ಮನೆ ಅಪರಾಧ ಸುಳ್ಯದಲ್ಲಿ ಉಸ್ಮಾನ್ ಕೊಲೆ ಪ್ರಕರಣ: ಚೂರಿ ಒದಗಿಸಿದ ಆರೋಪದಲ್ಲಿ ಮತ್ತೋರ್ವ ಅರೆಸ್ಟ್

ಸುಳ್ಯದಲ್ಲಿ ಉಸ್ಮಾನ್ ಕೊಲೆ ಪ್ರಕರಣ: ಚೂರಿ ಒದಗಿಸಿದ ಆರೋಪದಲ್ಲಿ ಮತ್ತೋರ್ವ ಅರೆಸ್ಟ್

0

ಸುಳ್ಯ: ಸುಳ್ಯದ  ಚೆಂಬು ಗ್ರಾಮದ ಕುದ್ರೆಪಾಯದಲ್ಲಿ 2 ವಾರಗಳ ಹಿಂದೆ ಸಹೋದರರಿಂದಲೇ ಕೊಲೆಯಾದ ಉಸ್ಮಾನ್ ಕೊಲೆ ಕೇಸಿಗೆ ಸಂಬಂಧಪಟ್ಟಂತೆ ಇನ್ನೊಬ್ಬ ಆರೋಪಿಯನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಉಸ್ಮಾನ್‌ ರನ್ನು ಕೊಲೆಗೈಯಲು ಅವರ ಸಹೋದರರಾದ ರಫೀಕ್ ಮತ್ತು ಸತ್ತಾರ್ ಉಪಯೋಗಿಸಿದ ಚೂರಿಯನ್ನು ಅರಂತೋಡಿನಲ್ಲಿರುವ ಸಹೋದರ ಮುಬಾರಕ್ ಒದಗಿಸಿದ್ದಾನೆಂದು ಪೊಲೀಸರು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.

ಮುಬಾರಕ್ (37 ವರ್ಷ).

ಸುಳ್ಯ ಜೂನಿಯರ್ ಕಾಲೇಜು ಸಮೀಪದ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ಬೇಕರಿ ನಡೆಸುತ್ತಿದ್ದರು. ಕೊರೋನಾ ಕಾಲದ ಬಳಿಕ ಬೇಕರಿ ಬಂದ್ ಮಾಡಿ ಊರಿಗೆ ಬಂದು ನೆಲೆಸಿರುವ ಅವರಲ್ಲಿ ಬೇಕರಿಯ ಬ್ರೆಡ್ ಮತ್ತಿತರ ವಸ್ತುಗಳನ್ನು ಕತ್ತರಿಸುವ ಗಟ್ಟಿಯಾದ ಚೂರಿ ಇತ್ತೆನ್ನಲಾಗಿದೆ.

ತನ್ನ ಚಿಕ್ಕಪ್ಪ ಮತ್ತು ದೊಡ್ಡಪ್ಪ ಕೇಳಿದ ಮೇರೆಗೆ ಕೊಲೆ ನಡೆಯುವ ಹಿಂದಿನ ದಿನ ಮುಬಾರಕ್ ಆ ಚೂರಿಯನ್ನು ಅವರಿಗೆ ಕೊಟ್ಟಿದ್ದನೆಂದು ಹೇಳಲಾಗಿದೆ. ಕೊಲೆ ಪ್ರಕರಣದ ತನಿಖಾಧಿಕಾರಿಯಾದ ಮಡಿಕೇರಿ ಸರ್ಕಲ್ ಇನ್‌ ಸ್ಪೆಕ್ಟರ್ ಉಮೇಶ್ ಉಪ್ಪಳಿಕೆಯವರು ಜು. ೨೭ರಂದು ಸುಳ್ಯಕ್ಕೆ ದಾಳಿ ನಡೆಸಿ ಮುಬಾರಕ್‌ ನನ್ನು ಬಂಧಿಸಿದರು.

ಆರೋಪಿಯನ್ನು ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಹಿಂದಿನ ಲೇಖನನಾಳೆಯಿಂದ ‘ಗೃಹಜ್ಯೋತಿ ಯೋಜನೆ’ ಅಧಿಕೃತ ಜಾರಿ: 200 ಯುನಿಟ್ ವಿದ್ಯುತ್ ಬಳಸಿದವರಿಗೆ ಬರಲಿದೆ ಫ್ರೀ ಬಿಲ್
ಮುಂದಿನ ಲೇಖನಮೈಸೂರು: ಐಷಾರಾಮಿ ಕಾರು ಕದ್ದು ಹೊರ ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ