ಬೆಂಗಳೂರು: ಕರ್ನಾಟಕದ ಹಲವೆಡೆ ಈ ವಾರ ಭಾರಿ ಮಳೆ ಬಿದ್ದಿದೆ. ಆದರೆ ದಿಢೀರ್ ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿದೆ.
ಕರಾವಳಿ ಕರ್ನಾಟಕ ಭಾಗದ ಮಳೆ ಪೀಡಿತ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಗೆ ಬೇಗ ಸ್ಪಂದಿಸಲು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ.
ಈ ವಾರ ಪೂರ್ತಿ ಭರ್ಜರಿಯಾಗಿ ಮಳೆ ಬಿದ್ದಿದ್ದು, ಮಲೆನಾಡು ಭಾಗದಲ್ಲಿ ಹುಟ್ಟುವ ನದಿಗಳೂ ಭೋರ್ಗರೆಯುತ್ತವೆ. ಆದರೆ ಈ ಬಾರಿ ದಿಢೀರ್ ಮಲೆನಾಡಿನ ಮಳೆ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದೆ.
ಇಷ್ಟೆಲ್ಲದರ ನಡುವೆ ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳಲ್ಲಿ ಒಳಹರಿವು ತಗ್ಗಿದೆ. ಭದ್ರಾ ಡ್ಯಾಂನಲ್ಲಿ 6030 ಕ್ಯುಸೆಕ್ ಒಳಹರಿವು ಇದೆ.
ಇನ್ನು ಬರದ ಛಾಯೆ ಜುಲೈ ತಿಂಗಳ ಮೊದಲ ವಾರವೇ ಮರೆಯಾಗುತ್ತಿದೆ. ಹಲವೆಡೆ ಭರ್ಜರಿ ಮಳೆ ಸುರಿದಿದ್ದು, ಜನರು ಹಾಗೂ ಮುಖ್ಯವಾಗಿ ರೈತರು ಖುಷಿಯಾಗಿದ್ದಾರೆ.