ಬದೌನ್: ಉತ್ತರ ಪ್ರದೇಶದ ಬದೌನ್ ನಲ್ಲಿ ಕ್ಷೌರಿಕನೊಬ್ಬ ಇಬ್ಬರು ಮಕ್ಕಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ. ಘಟನೆಯಲ್ಲಿ 3ನೇ ಮಗು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸು ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸರು ಘಟನೆಗೆ ಕಾರಣನಾದ ವ್ಯಕ್ತಿಗಳ ಪೈಕಿ ಒಬ್ಬನನ್ನು ಎನ್ ಕೌಂಟರ್ ನಲ್ಲಿ ಕೊಂದು ಹಾಕಿದ್ದಾರೆ.
ಕೆಲವು ದಿನಗಳ ಹಿಂದೆಯೇ ಬದೌನ್ ನಲ್ಲಿ ಅಂಗಡಿಯೊಂದನ್ನು ಸ್ಥಾಪಿಸಿದ್ದ ವ್ಯಕ್ತಿ ಮತ್ತು ಆತನ ನಿಕಟವರ್ತಿ ಮೂವರು ಮಕ್ಕಳು ಇರುವ ಮನೆಗೆ ಕೊಡಲಿ ಹಿಡಿದು ನುಗ್ಗಿದ್ದ. ಮಾತ್ರವಲ್ಲದೆ ಆಯುಷ್, ಅಹಾನ್ ಮತ್ತು ಯುವರಾಜ್ ಎಂಬ ಮಕ್ಕಳನ್ನು ಕಡಿದಿದ್ದ. ತೀವ್ರವಾಗಿ ಗಾಯಗೊಂಡಿದ್ದ ಆಯುಷ್, ಅಹಾನ್ ಸ್ಥಳದಲ್ಲಿಯೇ ಅಸುನೀಗಿದ್ದಾರೆ.
ಕೃತ್ಯವೆಸಗಿದ ಬಳಿಕ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಪೈಕಿ ಸಾಜಿದ್ (23) ಎಂಬಾತ ಪೊಲೀಸರತ್ತ ಗುಂಡು ಹಾರಿಸಿದ್ದು, ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಿದಾಗ ಆತ ಅಸುನೀಗಿದ್ದಾನೆ.