ಮನೆ ಅಪರಾಧ ದೆಹಲಿ ಅಬಕಾರಿ ನೀತಿ ಹಗರಣ: ಉದ್ಯಮಿ ಅಮಿತ್ ಅರೋರಾ ಬಂಧನ

ದೆಹಲಿ ಅಬಕಾರಿ ನೀತಿ ಹಗರಣ: ಉದ್ಯಮಿ ಅಮಿತ್ ಅರೋರಾ ಬಂಧನ

0

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಉದ್ಯಮಿ ಅಮಿತ್ ಅರೋರಾರನ್ನು ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ಬಂಧಿಸಿದ್ದಾರೆ.

ಅರೋರಾ, ಗುರುಗ್ರಾಮದ ಬಡ್ಡಿ ರೀಟೇಲ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ. ಪ್ರಕರಣದಲ್ಲಿ ಇ.ಡಿ ಅಧಿಕಾರಿಗಳು ಬಂಧಿಸಿದ 6ನೇ ವ್ಯಕ್ತಿಯಾಗಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯ ವಿವಿಧ ಸೆಕ್ಷನ್‌ಗಳಡಿ ಕಳೆದ ರಾತ್ರಿ ಅವರನ್ನು ಬಂಧಿಸಲಾಗಿದೆ.ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ವಶಕ್ಕೆ ಕೇಳುವ ಸಾಧ್ಯತೆ ಇದೆ.

ಸಿಬಿಐ ಎಫ್‌ಐಆರ್ ಆಧರಿಸಿ ಇ.ಡಿ ದೇಶದ ವಿವಿಧೆಡೆ ದಾಳಿಗಳನ್ನು ಸಂಘಟಿಸಿತ್ತು. ಈ ಕುರಿತಂತೆ ಇತ್ತೀಚೆಗೆ ಚಾರ್ಜ್‌ಶೀಟ್ ಸಲ್ಲಿಸಿದ್ದ ಸಿಬಿಐ, ಅಮಿತ್ ಅರೋರಾ ಮತ್ತು ಆತನ ಸಂಗಡಿಗರಾದ ದಿನೇಶ್ ಅರೋರಾ ಮತ್ತು ಅರ್ಜುನ್ ಪಾಂಡೆಯನ್ನು ಆರೋಪಿಗಳೆಂದು ಹೇಳಿತ್ತು. ಈ ಮೂವರೂ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತರು ಎಂದೂ ಸಿಬಿಐ ಆರೋಪಿಸಿತ್ತು.

ಹಿಂದಿನ ಲೇಖನಕೆಎಸ್’ಆರ್’ಟಿಸಿಯ ನೂತನ್ ಬಸ್’ಗಳಿಗೆ ಬ್ರಾಂಡ್ ಹೆಸರು, ಟ್ಯಾಗ್’ಲೈನ್ ಸೂಚಿಸಿ, ಗ್ರಾಫಿಕ್ಸ್ ನೀಡಿ ಬಹುಮಾನ ಗೆಲ್ಲಿ
ಮುಂದಿನ ಲೇಖನಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ಇಂದು ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್‌