ಮನೆ ಶಿಕ್ಷಣ ಕರ್ನಾಟಕ ಸಿಇಟಿ ಪ್ರವೇಶ ಪತ್ರ ಬಿಡುಗಡೆ: ಮೇ 20ಕ್ಕೆ ಪ್ರವೇಶ

ಕರ್ನಾಟಕ ಸಿಇಟಿ ಪ್ರವೇಶ ಪತ್ರ ಬಿಡುಗಡೆ: ಮೇ 20ಕ್ಕೆ ಪ್ರವೇಶ

0

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2023 ಪ್ರವೇಶ ಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಈ ಪ್ರವೇಶ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಿ ಅಡ್ಮಿಟ್ ಕಾರ್ಡ್ ಅನ್ನು ಪಡೆಯಬಹುದು.

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2023 ಪ್ರವೇಶ ಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಈ ಪ್ರವೇಶ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಿ ಅಡ್ಮಿಟ್ ಕಾರ್ಡ್ ಅನ್ನು ಪಡೆಯಬಹುದು.

ಹೈಲೈಟ್ಸ್‌:

  • ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2023
  • ಕೆಸಿಇಟಿ ‌ಪ್ರವೇಶ ಪತ್ರ ಬಿಡುಗಡೆ.
  • ಮೇ 20 ರಿಂದ ಪ್ರವೇಶ ಪರೀಕ್ಷೆ ಆರಂಭ.
  •  

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2023ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದನ್ನ ನೀಡಿದೆ. ಸಿಇಟಿ 2023 ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದ್ದು, ಕೆಇಎ ವೆಬ್‌ಸೈಟ್‌ http://kea.kar.nic.inಗೆ ಭೇಟಿ ನೀಡಿ ಡೌನ್‌ಲೋಡ್ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.

ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ಕೆಇಎ, ಸರ್ಕಾರದ ನಿರ್ದೇಶನದಂತೆ 2023ನೇ ಸಾಲಿನ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರಿನರಿ, ಬಿಎಸ್ಸಿ (ನರ್ಸಿಂಗ್) ಮುಂತಾದ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಸಿಇಟಿ-2023 ಪರೀಕ್ಷೆಯನ್ನು ನಿಗದಿತ ದಿನಾಂಕದಂದು ನಡೆಸಲಾಗುವುದು.

ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಅಥವಾ http://kea.kar.nic.inಗೆ ಭೇಟಿ ನೀಡಿ ನಿಗದಿತ ಲಿಂಕ್ ಅನ್ನು ಆಯ್ಕೆ ಮಾಡಿಕೊಂಡು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದೆ.


2023ರ ಸಿಇಟಿ’ಗೆ ಒಂದು ತಿಂಗಳು ಮಾತ್ರ ಬಾಕಿ.. ಪ್ರವೇಶ ಪರೀಕ್ಷೆಗೆ ತಯಾರಿ ಹೇಗಿರಬೇಕು? ಇಲ್ಲಿವೆ ಸಿಂಪಲ್‌ ಟಿಪ್ಸ್
KCET 2023 ಪ್ರವೇಶ ಪತ್ರ ಡೌನ್‌ಲೋಡ್ ವಿಧಾನ

  • .
  • ಓಪನ್‌ ಆದ ಪೇಜ್‌ನಲ್ಲಿ KCET 2023 ಹಾಲ್ ಟಿಕೆಟ್ ಎನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮಗೆ ಮತ್ತೊಂದು ಪೇಜ್‌ ಓಪನ್‌ ಆಗುತ್ತದೆ.
  • ಓಪನ್ ಆದ ಪೇಜ್‌ನಲ್ಲಿ ಅಭ್ಯರ್ಥಿಗಳು ನಿಮ್ಮ ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ಟೈಪ್‌ ಮಾಡಿ ಲಾಗಿನ್ ಆಗಿ.
  • ನಂತರ ನಿಮಗೆ ಪರದೆಯ ಮೇಲೆ ನಿಮ್ಮ ಹಾಲ್‌ ಟಿಕೆಟ್‌ ಕಾಣಸಿಗುಸುತ್ತದೆ.
  • ಅದನ್ನು ಡೌನ್‌ಲೋಡ್‌ ಮಾಡಿಕೊಂಡು, ಪ್ರಿಂಟ್‌ಔಟ್‌ ತೆಗೆದುಕೊಳ್ಳಿ.

KCET 2023: ಸಿಇಟಿ ಕ್ಯಾಟರಿಗಳ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಪರಿಷ್ಕೃತ ವೇಳಾ ಪಟ್ಟಿ ಪ್ರಕಟ
ಪ್ರವೇಶ ಪತ್ರವನ್ನು ಡೌನ್‌ಲೊಡ್‌ ಮಾಡಿಕೊಂಡ ಮೇಲೆ ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿರುವ ಮಾರ್ಗದರ್ಶನಗಳನ್ನು / ಕಾರ್ಯವಿಧಾನಗಳನ್ನು ತಪ್ಪದೆ ಅನುಸರಿಸಲು ಸೂಚಿಸಿದೆ.

ಪ್ರವೇಶ ಪತ್ರದಲ್ಲಿ ಮುದ್ರಿಸಿರುವ ಎಲ್ಲಾ ವಿವರಗಳನ್ನು ಪರಿಶೀಲಿಸಿ, ನಿಗದಿತ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗುವಂತೆ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚಿಸಿದೆ.

KCET EXAM 2023: ಕೆಇಎ ಇಂದ ಮಹತ್ವದ ಮಾಹಿತಿ. 2nd ಪಿಯುಸಿ ಪೂರಕ ಪರೀಕ್ಷೆ ತೆಗೆದುಕೊಳ್ಳೋರಿಗು ಸಿಇಟಿ ಬರೆಯಲು ಅವಕಾಶ
20-05-2023 ಮತ್ತು 21-05-2023 ರಂದು ಪ್ರವೇಶ ಪರೀಕ್ಷೆಗಳನ್ನು ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ. ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯನ್ನು ದಿನಾಂಕ 22-05-2023 ರಂದು ನಡೆಸಲಾಗುವುದು.

ಹಿಂದಿನ ಲೇಖನನರೇಂದ್ರ ಮೋದಿ ಚುನಾವಣಾ ಪ್ರಚಾರದ ಎಫೆಕ್ಟ್ ಗೆ ಕಾಂಗ್ರೆಸ್ ಕಸಿವಿಸಿ
ಮುಂದಿನ ಲೇಖನಭ್ರಷ್ಟಾಚಾರ ಆರೋಪ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ