ಮನೆ ರಾಷ್ಟ್ರೀಯ ತಮಿಳುನಾಡಿನಲ್ಲಿ ಫೆಂಗಲ್‌  ಚಂಡಮಾರುತ: ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ

ತಮಿಳುನಾಡಿನಲ್ಲಿ ಫೆಂಗಲ್‌  ಚಂಡಮಾರುತ: ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ

0

ಚೆನ್ನೈ: ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರೂಪುಗೊಂಡಿರುವ ‘ಫೆಂಗಲ್’ ಚಂಡಮಾರುತ ಮುಂದಿನ 12 ಗಂಟೆಗಳಲ್ಲಿ ಕರಾವಳಿ ಅಪ್ಪಳಿಸಲಿದೆ ಎಂದು ಇಲ್ಲಿನ ಪ್ರಾದೇಶಿಕ ಹವಾಮಾನ ಕೇಂದ್ರ ಗುರುವಾರ ತಿಳಿಸಿದೆ.

Join Our Whatsapp Group

ನವೆಂಬರ್‌ 30ರಂದು ಈ ಚಂಡಮಾರುತ ಗಂಟೆಗೆ 60–70 ಕೀ.ಮೀ ವೇಗದಲ್ಲಿ ಕರೈಕಲ್-ಮಹಾಬಲಿಪುರಂ ದಾಟಿ ಶ್ರೀಲಂಕಾ ಕರಾವಳಿ ಅಪ್ಪಳಿಸಲಿದೆ ಎಂದು ಹವಾಮಾನ ಕೇಂದ್ರ ಹೇಳಿದೆ.

ಸದ್ಯ ಸ್ಥಿರಗೊಂಡಿರುವ ಈ ಚಂಡಮಾರುತದ ಪರಿಣಾಮ ಚೆನ್ನೈ ಕರಾವಳಿ, ಪುದುಚೇರಿ, ನಾಗಪಟ್ಟಣಂ, ಕರೈಕಲ್, ಮಹಾಬಲಿಪುರಂ ಸೇರಿದಂತೆ ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಮಳೆ ಸುರಿಯಲಿದೆ.

ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.