ಮನೆ ಸುದ್ದಿ ಜಾಲ ವೆಂಕಟಾಚಲ ಅವಧೂತರ ವರ್ಧಂತಿ: ವಿಶೇಷ ಚೇತನ ಮಕ್ಕಳಿಗೆ ಸಿಹಿ ವಿತರಣೆ

ವೆಂಕಟಾಚಲ ಅವಧೂತರ ವರ್ಧಂತಿ: ವಿಶೇಷ ಚೇತನ ಮಕ್ಕಳಿಗೆ ಸಿಹಿ ವಿತರಣೆ

0

ಮೈಸೂರು(Mysuru): ವೆಂಕಟಾಚಲ ಅವಧೂತ್ತರ ವರ್ಧಂತಿ ಅಂಗವಾಗಿ ವಿಶೇಷ ಚೇತನ ಮಕ್ಕಳಿಗೆ ಸಿಹಿ ವಿತರಿಸಲಾಯಿತು.

ನಗರದ ಸರಸ್ವತಿ ಪುರಂನಲ್ಲಿರುವ ವಿಶೇಷ ಚೇತನ ಶಾಲೆಯಲ್ಲಿ ಸುಮಾರು 40 ಮಕ್ಕಳಿಗೆ  ಸಿಹಿ ವಿತರಿಸಿ ವರ್ಧಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ನಂತರ ರೇಡಿಯೋ ಜಾಕಿ ಸುನೀಲ್ ಮಾತನಾಡಿ, ವೆಂಕಟಾಚಲ ಅವಧೂತರ ವರ್ಧಂತಿ ನಮ್ಮ ಹಿಂದು ಸಂಸ್ಕತಿಯ ಪ್ರತೀಕ. ಮನುಷ್ಯರಾದ ನಾವೆಲ್ಲರೂ ಗುರು ಭಕ್ತಿ, ದೇಶ ಭಕ್ತಿಯ ಅನುಕರಣೆ ಮಾಡಬೇಕು. ದತ್ತಾತ್ರೇಯರ ಆರಾಧನಾ ಮಾಡುವ ಮೂಲಕ ಆಧ್ಯಾತ್ಮಿಕ ಲೋಕಕ್ಕೆ ಶಕ್ತಿ ತುಂಬವ ಕೆಲಸ ಮಾಡೋಣ ಎಂದು ತಿಳಿಸಿದರು.

ನಂತರ ಮೈಸೂರು ಅವಧೂತ್ತ ದತ್ತಸಾಯಿ ಪೀಠಿಕಾ ಜನಾ ಸೇವಾ ಟ್ರಸ್ಟ್’ನ ಅಧಕ್ಷ ರಿಷಿ ವಿಶ್ವ ಕರ್ಮ ಮಾತನಾಡಿ, ಭಗವಂತ ದತ್ತಾತ್ರೇಯನೇ ನಮ್ಮ ವೆಂಕಟಾಚಲ ಅವಧೂತರಾಗಿ ಬಂದ ಸುದಿನ. ಭಕ್ತರ ಉದ್ಧಾರಕ್ಕಾಗಿ ಹರನೇ ನರನಾಗಿ ಬಂದು ಹಲವಾರು ಲೀಲೆ ತೋರಿ ಸಂಪರ್ಕಕ್ಕೆ ಬಂದವರೆಲ್ಲರಿಗೂ ಸನ್ಮಾರ್ಗ ತೋರಿ, ಸಾವಿರಾರು ಗುರುಬಂಧುಗಳ  ಬಾಳ ಬೆಳಗಿ ಇವತ್ತಿಗೂ  ಚೈತನ್ಯ ರೂಪದಲ್ಲಿ ನೆನೆದವರ ಮನದಲ್ಲಿ ನೆಲೆಸಿ, ಕಾಪಾಡುತ್ತಿರುವ ಕಾರುಣ್ಯಮೂರ್ತಿ ಎಂದರು.

ಶ್ರೀ ಗುರುವೂ ತೋರಿಸಿದ ದಾರಿಯಲ್ಲಿ ನಡೆದು, ಆ ಮಹಾ ಚೈತನ್ಯ ಬಂದ ಉದ್ದೇಶ ಸಾಕಾರಗೊಳಿಸೋಣ. ಗುರುನಾಥರು ಸಮಸ್ತರಿಗೂ ಅಖಂಡ ಗುರುಭಕ್ತಿಯನ್ನು ಕೊಟ್ಟು ನಮ್ಮನ್ನೆಲ್ಲ ಉದ್ಧರಿಸಲೆಂದು ನಾವೆಲ್ಲರೂ ಸಾಮೂಹಿಕವಾಗಿ ಪ್ರಾರ್ಥಿಸೋಣ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ  ಸ್ವಸಹಾಯ ಸಮುಚ್ಚಯ (ಚೇತನ ಮತ್ತು ಕೌಶಲ) ವಿಶೇಷ ಚೇತನ ಮಕ್ಕಳ ಶಾಲೆಯ ಅಧ್ಯಕ್ಷರಾದ ಸವಿನಾ, ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷರಾದ ಜೋಗಿಮಂಜು, ಚಂದ್ರು, ಶರತ್ ಕುಮಾರ್ ಭಂಡಾರಿ, ರಾಜೇಶ್ ಗೌಡ, ರಂಜನ್, ಶಿವಮ್ಮ, ಕೋಮಲ, ರಾಜೇಶ್ವರಿ ಇದ್ದರು.