ಮೈಸೂರು: KA-09 / AB-2666 ಸಂಖ್ಯೆಯ ವಾಹನದ ನೋಂದಣಿಯಲ್ಲಿ ಆಗಿರುವ ಅಕ್ರಮದಲ್ಲಿ ಭಾಗಿಯಾಗಿರುವ ಮೋಟಾರು ವಾಹನ ನಿರೀಕ್ಷಕರಾದ ಅನಂತ್ ರಾಮ್ ಮತ್ತು ಅವರಿಗೆ ಸಹಕಾರ ನೀಡಿರುವ ಇತರೆ ಸಿಬ್ಬಂದಿಗಳ ವಿರುದ್ಧ ಮೈಸೂರು ವಿಭಾಗ ಜಂಟಿ ಸಾರಿಗೆ ಆಯುಕ್ತರು, ಸಾರಿಗೆ ಇಲಾಖೆ ಆಯುಕ್ತರು ಹಾಗೂ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ.
ಪಶ್ಚಿಮ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ KA-09 / AB-2666 ಎಂಬ ಸಂಖ್ಯೆಯ ವಾಹನವು ನೋಂದಾವಣಿಯಾಗಿರುತ್ತದೆ. ಸದರಿ ವಾಹನದ ನೋಂದಣಿ ಸಮಯದಲ್ಲಿ ಮೋಟಾರು ವಾಹನ ನಿರೀಕ್ಷಕರಾದ ಅನಂತ್ ರಾಮ್ ರವರು ವಾಹನದ ಪರೀಕ್ಷೆಯನ್ನು ಮಾಡದೇ ನಕಲಿ ತಪಾಸಣಾ ವರದಿಯನ್ನು ನೀಡಿರುತ್ತಾರೆ.
ಮೋಟಾರು ಕಾಯ್ದೆಯನ್ವಯ KA-09 / AB-2666 ಸಂಖ್ಯೆಯ ವಾಹನಕ್ಕೆ ಸರ್ಕಾರದ ಯಾವುದೇ ಪ್ರಮಾಣಿತ ಮಾನದಂಡಗಳಿಲ್ಲ. ಆದರೂ ಸಹ ಮೋಟಾರು ವಾಹನ ನಿರೀಕ್ಷಕರಾದ ಅನಂತ್ ರಾಮ್ ರವರು ಸುಳ್ಳು ವರದಿಯನ್ನು ಸರ್ಕಾರಕ್ಕೆ ನೀಡಿರುತ್ತಾರೆ.
ಸದರಿ ವಾಹನಕ್ಕೆ ತೆರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪುಶ್ ಬ್ಯಾಕ್ ಸೀಟಿಂಗ್ ಸೌಲಭ್ಯವುಳ್ಳ ಸದರಿ ವಾಹನಕ್ಕೆ ಸಾಧಾರಣ ಸೀಟಿಂಗ್ ವಾಹನವೆಂದು ಸುಳ್ಳು ವರದಿಯನ್ನು ಸರ್ಕಾರಕ್ಕೆ ನೀಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುತ್ತಾರೆ.

ಸದರಿ ವಾಹನಕ್ಕೆ ತೆರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹವಾನಿಯಂತ್ರಿತ ವಾಹನವಾದ KA-09 / AB-2666ಸಂಖ್ಯೆಯ ವಾಹನಕ್ಕೆ ಸಾಧಾರಣ ಅಂದರೆ ಹವಾ ನಿಯಂತ್ರಿತವಲ್ಲದ ವಾಹನಕ್ಕೆ ಪಡೆಯಬಹುದಾದ ತೆರಿಗೆಯನ್ನು ನಿರ್ಧರಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುತ್ತಾರೆ.
ಸರ್ಕಾರದ ನಿಯಮದಂತೆ ವಾಹನಕ್ಕೆ ಹೆಡ್ ಲೈಟ್ ದೀಪಗಳನ್ನು ಅಳವಡಿಸದೇ ಹೈ ಬೀಮ್ ಎಲ್ ಇಡಿ ಲೈಟ್ ಮತ್ತು ಜಗಮಗಿಸುವ ಬಣ್ಣಬಣ್ಣದ ಅಲಂಕಾರಿಕ ದೀಪಗಳನ್ನು ಅಳವಡಿಸಿ ಸರ್ಕಾರದ ಕಾಯ್ದೆ ಮತ್ತು ಕಾನೂನನ್ನು ಉಲ್ಲಂಘಿಸಿದರೂ ಸಹ ಮೋಟಾರು ಅನಂತ್ ರಾಮ್ ರವರು ವಾಹನದ ನೋಂದಣಿಗೆ ಅನುಮತಿಯನ್ನು ನೀಡಿರುತ್ತಾರೆ.
ವೀಲ್ ಬೇಸ್ ಆಧಾರಿತವಾಗಿ 55 ಆಸನ ಸಾಮರ್ಥ್ಯದ ವಾಹನಕ್ಕೆ 49 ಆಸನ ಸಾಮರ್ಥ್ಯದ ವಾಹನವೆಂದು ಸುಳ್ಳಾಗಿ ಪರಿಗಣಿಸಿ ಹೆಚ್ಚಿನ ತೆರಿಗೆಯನ್ನು ಪಡೆಯಬೇಕಿದ್ದ ಲೆಕ್ಕದಲ್ಲಿ ಕಡಿಮೆ ತೆರಿಗೆಯನ್ನು ಪಡೆದು ಮೋಟಾರು ವಾಹನ ನಿರೀಕ್ಷಕರಾದ ಅನಂತ್ ರಾಮ್ ರವರು ಸರ್ಕಾರಕ್ಕೆ ತರಿಗೆ ಮೋಸ ಮಾಡಿ ವಾಹನದ ಮಾಲೀಕರಿಗೆ ಅನುಕೂಲ ಮಾಡಿ ಕೊಡುವ ದುರುದ್ದೇಶದಿಂದ ತಪಾಸಣೆಯ ನಾಟಕವಾಡಿ ಸುಳ್ಳಿನಿಂದ ಕೂಡಿದ ತಪ್ಪು ವರದಿಯನ್ನು ಸರ್ಕಾರಕ್ಕೆ ನೀಡಿ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವನ್ನು ಮಾಡಿರುತ್ತಾರೆ.

ಅನಂತ್ ರಾಮ್ ರವರು ಸರ್ಕಾರಕ್ಕೆ ತೆರಿಗೆ ಮೋಸ ಮಾಡಿ ವಾಹನದ ಮಾಲೀಕರಿಗೆ ಅನುಕೂಲ ಮಾಡಿಕೊಡುವ ದುರುದ್ದೇಶದಿಂದ ತಪಾಸಣೆಯ ನಾಟಕವಾಡಿ ಸುಳ್ಳಿನಿಂದ ಕೂಡಿದ ತಪ್ಪು ವರದಿಯನ್ನು ಸರ್ಕಾರಕ್ಕೆ ನೀಡಿ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವನ್ನು ಮಾಡುವುದಲ್ಲದೇ ತಮ್ಮ ಕರ್ತವ್ಯಕ್ಕೆ ದ್ರೋಹ ಬಗೆದು ಅಕ್ರಮವನ್ನು ಮಾಡಿರುತ್ತಾರೆ.
ತತ್ತಕ್ಷಣವೇ KA-09 / AB-2666 ಸಂಖ್ಯೆಯ ವಾಹನವನ್ನು ರಸ್ತೆಯಲ್ಲಿ ಸಂಚರಿಸದಂತೆ ಜಪ್ತಿ ಮಾಡಿ, ಸರ್ಕಾರದ ನಿಯಮದಂತೆ ಬದಲಾವಣೆ ಮಾಡಿಸಿ, ಕರ್ತವ್ಯ ಲೋಪವೆಸಗಿ, ಅಕ್ರಮವಾಗಿ ಭ್ರಷ್ಟಾಚಾರದಲ್ಲಿ ತೊಡಗಿರುವ ಮೋಟಾರು ವಾಹನ ನಿರೀಕ್ಷಕರಾದ ಅನಂತ್ ರಾಮ್ ರವರನ್ನು ಈ ಕೂಡಲೇ ಅಮಾನತ್ತಿನಲ್ಲಿಟ್ಟು, ಇಲಾಖೆ ತನಿಖೆಯನ್ನು ನಡೆಸಬೇಕು. ಮೋಟಾರು ವಾಹನ ನಿರೀಕ್ಷಕರಾದ ಅನಂತ್ ರಾಮ್ ರವರಿಗೆ ಸಹಕಾರ ನೀಡಿರುವ ಇತರೆ ಸಿಬ್ಬಂದಿಗಳ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ ಸೂಕ್ತ ಕಲಂಗಳಲ್ಲಿ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ವಯ ದೂರು ದಾಖಲಿಸಿ ಸೂಕ್ತ ಕಠಿಣ ಕ್ರಮ ಜಾರಿಗೊಳಿಸಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.