ಮನೆ ದೇವಸ್ಥಾನ ವೈದ್ಯನಾಥೇಶ್ವರ ಸ್ವಾಮಿ ದೇವಾಲಯ

ವೈದ್ಯನಾಥೇಶ್ವರ ಸ್ವಾಮಿ ದೇವಾಲಯ

0

    ಈ ಸ್ವಾಮಿಯು ಸ್ವಯಂ ಭೂಲಂಗವಾಗಿದ್ದು ವಿಶಾಲವಾದ ಪರಿಸರದಲ್ಲಿ ನಲೆನಿಂತಿದ್ದಾರೆ. ಈ ದೇವಾಲಯವು 12ನೇ ಶತಮಾನದಲ್ಲಿ ಚೋಳರು ನಿರ್ಮಾಣ ಮಾಡಿದ್ದಾರೆ. ಈ ದೇವಾಲಯದ ಜಾಗದಲ್ಲಿ ಮುಂಚೆ ಒಂದು ದೊಡ್ಡ ಕೆರೆ ಇತ್ತೆಂದು ಪೂರ್ವಿಕರು ಹೇಳಿದ್ದಾರೆ.

Join Our Whatsapp Group

    ಒಂದು ಸಲ ಅರ್ಚಕರು ತಲಕಾಡಿನಿಂದ ಪೂಜೆ ಮುಗಿಸಿಕೊಂಡು ಬರಬೇಕಾದರೆ ಅವರ ಗಾಡಿಗೆ ಒಂದು ಕಲ್ಲು ಅಡ್ಡವಾಗಿ ಬಂದಿತ್ತು ಅದನ್ನು ಎಷ್ಟು ದೂರ ಎಸೆದರು ಮತ್ತೆ ಗಾಡಿಗೆ ಅಡ್ಡವಾಗಿ ಬರುತ್ತಿತ್ತು ಅದನ್ನು ಮತ್ತೆ ತೆಗೆದು ಎಸೆದು ಮುಂದೆ ಹೊರಡುತ್ತಾರೆ.

      ಅದೇ ವೈದೇಶ್ವರ ಶಿವಲಿಂಗ ಆಗಿರುತ್ತದೆ. ಅವರಿಗೆ ಗೊತ್ತಿಲ್ಲದೆ ಮುಂದೆ ಹೋಗುತ್ತಾರೆ..ಈ ಜಾಗದಲ್ಲಿ ಹಸುಗಳು ಮೇಯಿಸಲು ಬಂದಂತಹ ಹಸುಗಳು ಸ್ವಾಮಿಯ ತಲೆಯನ್ನು ಮೇಲೆ ಹಾಲು ಕರೆಯುತ್ತಿತ್ತು. ಮತ್ತು ಆ ಹಸು ಮನೆಗೆ ಹೋಗಿ ಹಾಲು ಕರೆದರೆ ಅದು ರಕ್ತವನ್ನು ಕರೆಯುತ್ತದೆ.ಅದನ್ನು ನೋಡಿ ಹಸುವಿನ ಮಾಲಿಕ ಹಸುಗಳ ಮೇಯಿಸಲು ಗೊಲ್ಲನನ್ನು ಕರೆದು ಬಯ್ಯುತ್ತಾನೆ,ಮೂರನೆಯ ದಿನ ಹಸುವನ್ನು ಹಿಂಬಾಲಿಸಿಕೊಂಡು ಬಂದು ನೋಡಿದಾಗ ಅದು ಸ್ವಾಮಿಗೆ ಹಾಲು ಕರೆಯುತ್ತಿರುತ್ತದೆ ಅದನ್ನು ನೋಡಿದಾಗ ಗೊಲ್ಲನ್ನು ಕೊಡಲಿಯಿಂದ ಆ ಸ್ವಾಮಿಯ ತಲೆಗೆ ಹೊಡೆಯುತ್ತಾನೆ.

     ಸ್ವಾಮಿಯ ತಲೆ ಚಿಪ್ಪು ಎಗರಿ ಹೋಗುತ್ತದೆ.ಆದ್ದರಿಂದ ರಕ್ತ ಬರುವುದನ್ನು ನೋಡಿ ಸ್ವಾಮಿಗೆ ಹೇಳುತ್ತಾನೆ.ನನ್ನಿಂದ ಅಪರಾಧವಾಗಿದೆ ದಯವಿಟ್ಟು ಕ್ಷಮಿಸಿ ಎಂದು ಕೇಳಿದಾಗ ಅಲ್ಲೇ ಇದ್ದ ಸೊಪ್ಪನ್ನು ಅರೆದು ಸ್ವಾಮಿಯ ತಲೆಗೆ ಹಚ್ಚಿದಾಗ ಸ್ವಾಮಿಯ ತಲೆಯಿಂದ ಹರಿಯುತ್ತಿರುವ ರಕ್ತ ನಿಂತು ಹೋಗುತ್ತದೆ.

       ಇದನ್ನು ತಿಳಿದ ಚೋಳರು ಒಂದು ರಾತ್ರಿಯಲ್ಲಿ ದೇವಾಲಯ ನಿರ್ಮಾಣ ಮಾಡಿ ಪೂಜಿಸಿದರೆಂದು ಇತಿಹಾಸ ತಿಳಿಸುತ್ತದೆ.ಇಲ್ಲಿಯ ಸ್ವಾಮಿಗೆ 800 ವರ್ಷಗಳ ಕಾಲ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಇಲ್ಲಿ ಎರಡು ಹೊತ್ತು ಅಭಿಷೇಕ ಬಹಳ ಮಡಿಯಿಂದ ನಿಷ್ಠೆಯಿಂದ ಆಚರಿಸುತ್ತಾ ಬಂದಿದ್ದಾರೆ.

       ಮತ್ತು ಕಾರ್ತಿಕ ಮಾಸದಲ್ಲಿ ಬಹಳ ವಿಶೇಷವಾಗಿ ನಾಲ್ಕು ವಾರಗಳಲ್ಲಿ ದೀಪೋತ್ಸವ ಅನ್ನ ಸಂತರ್ಪಣೆ ನಡೆಯುತ್ತದೆ.ವಿಶೇಷವಾಗಿ ಇಲ್ಲಿ ಚಂದ್ರಮಂಡಲೊತ್ಸವ ಇಂದು ಮಾಡುತ್ತಾರೆ ಅದನ್ನು ನೋಡಲು ಬಹಳ ಜನ ಭಕ್ತಾದಿಗಳು ಬೇರೆ ಊರುಗಳಿಂದ ಬರುತ್ತಾರೆ ನದಿಯಿಂದ ತೇರು ತರುವ ಮುಖಾಂತರ ಬಹಳ ವಿಜ್ರಂಭಣೆಯಿಂದ ಕಾರ್ಯಕ್ರಮಗಳನ್ನು ನಡೆಸುತ್ತಾರೆ.

      ಈ ದಿನ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪಟಾಕಿ ಉತ್ಸವ ಎಂದು ಪಟಾಕಿ ಹೊಚ್ಚುವುದರ ಮೂಲಕ ಮಾಡುತ್ತಾರೆ ಊರಿನ ಗ್ರಾಮಸ್ಥರು ಸೇರಿ ಪಟಾಕಿಯನ್ನು ರೆಡಿ ಮಾಡಿ ಸ್ವಾಮಿ ಉತ್ಸವ ಆಚರಿಸುತ್ತಾರೆ.ಮತ್ತೊಂದು ವಿಶೇಷವೆಂದರೆ ಇಲ್ಲಿ ಧೂಪಸೇವೆ ಎಂದು ಮಾಡುತ್ತಾರೆ.ಹರಕೆ ಹೊತ್ತ ಭಕ್ತಾದಿಗಳು ಅದು ನೆರವೇರಿಸಿದ ಸ್ವಾಮಿಗೆ ಮಾಡುವ ಸೇವೆ ಇಲ್ಲಿ ಒಂದು ಧೂಪದ ಕಲ್ಲು ಇದೆ.ಆ ಕಲ್ಲಿನಲ್ಲಿ ಕೆಂಡ ಹಾಕಿ ದೂಪ ಹಾಕಿ ಹರಕೆ ಹೊತ್ತ ಭಕ್ತರು ಇದನ್ನು ತಲೆಯ ಮೇಲೆ ಹೊತ್ತು ದೇವಾಲಯಕ್ಕೆ ಒಂಬತ್ತು ಪ್ರದಕ್ಷಣೆ ಬರುವ ಪ್ರತೀತೀ ಇದೆ.