ಮನೆ ಸಾಹಿತ್ಯ ದಸರಾ ಮಹೋತ್ಸವ-2023 ರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

ದಸರಾ ಮಹೋತ್ಸವ-2023 ರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

0

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸದ ಸಾಂಸ್ಕೃತಿಕ ಉಪಸಮಿತಿಯ ವತಿಯಿಂದ ದಸರಾ ಮಹೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 2023ರ ಅಕ್ಟೋಬರ್ 15 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.

ಅರಮನೆಯ ಆವರಣದಲ್ಲಿರುವ ಮುಂಭಾಗದ ವೇದಿಕೆಯಲ್ಲಿ ಸಂಜೆ 6 ಗಂಟೆಗೆ ಸಚಿವರು, ಸ್ಥಳೀಯ ಶಾಸಕರುಗಳ ಉಪಸ್ಥಿತಿಯಲ್ಲಿ ಚಾಲನೆ ನೀಡಲಿದ್ದು, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಸಮಾರಂಭ ಕಾರ್ಯಕ್ರದಲ್ಲಿ ಭಾಗವಹಿಸಲಿದ್ದಾರೆ.

ದಸರಾ ಮಹೋತ್ಸವ ಅಂಗವಗಿ ಒಟ್ಟು 9 ದಿನಗಳ ಕಾಲ ದಸರಾ ಸಾಂಸ್ಕೃತಿಕ ಉಪಸಮಿತಿಗೆ ಸ್ವೀಕೃತವಾಗಿರುವ ಅರ್ಜಿಗಳನ್ನು ಪರಿಶೀಲಿಸಿ ವಿವಿಧ ಕಲಾಪ್ರಕಾರ ಉತ್ತಮ ತಂಡಗಳನ್ನು ಆಯ್ಕೆಮಾಡಿ ಜಗನ್ಮೋಹನ ಅರಮನೆ, ಕರ್ನಾಟಕ ಕಲಾಮಂದಿರ, ಗಾನಭಾರತಿ, ನಾದಬ್ರಹ್ಮ ಸಂಗೀತಾ ಸಭಾ, ಚಿಕ್ಕಗಡಿಯಾರ ಮತ್ತು ನಂಜನಗೂಡಿನಲ್ಲಿ ಕಲಾತಂಡಗಳಿ0ದ ಪ್ರದರ್ಶನವನ್ನು ಏರ್ಪಡಿಸಲಾಗುವುದು.

ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಸಾಂಪ್ರಾದಾಯಿಕ ಗೀತೆಗಳು, ತತ್ವಪದಗಳು, ಹರಿಕಥೆ, ಜನಪದ ಗಾಯನ, ವಾದ್ಯ, ಸೂತ್ರ ಸಲಾಕೆ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಿಗದಿಪಡಿಸಿ ಪ್ರಸ್ತುತಪಡಿಸಲಾಗವುದು.

ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಮತ್ತು ರಂಗಗೀತೆಗಳ ಕಾರ್ಯಕ್ರಮಗಳು, ಆಧುನಿಕ ನಾಟಕಗಳು, ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿ ಕಲಾವಿದರುಗಳಿಂದ ಅಕ್ಟೋಬರ್ 15 ರಿಂದ 23ರವರೆಗೆ ಪುರಭವನ, ಕಿರುರಂಗಮ0ದಿರ, ನಟನ ರಂಗಮ0ದಿರ ಹಾಗೂ ರಮಾಗೋವಿಂದ ರಂಗಮ0ದಿರದಲ್ಲಿ ಪ್ರದರ್ಶನಗಳನ್ನು ಏರ್ಪಡಿಸಲಾಗುವುದು.

ಅರಮನೆ ವೇದಿಕೆಯಲ್ಲಿ ನಾದಸ್ವರ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಿ ಪ್ರತಿ ಕಾರ್ಯಕ್ರಮಕ್ಕೆ 45 ನಿಮಿಷಗಳ ಸಮಯಾವಕಾಶ ನಿಗದಿಪಡಿಸಿ ಸ್ಯಾಕ್ಸೋಫೋನ್ ವಾದನ, ವಯೋಲಿನ್ ವಾದನ, ಒಡೆಯರ್ ಕೃತಿಗಳ ಕುರಿತ ನೃತ್ಯರೂಪಕ, ಭರತನಾಟ್ಯ ಸೇರಿದಂತೆ ವಿವಿಧ ಕಲಾಪ್ರಕಾರಗಳ ಕಾರ್ಯಕ್ರಮಗಳನ್ನು ಅಕ್ಟೋಬರ್ 21 ರಂದು ಸೂರ್ಯೋದಯದಿಂದ ಸೂರ್ಯಾಸ್ತಮದವರೆಗೆ ಏರ್ಪಡಿಸಲಾಗುವುದು.

ಮೈಸೂರಿನ ವಿವಿಧ ಪ್ರದೇಶಗಳಲ್ಲಿ ವಾದ್ಯಗೋಷ್ಠಿಯೊಂದಿಗೆ ವಿವಿಧ ಕಲಾತಂಡಗಳಿ0ದ ಸುಗಮ ಸಂಗೀತ, ವಾದ್ಯ ಸಂಗೀತ, ಭಕ್ತಿಗೀತೆಗಳು, ಭಾವಗೀತೆಗಳು, ಸಾಂಪ್ರದಾಯಿಕ ಗೀತೆಗಳು ಸೇರಿದಂತೆ ಇತರೆ ಗಾಯನ ಕಾರ್ಯಕ್ರಮಗಳನ್ನು ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಕನಿಷ್ಠ 30 ನಿಮಿಷಗಳ ಕಾಲ ಸಂಚಾರಿ ವಾಹನದಲ್ಲಿ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಗುವುದು.