ಕ್ಷೇತ್ರ – ಮಕರ ರಾಶಿಯಲ್ಲಿ 0 ಡಿಗ್ರಿ ಇಂದ 10 ಡಿಗ್ರಿ, ರಾಶಿ ಸ್ವಾಮಿ – ಶನಿ, ನಕ್ಷತ್ರಸ್ವಾಮಿ – ಸೂರ್ಯ, ಗಣ – ಮನುಷ್ಯ, ನಾಡಿ – ಅಂತ್ಯ, ಯೋನಿ – ನಕುಲ, ನಾಮಾಕ್ಷರ – ಭೋ,ಜಾ, ಜೀ, ಶರೀರಭಾಗ – ಮೊಣಕಾಲು, ಚರ್ಮ, ಪಾದಸಂಧಿ.
ರೋಗಗಳು :- ಚರ್ಮರೋಗ, ಕುಷ್ಠ, ಅಜೀರ್ಣ, ಗ್ಯಾಸ್ ಪ್ರಕೋಪ, ಅಸ್ಥಿಭಂಗ, ವಿಕ್ಷಿಪ್ತತೆ, ಗಂಟು, ಸಂಧಿವಾತ, ಹೃದಯ ಸ್ಪಂದನ, ಅಂಗ ಹೀನತೆ, ಜ್ವರ, ಕ್ಷಯ, ಕಣ್ಣು ನೋವು.
ಸಂರಚನೆ :- ನಿಯಮಿತ ಕೆಲಸ ಮಾಡುವವ, ಕೂಟನೀತಜ್ಞ, ಉತ್ತಮ ನಿರ್ಧಾರ ಕೊಳ್ಳುವವ, ವಿಶ್ವಾಸಿಗ, ಬುದ್ಧಿವಂತ, ಗಣಿತತಜ್ಞ, ಚಿಂತಿತ, ದೋಷದರ್ಶಿ ಆಲೋಚಕ, ಸಂಶೋಧಕ, ಯಂತ್ರ ಉಪಯೋಗಿಸುವವನಾಗಬಹುದಾಗಿದೆ.
ಉದ್ಯೋಗ, ವಿಶೇಷಗಳು :- ಆಸ್ತಿವಂತ, ಆದಾಯಕರ ಅಧಿಕಾರಿ, ಹಣಕಾಸಿನ ವ್ಯವಹಾರ ತಜ್ಞ, ಮೂರ್ತಿ, ಎಣ್ಣೆ, ಔಷದ ಸಂಬಂಧ ಪಟ್ಟವನು, ಲೇಖಕ, ಇಂಜಿನಿಯರ್, ಭಾಷಾತಜ್ಞ, ಸಂಶೋಧಕ, ಚರ್ಮ ಉದ್ಯಮಿ, ರಕ್ಷಕ, ಗುಪ್ತಚರ ವಿಭಾಗ ನೌಕರರಾಗಬಹುದು. ಈ ಕ್ಷೇತ್ರ ಪಾದಗಳಲ್ಲಿ ಜನಿಸಿದವರು ಆಲಸಿ ನಿರುದ್ಯೋಗಿಗಳಾಗುವವರು, ಸರಕಾರದ ಪ್ರಸಿದ್ಧಿ ವಿಮರ್ಶಕರು, ತಾಂತ್ರಿಕರಾಗುವರು. ಹಡಮಾರಿ , ವೈಭವ ಪ್ರದರ್ಶಕರಾಗಬಹುದು. ಸೂರ್ಯನು ಮಾಘಮಾಸದಲ್ಲಿ ಮೊದಲ 10 ದಿನಗಳಲ್ಲಿ ಇರುವವನು. ಚಂದ್ರ 8 ಗಂಟೆ ಇರುವವನು.