ಮನೆ ರಾಷ್ಟ್ರೀಯ ನ.10 ರಂದು ದಕ್ಷಿಣ ಭಾರತ ಪ್ರಯಾಣ ಆರಂಭಿಸಲಿರುವ ವಂದೇ ಭಾರತ್ ಎಕ್ಸ್‌’ಪ್ರೆಸ್

ನ.10 ರಂದು ದಕ್ಷಿಣ ಭಾರತ ಪ್ರಯಾಣ ಆರಂಭಿಸಲಿರುವ ವಂದೇ ಭಾರತ್ ಎಕ್ಸ್‌’ಪ್ರೆಸ್

0

ನವದೆಹಲಿ(Newdelhi): ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌’ಪ್ರೆಸ್ ರೈಲು ನವೆಂಬರ್ 10 ರಂದು  ದಕ್ಷಿಣ ಭಾರತದಲ್ಲಿ ಪ್ರಯಾಣ ಆರಂಭಿಸಲಿದೆ.

ವಂದೇ ಭಾರತ್ ಎಕ್ಸ್‌’ಪ್ರೆಸ್ ಪ್ರಯಾಣಿಕ ರೈಲು ದಕ್ಷಿಣ ಭಾರತಕ್ಕೂ ಪ್ರವೇಶಿಸಲಿದ್ದು, ಚೆನ್ನೈ-ಬೆಂಗಳೂರು ಹಾಗೂ ಮೈಸೂರು ನಡುವೆ ಸಂಚರಿಸಲಿದೆ ಎಂದು ವರದಿಯಾಗಿದೆ.

ಚೆನ್ನೈ-ಬೆಂಗಳೂರು-ಮೈಸೂರು ನಡುವಣ ವಂದೇ ಭಾರತ್ ಎಕ್ಸ್‌’ಪ್ರೆಸ್ ಒಟ್ಟು 483 ಕಿ.ಮೀ. ದೂರವನ್ನು ಕ್ರಮಿಸಲಿದೆ.

ಚುನಾವಣೆ ಸಮೀಪಿಸುತ್ತಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗಷ್ಟೇ ವಂದೇ ಭಾರತ್ ಎಕ್ಸ್‌ಪ್ರೆಸ್‌ ಅನ್ನು ಭಾರತೀಯ ರೈಲ್ವೆ ಬಿಡುಗಡೆಗೊಳಿಸಿತ್ತು. ಕರ್ನಾಟಕದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆಯಿದೆ.

ವಂದೇ ಭಾರತ್ 2.0 ರೈಲುಗಳು, ‘ಕವಚ’ ಎಂಬ ರೈಲು ಡಿಕ್ಕಿ ತಪ್ಪಿಸುವ ವ್ಯವಸ್ಥೆ (ಟಿಸಿಎಎಸ್) ಸೇರಿದಂತೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಈ ರೈಲು ಕೇವಲ 52 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿ.ಮೀ. ವೇಗವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ.

ಹಿಂದಿನ ಲೇಖನನ.12 ರಂದು ರಾಷ್ಟ್ರೀಯ ಲೋಕ ಅದಾಲತ್: ನ್ಯಾ. ಎಂ.ಎಲ್.ರಘುನಾಥ್‌
ಮುಂದಿನ ಲೇಖನಬಜೆಟ್ ಸ್ನೇಹಿ ಪ್ರವಾಸಿ ತಾಣಗಳು