ಮೈಸೂರು: ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರಘಟಕದಿಂದ ಮನೆಮನೆಗೆ ಶ್ರಾವಣಮಾಸದ ಶರಣ ಸಂದೇಶಕಾರ್ಯಕ್ರಮ ರಂದು ಮೈಸೂರಿನ ಜ್ಯೋತಿರ್ಗಮಯ ಉಚಿತ ವಿದ್ಯಾರ್ಥಿ ನಿಲಯದಲ್ಲಿ ನಡೆಯಿತು.
`ಕರಿಯಂಜುವುದು ಅಂಕುಶಕ್ಕಯ್ಯಾ’ ಎಂಬ ವಿಷಯಕುರಿತು ಸಾಹಿತಿಗಳಾದ ನಗರ್ಲೆ ಶಿವಕುಮಾರ ಅವರು ಉಪನ್ಯಾಸ ನೀಡಿದರು.
ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರವನ್ನು ಹಾಗೂ ಗದ್ಯ ಮತ್ತು ಪದ್ಯ ಮಿಶ್ರಿತ ಸಾಹಿತ್ಯವನ್ನು ವಚನ ಸಾಹಿತ್ಯ ಹೊಂದಿದೆ. ಗುಪ್ತ ಅರ್ಥಗಳನ್ನು ಹೊಂದಿರುವ ವಚನಗಳಿಗೆ `ಬೆಡಗಿನ ವಚನಗಳು’ ಎನ್ನುತ್ತೇವೆ. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರ. ಕನ್ನಡ ಭಾಷೆಯ ಪದಗಳು ವಚನ ಸಾಹಿತ್ಯದಿಂದ ಉಳಿದಿವೆ. ಜಗತ್ತುಇರುವವರೆಗೆ ವಚನ ಸಾಹಿತ್ಯ ಅಮರವಾದುದು. ಕಾಯಕ ಮತ್ತುದಾಸೋಹಕ್ಕೆ ಮಹತ್ವ ನೀಡಿದ ಬಸವಾದಿ ಶರಣರು ನುಡಿದಂತೆ ನಡೆದು ತೋರಿಸಿದ್ದರು.
ತಮ್ಮ ವಚನಗಳ ಮೂಲಕ ನಾಡಿನ ಸಾಹಿತ್ಯ, ಸಂಸ್ಕೃತಿ, ಆಚಾರ ವಿಚಾರವನ್ನು ಬೆಳೆಸಿದರು. ಜಗತ್ತಿನಲ್ಲಿಯಾವುದೂದೊಡ್ಡದಲ್ಲ. ಅದಕ್ಕೆ ಪರ್ಯಾಯವನ್ನು ಪ್ರಕೃತಿ ಸೃಷ್ಟಿಸಿದೆ ಎಂಬುದನ್ನು ಶರಣರು ವಚನಗಳ ಮೂಲಕ ನಿರೂಪಿಸಿದ್ದಾರೆ. ಆನೆ-ಅಂಕುಶಕ್ಕೆ, ಗಿರಿ-ವಜ್ರಾಯುಧಕ್ಕೆ, ಕತ್ತಲು-ಜ್ಯೋತಿಗೆ, ಕಾಡು-ಕಿಚ್ಚಿಗೆಅಂಜುವಂತೆ, ಪಂಚಮಹಾಪಾತಕಗಳು ಕೂಡಲಸಂಗನ ನಾಮಕ್ಕೆ ಅಂಜುತ್ತವೆ ಎಂಬುದನ್ನು ತಿಳಿಸುತ್ತಾ ಇದಕ್ಕೆಉದಾಹರಣೆಯಾಗಿ ಬೇರೆ ವಚನಗಳನ್ನು ಉಲ್ಲೇಖಿಸಿದರು.
ಮಹಿಳೆಯರಿಗೆ ೯೦೦ ವರ್ಷಗಳ ಹಿಂದೆಯೇ ಸ್ವಾತಂತ್ರ್ಯವನ್ನು ನೀಡಿದ್ದ ಶರಣರುಜಾತಿರಹಿತ-ವರ್ಣರಹಿತ-ವರ್ಗರಹಿತ, ಸ್ತ್ರೀ, ಪುರುಷ, ಸಂಸಾರಿ, ಸನ್ಯಾಸಿ ಎಂಬ ಭೇದವಿಲ್ಲದೆಧಾರ್ಮಿಕ ಸಂಸ್ಕಾರದ ಮೂಲಕ ಇಷ್ಟಲಿಂಗವನ್ನು ಪಡೆಯಲು ಸರ್ವರಿಗೂ ಸಮಾನ ಅವಕಾಶವನ್ನು ಕಲ್ಪಿಸಿದರು.
ಅಷ್ಟಾವರಣ, ಪಂಚಾಚಾರ, ಷಟ್ ಸ್ಥಲಗಳ ಆಚರಣೆಯ ಮೂಲಕ ಶರಣಧರ್ಮದ ತತ್ವಗಳನ್ನು ಎತ್ತಿ ಹಿಡಿದರು. ಮಾನವನ ಮನಸ್ಸನ್ನು ಹತೋಟಿಯಲ್ಲಿಡಲು ಧರ್ಮದ ಅವಶ್ಯಕತೆ ಇದೆ ಎಂಬುದನ್ನು ಪ್ರತಿಪಾದಿಸಿದವರು ಶರಣರು ಎಂಬುದನ್ನು ನಗರ್ಲೆ ಶಿವಕುಮಾರ ಅವರು ಉಪನ್ಯಾಸದ ಮೂಲಕ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮ.ಗು. ಸದಾನಂದಯ್ಯನವರು ವಹಿಸಿ ಮಾತನಾಡಿದರು. ಪ್ರಾರ್ಥನೆಯನ್ನು ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು, ಶ್ರೀ ಸೋಮಣ್ಣಇತರರು ಮಾಡಿದರು.
ಸ್ವಾಗತವನ್ನು ಪ್ರಾಯೋಜಕರಾದ ಗೀತಾ ರಾಜಶೇಖರ, ನಿರೂಪಣೆಯನ್ನು ಕು. ಚಂದನ, ವಂದನಾರ್ಪಣೆ ಕಾರ್ಯದರ್ಶಿಗಳಾದ ಕುಮಾರಸ್ವಾಮಿಯವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿಜ್ಯೋತಿರ್ಗಮಯ ವಿದ್ಯಾರ್ಥಿನಿಲಯದ ಅಧ್ಯಕ್ಷ ಮಾದೇಶ್ ಹಾಗೂ ಸದಸ್ಯರು, ಇತರರು ಹಾಜರಿದ್ದರು.