ಮನೆ ರಾಜ್ಯ ಪ್ರೆಮಿಗಳ ದಿನಾಚರಣೆ – ಕೆಂಪು ಗುಲಾಬಿಗೆ ಭಾರೀ ಬೇಡಿಕೆ; ವಿದೇಶಗಳಿಗೂ ರಪ್ತು..!

ಪ್ರೆಮಿಗಳ ದಿನಾಚರಣೆ – ಕೆಂಪು ಗುಲಾಬಿಗೆ ಭಾರೀ ಬೇಡಿಕೆ; ವಿದೇಶಗಳಿಗೂ ರಪ್ತು..!

0

ಚಿಕ್ಕಬಳ್ಳಾಪುರ : ಕೆಂಪು ಗುಲಾಬಿ ಕಂಡ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಫೆಬ್ರವರಿ 14 ಪ್ರೆಮಿಗಳ ದಿನ. ಪ್ರೀತಿಯ ಹುಡುಗಿಯನ್ನು ಓಲೈಸಿಕೊಳ್ಳಲು, ಗೆಳೆಯನ ಅಪ್ಪುಗೆ ಬಯಸುವ ಪ್ರತಿಯೊಂದು ಮನಸ್ಸು ಮೊದಲು ಕೊಡೋದು ಈ ಕೆಂಪು ಗುಲಾಬಿಯನ್ನೇ. ಇದೇ ಕಾರಣಕ್ಕೆ ಕಲರ್‌ಫುಲ್‌ ರೆಡ್‌ರೋಸ್‌ಗಳಿಗೆ ಸಖತ್ ಡಿಮ್ಯಾಂಡ್. ತಲಾ ಒಂದೊಂದು ಹೂಗಳಿಗೆ 20 ರೂಪಾಯಿ ಕೊಟ್ಟು ಹೂ ವರ್ತಕರು ಹೂ ಖರೀದಿ ಮಾಡಲು ಮುಗಿಬಿದ್ದಿದ್ದಾರೆ. ಇತ್ತ ರೆಡ್ ರೋಸ್‌ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಬೀರಿದೆ. ಪ್ರೀತಿಗೂ ರೆಡ್ ರೋಸ್‌ಗೂ ಅವಿನಾಭಾವ ನಂಟು. ರೆಡ್ ರೋಸ್ ಕೊಟ್ಟು ವಿಶ್ ಮಾಡೋದೇ ಪ್ರೇಮಿಗಳಿಗೆ ಖುಷಿ ವಿಚಾರವಾಗಿದೆ.

ಫೆಬ್ರವರಿ 14 ಬಂದ್ರೆ ಸಾಕು, ಪ್ರೇಮಿಗಳಿಗೆ ಎಲ್ಲಿಲ್ಲದ ರೋಮಾಂಚನ, ರೋಸ್ ಕೊಟ್ಟು ಸಿಹಿ ಮುತ್ತು ನೀಡಿ ಇವಳನ್ನ ಅವನು, ಅವನನ್ನು ಇವಳು ಅಪ್ಪಿ ಮುದ್ದಾಡುವ ತವಕದಲ್ಲಿರುತ್ತಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಈ ದಿನ ಮತ್ತೊಂದು ಖುಷಿ. ಏಕೆಂದ್ರೆ ಪ್ರೇಮಿಗಳ ದಿನದ ಪ್ರಯುಕ್ತ, ತಲಾ ಒಂದೊಂದು ರೆಡ್ ರೋಜ್ ಹೂವಿಗೆ 20 ರೂಪಾಯಿ ಕೊಟ್ಟು ದೊಡ್ಡ ದೊಡ್ಡ ವರ್ತಕರು ಹೂಗಳನ್ನು ಖರೀದಿ ಮಾಡಿ ವಿದೇಶಗಳಿಗೆ ರಪ್ತು ಮಾಡ್ತಿದ್ದಾರೆ.

ಚಿಂತಾಮಣಿ ತಾಲೂಕಿನ ಆನೂರು ಹೊಸಕೋಟೆ ನಿವಾಸಿ ಕೃಷ್ಣರೆಡ್ಡಿ ಎನ್ನುವವರು 4 ಎಕರೆ ಪಾಲಿ ಹೌಸ್ ನಲ್ಲಿ, ಕಲರ್ ಪುಲ್ ವಿವಿಧ ಬಣ್ಣಗಳ ಗುಲಾಬಿ ಬೆಳೆದಿದ್ದು, ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ರೈತ ಕೃಷ್ಣರೆಡ್ಡಿ 16 ಕಲರ್ ಗಳ ಗುಲಾಬಿ ಹೂ ಬೆಳೆದಿದ್ದಾರೆ. ಅದರಲ್ಲಿ ಸದ್ಯ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ರೆಡ್ ರೋಜ್‌ಗೆ ಭಾರೀ ಡಿಮ್ಯಾಂಡ್ ಬಂದಿದೆ. ಅದರಲ್ಲೂ ಗುಲಾಬಿಯ ನೀಳಕಾಂಡ, ಹೊಳಪು ವೈಯ್ಯಾರ, ಮುಳ್ಳುಗಳಲ್ಲಿಲ್ಲದ ಕೆಂಪು ಬಣ್ಣದ ಕೆಂಗುಲಾಬಿಗೆ ಇನ್ನೂ ಡಿಮ್ಯಾಂಡ್ ಹೆಚ್ಚಾಗಿದೆ.

ರೆಡ್ ಕಲರ್ ರೋಸ್‌ ನೋಡಿದ ತಕ್ಷಣ ಅವಳ ಕೆಂದುಟಿ ಬಿರಿ ತಪ್ಪಿಕೊಂಡು ಮುದ್ದಾಡುವಂತಿರಬೇಕಂತೆ. ಇನ್ನೂ ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳಲ್ಲಿ ಬೆಳೆಯುವ ಗುಲಾಭಿಗೆ ದೇಶ ವಿದೇಶಗಳಲ್ಲಿ ಬೇಡಿಕೆ ಇದೆಯಂತೆ. ವರ್ಷಾನುಗಟ್ಟಲೆ ಹೂಗಳನ್ನು ಬೆಳೆಯುವುದೂ ಒಂದೇ, ಫೆಬ್ರವರಿ ತಿಂಗಳಲ್ಲಿ ಹೂಗಳನ್ನ ಬೆಳೆಯುವುದೂ ಒಂದೇ. ಫೆಬ್ರವರಿ 14 ರ ಪ್ರೇಮಿಗಳ ದಿನಾಚರಣೆಗೂ ಮುನ್ನ, ವಿದೇಶಗಳಲ್ಲಿ ರೋಸ್‌ ಡೇ, ಪ್ರಪೋಸ್‌ ಡೇ, ಟೆಡ್ಡಿ ಡೇ, ಚಾಕೊಲೇಟ್ ಡೇ, ಪ್ರಾಮೀಸ್ ಡೇ, ಹಗ್ ಡೇ, ಕಿಸ್ ಡೇ ಸೇರಿದಂತೆ ವಿವಿಧ ಡೇ ಗಳ ಮೂಲಕ ಪ್ರೀತಿ ಪ್ರೇಮ ಹಂಚಿಕೊಳ್ಳುತ್ತಾರೆ. ಇದ್ರಿಂದ ಎಲ್ಲಾ ಡೇ ಗಳ ಪ್ರೇಮ ನಿವೇದನೆಗೆ ಈ ರೆಡ್ ರೋಜ್ ಬೇಕಾಗಿದೆ.