ಮನೆ ಉದ್ಯೋಗ ಸೆಸ್ಕಾಂ ಕೆಲಸ ಖಾಲಿ ಇದೆ; ಜೂನ್ 7ರೊಳಗೆ ಅರ್ಜಿ ಸಲ್ಲಿಸಿ

ಸೆಸ್ಕಾಂ ಕೆಲಸ ಖಾಲಿ ಇದೆ; ಜೂನ್ 7ರೊಳಗೆ ಅರ್ಜಿ ಸಲ್ಲಿಸಿ

0

ಮೈಸೂರು(Mysuru): ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಲಿಮಿಟೆಡ್ ( ​​ಸೆಸ್ಕಾಂ) ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು 7 ಜೂನ್ 2022ರ ತನಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ.

ಗ್ರಾಜುಯೇಟ್ ಮತ್ತು ಟೆಕ್ನಿಶಿಯನ್ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಕರೆದಿದೆ. ಒಟ್ಟು 135 ಹುದ್ದೆಗಳಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಮೈಸೂರಿನಲ್ಲಿ ಕೆಲಸ ಮಾಡಬೇಕಿದೆ.

ಭಾರತೀಯ ಅಂಚೆ ಇಲಾಖೆಯಲ್ಲಿ 38926 ಹುದ್ದೆಗಳಿವೆ ಅರ್ಜಿ ಹಾಕಿ ಅಭ್ಯರ್ಥಿಗಳಿಗೆ ಮಾಸಿಕ 8 ರಿಂದ 9 ಸಾವಿರದ ತನಕ ಸ್ಟೈಫಂಡ್ ನೀಡಲಾಗುತ್ತದೆ. ಎಲೆಕ್ಟ್ರಾನಿಕ್ & ಎಲೆಕ್ಟ್ರಾನಿಕ್ಸ್ 70, ಸಿವಿಲ್ 10, ಎಲೆಕ್ಟ್ರಾನಿಕ್ & ಎಲೆಕ್ಟ್ರಾನಿಕ್ಸ್ (ಟೆಕ್ನಿಕಲ್) 45, ಸಿವಿಲ್ (ಟೆಕ್ನಿಕಲ್) 10 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಬಿಡಿಎ ನೇಮಕಾತಿ; ಜೂನ್ 18ರೊಳಗೆ ಅರ್ಜಿ ಸಲ್ಲಿಸಿ ಎಲೆಕ್ಟ್ರಾನಿಕ್ & ಎಲೆಕ್ಟ್ರಾನಿಕ್ಸ್ ಮತ್ತು ಸಿವಿಲ್ (ಗ್ರಾಜುಯೇಟ್) ಹುದ್ದೆಗಳಿಗೆ ಬಿಇ, ಬಿಟೆಕ್ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಎಲೆಕ್ಟ್ರಾನಿಕ್ & ಎಲೆಕ್ಟ್ರಾನಿಕ್ಸ್, ಸಿವಿಲ್ (ಟೆಕ್ನಿಕಲ್) ಹುದ್ದೆಗಳಿಗೆ ಡಿಪ್ಲೊಮಾ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಎಸ್‌ಬಿಐ ಬ್ಯಾಂಕ್ ನೇಮಕಾತಿ; 641 ಹುದ್ದೆಗಳಿಗೆ ಅರ್ಜಿ ಹಾಕಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಲಿಮಿಟೆಡ್ ನೇಮಕಾತಿ ನಿಯಮಗಳ ಅನ್ವಯ ಅರ್ಜಿಗಳನ್ನು ಸಲ್ಲಿಕೆ ಮಾಡಲು 18 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.

ನೇಮಕಾತಿ ನಿಯಮಗಳ ಅನ್ವಯ ವಯೋಮಿತಿ ಸಡಿಲಿಕೆ ಸಹ ಇರುತ್ತದೆ. ಅರ್ಜಿಗಳನ್ನು ಸಲ್ಲಿಕೆ ಮಾಡುವವರು ಯಾವುದೇ ಶುಲ್ಕ ಪಾವತಿ ಮಾಡಬೇಕಿಲ್ಲ. ಮೆರಿಟ್ ಲಿಸ್ಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಗೊಂಡ ಎಲೆಕ್ಟ್ರಾನಿಕ್ & ಎಲೆಕ್ಟ್ರಾನಿಕ್ಸ್ ಮುತ್ತು ಸಿವಿಲ್ (ಗ್ರಾಜುಯೇಟ್) ಅಭ್ಯರ್ಥಿಗಳಿಗೆ 9 ಸಾವಿರ ರೂ. ಹಾಗೂ ಎಲೆಕ್ಟ್ರಾನಿಕ್ & ಎಲೆಕ್ಟ್ರಾನಿಕ್ಸ್, ಸಿವಿಲ್ (ಟೆಕ್ನಿಕಲ್) ಅಭ್ಯರ್ಥಿಗಳಿಗೆ 8 ಸಾವಿರ ರೂ. ಸ್ಟೈ ಫಂಡ್ ನೀಡಲಾಗುತ್ತಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚನ ಮಾಹಿತಿಗಾಗಿ 044-22542235 ಸಂಖ್ಯೆ ಅಥವ knplacement@boat ವಿಳಾಸಕ್ಕೆ ಇ-ಮೇಲ್ ಮಾಡಬಹುದು. ಹೆಚ್ಚಿನ ಮಾಹಿತಿಗೆ ವೆಬ ಸೈಟ್ ವಿಳಾಸ cescmysore.karnataka.gov.in