ಮನೆ ಜ್ಯೋತಿಷ್ಯ ಉತ್ತರಾಭಾದ್ರಪದಾ ಮತ್ತು ಜಾತಕ

ಉತ್ತರಾಭಾದ್ರಪದಾ ಮತ್ತು ಜಾತಕ

0

       ಉತ್ತರಾಭಾದ್ರಪದಾ ನಕ್ಷತ್ರದ ಕ್ಷೇತ್ರವ್ಯಾಪ್ತಿ 30 ಅಂಶ 20 ಕಲಾದಿಂದ 16 ಅಂಶ 30 ಕಲಾ ಮೀನ ರಾಶಿಯವರೆಗೆ ರಾಶಿ ಸ್ವಾಮಿ – ಗುರು, ನಕ್ಷತ್ರ ಸ್ವಾಮಿ – ಶನಿ, ನಕ್ಷತ್ರದೇವತೆ ಅಹಿರ್ಬುದ್ಧಿ, ತಾರಾಸಮೂಹ – 2, ಆಕಾಶಭಾಗ- ಉತ್ತರ, ಮಧ್ಯನಾಡಿ, ಗೋಯೋನಿ, ಮನುಷ್ಯಗಣ, ನಾಮಾಕ್ಷರ – ದು, ಛಂ, ಞ, ಧಾ. ಈ ನಕ್ಷತ್ರ ಪ್ರತಿನಿಧಿಸುವ ಜಾತಕನ ಶರೀರ ಭಾಗ – ಪಾದ, ಪಾದದ ನರಗಳು, ಪಾದದ ನಾಡಿಗಳು.

Join Our Whatsapp Group

* ಉತ್ತರಾಭಾದ್ರಪದಾ ನಕ್ಷತ್ರದ ಜಾತಕನ ಸ್ವರೂಪ :

ದೃಢ ಚಾರಿತ್ರ್ಯದವ, ಉದಾರ ಮತ್ತು ಕೊಡುಗೈಯವ (ದಾನಿ), ಸುಂದರ ಆಕೃತಿ, ದಾರ್ಶನಿಕ (ತತ್ವಜ್ಞಾನಿ), ಧರ್ಮನಿರಪೇಕ್ಷಹಾಗೂ ಶಾಂತಿಪ್ರೇಮಿ, ಸಮಾಜ ಪ್ರೇಮಿ, ಬಡವರ ಹಾಗೂ ಅಂಗವಿಕಲರ ಸೇವೆ ಮಾಡುವವ, ಅಭಿಲಾಷೆಯುಕ್ತ ಬಂದಿಖಾನೆಯ ನಿರೀಕ್ಷಕ, ಜನಾರೋಗ್ಯ ವಿಶೇಷಜ್ಞ, ವೈದ್ಯ, ಸ್ವತಂತ್ರ ಮತ್ತು ಮೌಲ್ಯಾಧಾರಿತ ವಿಚಾರಧಾರೆಯುಳ್ಳವ ಒಂದು ವೇಳೆ ಶನಿಯು ಸೂರ್ಯನಿಂದ ಪೀಡಿತನಾಗಿದ್ದರೆ ಜಾತಕನು ಜೀವನದಲ್ಲಿ ಯಾವುದಾದರೂ ಷಡ್ಯಂತ್ರದಲ್ಲಿ ಸಿಲುಕುತ್ತಾನೆ.

* ಉತ್ತರಾಭಾದ್ರಪದಾ ಜಾತಕನ ಉದ್ಯೋಗ :

ಗೃಹ ಮಂತ್ರಲಯ, ಕಾರಾವಾಸ ಪ್ರಬಂಧಕ, ಶರಣಾರ್ಥಿ, ಸ್ಯಾನಿಟೋರಿಯಮ್, ಆಸತ್ರೆ, ಮೂಳೆಗಳ ವಿಶೇಷಜ್ಞ, ಯುದ್ಧಬಂಧಿ ಕಾರ್ಯ, ನಾಗರಿಕ ಬಂದಿಖಾನೆ, ರಾಜನೈತಿಕ ಬಂಧಿಗೃಹ, ಗಣಿ ತೋಡುವುದು, ಪರೀಕ್ಷಣೆ, ಇಂಜಿನಿಯರ್, ನಿರ್ಯಾತ-ಆಯಾತ, ಬಂದರು, ವಂಶಗತ ಧನ (ಉಳಿತಾಯ), ಕುಲದ ವ್ಯಾಪಾರ, ಸಮಾಜದಿಂದ ಲಾಭ, ಮನೋರಂಜನಾ ಕೇಂದ್ರ, ಸಾರ್ವಜನಿಕ ಸಮೂಹ, ಸಾರ್ವಜನಿಕ ಸೇವೆ, ಸಂಘ, ಲೋಕಸೇವಾ ಆಯೋಗ, ಧರ್ಮಾರ್ಥ ಚಿಕಿತ್ಸೆ ಧಾರ್ಮಿಕ ಸಂಸ್ಥೆ ಸಬ್ ಮೆರಿನ್, ಶಿಪ್ಪಿಂಗ್, ಫೌಂಡ್ರಿ, ಕಾನೂನು, ಜೀವವಿಮೆ, ಗುಪ್ತಚರ ಸೇವೆ, ಶಿಕ್ಷಣ ವಿಭಾಗ, ಟೂರಿಸ್ಟ್ ಹೋಮ್. ಕೊಡೆಗಳ ನಿರ್ಮಾಣ, ಚುಟ್ಟಿ- ಸಿಗರೆಟ್, ಹಡಗು, ತೈಲ, ಮತ್ತ್ವ ಪಾಲನೆ ವಿಭಾಗ, ನದಿ ಮತ್ತು ನಗರ ನಿರ್ಮಾಣ, ಸುರಂಗ ನಿರ್ಮಾಣ, ಕಾನೂನು, ಇಂಜಿನಿಯರಿಂಗ್ ಮತ್ತು ಜಲಕಾರ್ಯ.

* ಉತ್ತರಾಭಾದ್ರಪದಾ ಜಾತಕನ ರೋಗ :

       ವಾತ ಅಥವಾ ಸಂಧಿವಾತ ರೋಗ, ಪಾದದಲ್ಲಿ ಬೆವರು, ಅಥವಾ ಸ್ಪರ್ಶಹೀನ. ಅನುಭವವಾಗುವ ತೊಂದರೆ, ದುರ್ಬಲ ಪಚನಶಕ್ತಿ ಪಾದಗಳಲ್ಲಿ ಬಿಂದುಪಾದ, ಮಲಬದ್ಧತೆ, ಹರ್ನಿಯಾ, ಉದರವಾಯು, ವಾತಪೀಡೆ, ಪಾದಗಳಲ್ಲಿ ಗಾಯ ಮೂಳೆಮುರಿತ, ಶೀತಪಾದ, ಕ್ಷಯ, ಜಲೋದರ *,

 ವಿಶೇಷ* :

ಬೃಹಸ್ಪತಿಯ ರಾಶಿ ಮತ್ತು ಶನಿಯ ನಕ್ಷತ್ರದಲ್ಲಿ ಜನಿಸಿದ ಜಾತಕನು ಸಾಮಾನ್ಯವಾ” ಪ್ರಸನ್ನಚಿತ್ತ ಪ್ರಗತಿಗಾಮಿ, ಸ್ತ್ರೀಯರಿಂದ ವಿಶೇಷ ಸಮಾನ ಪ್ರಾಪ್ತಿ ಹೊಂದುವವ ಉದಾರಿ, ಕೊಡುಗೈ ದಾನಿ, ಭಾವುಕ, ಯೋಚಿಸಿ ಕಾರ್ಯನಿರ್ವಹಿಸುವವ, ಆಕಸ್ಮಿಕವಾಗಿ ಹಾನಿಗೆ ಗುರಿಯಾಗುವವ ಮತ್ತು ಶತ್ರುಗಳ ಕಾರಣ ದುಃಖ ಪ್ರಾಪ್ತಿ ಹೊಂದುವವನಾಗುತ್ತಾನೆ. ಇಂಥ ಜಾತಕನು ದೈನಿಕ ಕಾರ್ಯಗಳಲ್ಲಿ ಆಲಸಿ, ವಿದ್ಯಾಪ್ರೇಮಿ, ಉಚ್ಚ ಅಥವಾ ಸತ್ಕುಲದ ಆಚರಣೆಯವನಾಗುತ್ತಾನೆ. ರಾಜ್ಯದಿಂದ ಈತನಿಗೆ ವಿಶೇಷ ಪ್ರತಿಷ್ಠೆ ಪ್ರಾಪ್ತಿಯಾಗುತ್ತದೆ ಮತ್ತು ಸಮಾಜದಲ್ಲಿ ಈತ ಆಧಾರಸ್ಥಂಭಕ್ಕೆ ಸಮಾನನಾಗುತ್ತಾನೆ.

      ಸೂರ್ಯನು ಈ ನಕ್ಷತ್ರದ ಮೇಲೆ ಚೈತ್ರಮಾಸಪರ್ಯಂತ, ಹದಿಮೂರೂಕಾಲು ದಿನಗಳವರೆಗೆ ಇರುತ್ತಾನೆ. ಚಂದ್ರನು ಪ್ರತಿ ಇಪ್ಪತ್ತೇಳನೆಯ ದಿನ, ಒಂದು ದಿನದ ಅವದಿಯವರೆಗೆ ಈ ನಕ್ಷತ್ರದ ಮೇಲಿರುತ್ತಾನೆ.

* ಚರಣದ ಸ್ವಾಮಿ ಫಲ :

* ★ಪ್ರಥಮ ಚರಣದ ಸ್ವಾಮಿ ಶನಿ- ಸೂರ್ಯ ಜಾತಕನನ್ನು ಪ್ರಮಾದಿ (ತಪ್ಪುಗಾರ) ಯನ್ನಾಗಿ ಮಾಡುವರು.

★* ದ್ವಿತೀಯ ಚರಣದ ಸ್ವಾಮಿ ಶನಿ-ಬುಧ ಕಲೆಯ ಕ್ಷೇತ್ರದತ್ತ ಕರೆದೊಯ್ಯುವರು.

★* ತೃತೀಯ ಚರಣದ ಸ್ವಾಮಿ ಶನಿ- ಶುಕ್ರ ಲಲಿತ ಕಲೆಗಳಲ್ಲ ಆಸಕ್ತಿ ಹುಟ್ಟಿಸುವರು.

★* ಚತುರ್ಥ ಚರಣದ ಸ್ವಾಮಿ ಶನಿ- ಗುರು ಸಂಶೋಧನೆಯ ಕಾರ್ಯಗಳಲ್ಲಿ ತೊಡಗಿಸುವರು.