ಮನೆ ರಾಜಕೀಯ ವರುಣ: ಏ.15 ರಂದು ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ

ವರುಣ: ಏ.15 ರಂದು ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ

0

ಮೈಸೂರು: ಜಿಲ್ಲೆಯಲ್ಲಿ ಕಾಂಗ್ರೆಸ್‌ ಟಿಕೆಟ್ ಪಡೆದಿರುವ ಅಭ್ಯರ್ಥಿಗಳು ಏ.15ರಿಂದ ಆಯಾ ಚುನಾವಣಾಧಿಕಾರಿಗಳಿಗೆ ನಾಮಪತ್ರಗಳನ್ನು ಸಲ್ಲಿಸಲಿದ್ದಾರೆ.

Join Our Whatsapp Group

ಹುಣಸೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಚ್‌.ಪಿ.ಮಂಜುನಾಥ್ ಏ.15ರಂದು ಮಧ್ಯಾಹ್ನ 12ಕ್ಕೆ ಹುಣಸೂರಿನಲ್ಲಿ, ಎಚ್.ಡಿ.ಕೋಟೆ ಕ್ಷೇತ್ರದ ಅಭ್ಯರ್ಥಿ ಅನಿಲ್‌ ಚಿಕ್ಕಮಾದು ಏ.17ರಂದು ಮಧ್ಯಾಹ್ನ 2ಕ್ಕೆ ಎಚ್‌.ಡಿ.ಕೋಟೆಯಲ್ಲಿ ಉಮೇದುವಾರಿಕೆ ನೀಡಲಿದ್ದಾರೆ.

ವರುಣ ಕ್ಷೇತ್ರದ ಅಭ್ಯರ್ಥಿ ಸಿದ್ದರಾಮಯ್ಯ ಏ.19ರಂದು ಮಧ್ಯಾಹ್ನ 2ಕ್ಕೆ ನಂಜನಗೂಡು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವರು.

ಪಿರಿಯಾಪಟ್ಟಣದ ಅಭ್ಯರ್ಥಿ ಕೆ.ವೆಂಕಟೇಶ್‌ ಮತ್ತೊಮ್ಮೆ ಏ.17ರಂದು ಮಧ್ಯಾಹ್ನ 2ಕ್ಕೆ ಪಿರಿಯಾಪಟ್ಟಣದಲ್ಲಿ, ನಂಜನಗೂಡು ಅಭ್ಯರ್ಥಿ ದರ್ಶನ್‌ ಧ್ರುವನಾರಾಯಣ ಏ.17ರಂದು ಮಧ್ಯಾಹ್ನ 12ಕ್ಕೆ ನಂಜನಗೂಡಿನಲ್ಲಿ, ಚಾಮುಂಡೇಶ್ವರಿ ಕ್ಷೇತ್ರದಿಂದ ಮಾವಿನಹಳ್ಳಿ ಎಸ್.ಸಿದ್ದೇಗೌಡ ಏ.17ರಂದು ಮಧ್ಯಾಹ್ನ 3ಕ್ಕೆ ಮೈಸೂರು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ, ಕೆ.ಆರ್.ನಗರದ ಅಭ್ಯರ್ಥಿ ಡಿ.ರವಿಶಂಕರ್‌ ಏ.17ರಂದು ಮಧ್ಯಾಹ್ನ 12ಕ್ಕೆ ಕೆ.ಆರ್.ನಗರದಲ್ಲಿ, ತಿ.ನರಸೀಪುರ ಕ್ಷೇತ್ರದಿಂದ ಡಾ.ಎಚ್‌.ಸಿ.ಮಹದೇವಪ್ಪ ಏ.20ರಂದು ಮಧ್ಯಾಹ್ನ 12ಕ್ಕೆ ತಿ.ನರಸೀಪುರದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್‌ ತಿಳಿಸಿದ್ದಾರೆ.