರ್ಥಗಳನ್ನು ತಮ್ಮ ವೃತ್ತಿಯಲ್ಲಿ ಉಪಯೋಗಿಸಿಕೊಳ್ಳಿ ಎಂದು ಆಹಾರ ಸುರಕ್ಷತಾಧಿಕಾರಿಗಳಾದ ದ್ರಾಕ್ಷಾಯಣಿ . ಎಸ್ ಬಡಿಗೇರ್ ಸೂಚಿಸಿದರು .
ಸಾರ್ವಜನಿಕರ ಹೃದಯದ ಆರೋಗ್ಯ ಉತ್ತಮ ಪಡಿಸಲು ಹಾಗೂ ಕಾರ್ಖಾನೆ ಮಟ್ಟದಲ್ಲಿ ತಯಾರಾಗುವ ಟ್ರಾನ್ಸ್ ಕೊಬ್ಬು ಇವುಗಳನ್ನು ಆಹಾರ ಸರಪಳಿಯಿಂದ ನಿರ್ಮೂಲನೆ ಮಾಡುವ ಸಲುವಾಗಿ ಅರಿವು ಕಾರ್ಯಗಾರ ಇಡಿ ರಾಜ್ಯದಲ್ಲಿ ಮೊದಲ ಬಾರಿಗೆ Safari quest hotel ವಿಶ್ವೇಶ್ವರ ನಗರ ಇಲ್ಲಿ ಜೂನ್ 17 ರಂದು ನಡೆಸಲಾಯಿತು .
ಜೀವಗಳನ್ನು ಉಳಿಸಲು ಸಂಕಲ್ಪ ಮಾಡಿ ಸಂಸ್ಥೆಯ ಹಿರಿಯ ತಾಂತ್ರಿಕ ಸಲಹೆಗಾರರಾದ ಡಾ . ಭಾರತಿ ಭಾರಧ್ವಜ್ , ಅವರು ಮಾತನಾಡಿ ಇವರು ಟ್ರಾನ್ಸ್ ಕೊಬ್ಬು ಉಪಯೋಗದಿಂದ ಆಗುವ ಸಾರ್ವಜನಿಕ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗತಿಕ ಉತ್ತಮ ಅಭ್ಯಾಸಗಳ ಬಗ್ಗೆ ಮಾಹಿತಿ
ಆಹಾರ ಆರೋಗ್ಯ ಮತ್ತು ಆಡಳಿತ ಇಲಾಖೆ ಆಯುಕ್ತರಾದ ಶ್ರೀ ನಿವಾಸ . ಕೆ . ಇವರ ನಿರ್ದೇಶನದ ಮೇಲೆ ಮೈಸೂರು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ , ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಛೇರಿ ಕೇಂದ್ರ FSSAI ರವರು ನೀಡಿದ ಟ್ರಾನ್ಸ್ ಕೊಬ್ಬು ( ಐಡೋಜನಿಕರಿಸಿದ . ತೈಲಗಳಿಂದ ಸಂಸ್ಕರಿಸಿದ ಬೇಕರಿ ಆಹಾರದಲ್ಲಿ ಉಪಯೋಗಿಸುವ ಕೊಬ್ಬು ) ನಿಬಂಧನೆಯ ಅಡಿಯಲ್ಲಿ ನೀಡಲಾಗುತ್ತದೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಕಾರ್ಯಕ್ರಮವನ್ನು ಬೇಕರಿ ವೃತ್ತಿಪರರಿಗೆ ಕಾರ್ಯಾಗಾರವನ್ನು ಮಾಡಲಾಗಿದೆ .
ಈ ಕಾರ್ಯಗಾರಕ್ಕೆ ಅಪರ ಮಟ್ಟದಲ್ಲಿ ಬೇಕರಿ ವೃತ್ತಿಪರರು ತೊಡಗಿಸಿಕೊಂಡು ಚರ್ಚೆಯ ಮೂಲಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ ಅಡಿಯಲ್ಲಿ ನಿಯಮ 2006 ನಿಬಂಧನೆ 2011 ರಡಿಯಲ್ಲಿ ಟ್ರಾನ್ಸ್ ಕೊಬ್ಬು ನಿಬಂಧನೆಯ ಅನುಷ್ಠಾನಕ್ಕಾಗಿ ಕೈಜೋಡಿಸಿದ್ದು , ಈ ಕಾರ್ಯಗಾರವು ಆಹಾರ ಸುರಕ್ಷತೆ ಮತ್ತು ಆಡಳಿತ ಇಲಾಖೆ ಹಾಗೂ ಸಾರ್ವಜನಿಕ ಆರೋಗ್ಯ ಅಧಿಕಾರಿಗಳ ಬದ್ದತೆಯ ಬಗ್ಗೆ ಒತ್ತು ನೀಡಲಾಗಿದೆ .
ಟ್ರಾನ್ಸ್ಫಾರ್ಮ್ ಬ್ಯಾನರ್ ಅಡಿಯಲ್ಲಿ ಇನ್ಸ್ಟಿಟ್ಯೂಟ್ ಫಾರ್ ಪಾಲಿಸಿ ರಿಸರ್ಚ್ (ಐಪಿಆರ್) 55 ಸಾಮಾಜಿಕ ಅಭಿವೃದ್ಧಿಗಾಗಿ ವಿಷನ್ (ವಿಎಸ್ಟಿ) ಮತ್ತು ರಿಸಲ್ವ್ ಫಾರ್ ಸೇವ್ ಲೈಫ್ನಿಂದ (ಆರ್ಟಿಎಸ್ಎಲ್) ತಾಂತ್ರಿಕ ಬೆಂಬಲ ಸಂಸ್ಥೆಗಳ ಪಾಲುದಾರಿಕೆಯಿಂದ ಅರಿವು ಕಾರ್ಯಗಾರವನ್ನು ನಡೆಸಲಾಯಿತು .
ಈ ರೀತಿಯ ಸಂವಾದಾತ್ಮಕ ಕಾರ್ಯಗಾರವನ್ನು ಬೇಕರಿ ವೃತ್ತಿಪರರಿಗೆ ಇಡೀ ಕರ್ನಾಟಕದಲ್ಲಿ ಮೊದಲ ಬಾರಿಗೆ ಮೈಸೂರು ಮಹಾನಗರ ಪಾಲಿಕೆ ಉತ್ಪನ್ನದ ಟ್ರಾನ್ಸ್ ಕೊಬ್ಬು ಪದಾರ್ಥಗಳನ್ನು ಬೇಕರಿ ಉತ್ಪನ್ನಗಳಿಗೆ ಬಳಸದೆ ಇದರ ಪರ್ಯಾಯ ಪದಾರ್ಥದ ಬಗ್ಗೆ ಸೂಕ್ತ ಮಾಹಿತಿ ವಿನಿಯೋಗ ಮಾಡಲಾಗಿದೆ . ಈ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ರಾಜ್ಯಾದಂತ ನಡೆಸಲು ಇಲಾಖೆಯು ಕಾರ್ಯಪ್ರವೃತ್ತವಾಗಿದೆ .
ಈ ಸಂದರ್ಭದಲ್ಲಿ ಗಿರೀಶ್ . ಎಸ್ . ಆರ್ , ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ ರವರಿಗೂ , ಮೈಸೂರು ಬಾಣಸಿಗ ಸಂಘದ ಅಧ್ಯಕ್ಷರಾದ ಸೆಲ್ವಕುಮಾರ್ , ಅಂಕಿತ ಅಧಿಕಾರಿಗಳಾದ ಡಾ .ರವೀಂದ್ರ , ಎಸ್ . ಎಲ್ ಸೇರಿವೆ .















