ಹಾಸನ(Hassan): ಸಿದ್ದರಾಮಯ್ಯ ಅವರು ಚಡ್ಡಿಯನ್ನು ಸುಡುವುದಕ್ಕೂ ಮುನ್ನ ತಮ್ಮ ವಿಕೃತ ಮನಸ್ಸನ್ನು ಸುಡಬೇಕಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅವರಿಗೆ ಬುದ್ಧಿ ಹೇಳುವಷ್ಟು ದೊಡ್ಡವನಲ್ಲ. ಸಿದ್ದರಾಮಯ್ಯ ಅವರು ಜಾತಿ -ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ. ಟಿಪ್ಪು ಸುಲ್ತಾನ್‌ನನ್ನು ವೈಭವೀಕರಿಸಿ ಹಿಂದೂಗಳ ಭಾವನೆಗಳನ್ನು ಸುಟ್ಟು ಹಾಕುತ್ತಿದ್ದಾರೆ ಎಂದು ದೂರಿದರು.
ಆರ್‌ಎಸ್‌ಎಸ್ ಸಂಘಟನೆ ಬಗ್ಗೆ ಕೀಳುಮಟ್ಟದ ಹೇಳಿಕೆಗಳನ್ನು ನೀಡುವುದನ್ನು ಅವರು ನಿಲ್ಲಿಸಬೇಕು ಅವರ ಮನಸ್ಥಿತಿಯನ್ನು ಮೊದಲು ಸರಿಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಕಾಂಗ್ರೆಸ್‌ನವರು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೆಲವು ಸತ್ಯ ಸಂಗತಿಗಳು ಅವರಿಗೆ ಕಹಿಯಾಗಿ ಕಾಣುತ್ತವೆ. ಹಾಗೆಂದು ನಾವು ನೈಜ ಇತಿಹಾಸವನ್ನು ಮುಚ್ಚಿಡಲು ಆಗುವುದಿಲ್ಲ. ಇತಿಹಾಸದಲ್ಲಿ ಮುಚ್ಚಿಟ್ಟಿದ್ದನ್ನು ತಿಳಿಸುವುದಕ್ಕೆ ಹೊರಟಿದ್ದೇವೆ ಅಷ್ಟೇ. ಆದರೆ ಕಾಂಗ್ರೆಸ್‌ನವರು ವಿವಾದಗಳನ್ನು ಹುಟ್ಟುಹಾಕಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ದೂರಿದರು.