ಮನೆ ಅಪರಾಧ ಕೊಡಗು: ರೈಫಲ್​ ನಿಂದ ಗುಂಡು ಹಾರಿ ವ್ಯಕ್ತಿ ಸಾವು

ಕೊಡಗು: ರೈಫಲ್​ ನಿಂದ ಗುಂಡು ಹಾರಿ ವ್ಯಕ್ತಿ ಸಾವು

0

ಕೊಡಗು: ರೈಫಲ್​ ನಿಂದ ಗುಂಡು ಹಾರಿ ವ್ಯಕ್ತಿ ಮೃತಪಟ್ಟಿರುವ ಘಟನೆ ಕೊಡಗು-ಮೈಸೂರು ಗಡಿ ಗ್ರಾಮ ಗಿರಗೂರಿನಲ್ಲಿ ನಡೆದಿದೆ.


ಕುಶಾಲನಗರದ ಹಾರಂಗಿ ನಿವಾಸಿ ಸಂತೋಷ್ (34) ಮೃತ ದುರ್ದೈವಿ.
ಪಾಯಿಂಟ್​​ 22 ರೈಫಲ್​​ ನಿಂದ ಗುಂಡು ಹಾರಿದೆ. ಗುಂಡು ಸಂತೋಷ್​​ ತಲೆ ಸೀಳಿದ್ದು, ಪ್ರಾಣ ಪಕ್ಷಿ ಹಾರಿ ಹೋಗಿದೆ.
ಕಾವೇರಿ ಹೊಳೆಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಘಟನೆ ಸಂಭವಿಸಿದ್ದು, ಸಂತೋಷ್ ಜೊತೆ ಇದ್ದ ರವಿ, ನೂತನ್, ಶರತ್​ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿಕೊಂಡಿದ್ದಾರೆ.
ಕುಶಾಲನಗರ ಟೌನ್ ಮತ್ತು ಬೈಲುಕುಪ್ಪೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಿಂದಿನ ಲೇಖನಕೇರಳ: ಕಂದಕಕ್ಕೆ‌ ಉರುಳಿದ ಪ್ರವಾಸಿ ವಾಹನ- ಮೂವರ ಸಾವು, 11 ಮಂದಿಗೆ ಗಾಯ
ಮುಂದಿನ ಲೇಖನಉತ್ತರ ಪ್ರದೇಶ: ಇಬ್ಬರು ಮಕ್ಕಳನ್ನು ಕೊಂದಿದ್ದ ಕ್ಷೌರಿಕ ಎನ್ ಕೌಂಟರ್ ನಲ್ಲಿ ಸಾವು