ಮನೆ ರಾಜ್ಯ 400 ಕೆ.ವಿ.ಡಬಲ್ ಸರ್ಕ್ಯೂಟ್ ಲೈನ್’ಗಾಗಿ ಟವರ್ ನಿರ್ಮಾಣಕ್ಕಾಗಿ ರೈತರ ಭೂಮಿ ಸ್ವಾಧೀನ: ಪರಿಹಾರಕ್ಕೆ ಒತ್ತಾಯ

400 ಕೆ.ವಿ.ಡಬಲ್ ಸರ್ಕ್ಯೂಟ್ ಲೈನ್’ಗಾಗಿ ಟವರ್ ನಿರ್ಮಾಣಕ್ಕಾಗಿ ರೈತರ ಭೂಮಿ ಸ್ವಾಧೀನ: ಪರಿಹಾರಕ್ಕೆ ಒತ್ತಾಯ

0

ಮೈಸೂರು(Mysuru): 400 ಕೆ.ವಿ.ಡಬಲ್ ಸರ್ಕ್ಯೂಟ್ ಲೈನ್’ಗಾಗಿ ಟವರ್ ನಿರ್ಮಾಣ ಮತ್ತು ಕಾರಿಡಾರ್’ಗಾಗಿ ಸ್ವಾಧೀನ ಪಡಿಸಿಕೊಂಡಿರುವ ತಾಲೂಕಿನ ರೈತರ ಭೂಮಿಗೆ ಸಂಬಂಧಪಟ್ಟ ಇಲಾಖೆ ಪರಿಹಾರ ನೀಡಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ನಾಗೇಂದ್ರ ಒತ್ತಾಯಿಸಿದರು.

ಹುಣಸೂರು ತಾಲ್ಲೂಕಿನ ಶಾನುಭೋಗನಹಳ್ಳಿಯಲ್ಲಿ ಈ ಉದ್ದೇಶಕ್ಕೆ ಭೂಮಿ ಕಳೆದುಕೊಂಡ ಗ್ರಾಮಗಳ ರೈತರು ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,  2007ನೇ ಇಸವಿಯಲ್ಲಿ ಈ ಉದ್ದೇಶಕ್ಕೆ ರೈತರಿಂದ ಭೂಮಿ ಪಡೆದು ಯಾವುದೇ ಪರಿಹಾರ ನೀಡದೆ ರೈತರಿಗೆ ಬೆದರಿಕೆ ಒಡ್ಡಿ ಪವರ್ ಗ್ರೇಟ್ ಅವರು ಲೈನ್ ತೆಗೆದು ಕೊಂಡು ಹೋಗಿದ್ದಾರೆ ಅದೇ ರೀತಿ ಕೆಪಿಟಿಸಿಎಲ್ ಅವರು 220 ಕೆ ವಿ ಲೈನ್ ತೆಗೆದುಕೊಂಡ ಹೋಗಿದ್ದಾರೆ. ಭೂಮಿಯ ರೈತರಿಗೆ ಕಾನೂನಿನ ಅಡಿಯಲ್ಲಿ ಪರಿಹಾರ ನೀಡಬೇಕು ಆದರೆ ಈ ಇಲಾಖೆಯವರು ರೈತರಿಗೆ ವಂಚಿಸಿವೆ. ಈ ಸಂಬಂಧ ಹೋರಾಟವನ್ನು ರೂಪಿಸುವುದಾಗಿ ಹೇಳಿದರು.  

ಈ ಸಂಬಂಧ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಭೂಮಿ ಕಳೆದುಕೊಂಡ ರೈತರ ಜೊತೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಲು ಸಮಯ ನಿಗದಿ ಮಾಡಲಾಗಿದೆ ಎಂದರು.

ಪ್ರಸನ್ನ ಎನ್ ಗೌಡ ಮಾತನಾಡಿ, ಸರ್ಕಾರಗಳು ರೈತರಿಗೆ ಎಲ್ಲಾ ರೀತಿಯಲ್ಲೂ ಮೋಸ ಮಾಡುತ್ತಿದ್ದು, ರೈತರು ಸಂಘಟಿತರಾಗಿ ಹೋರಾಟ ಮಾಡದಿದ್ದರೆ ನಿರಂತರವಾಗಿ ಶೋಷಣೆಗೆ ಒಳಗಾಗಬೇಕಾಗುತ್ತದೆ. ಈ ಕಾರಣ ರೈತರು ಜಾಗೃತಾಗಬೇಕಾಗಿ ಕರೆನೀಡಿದರು.

ಈ ಸಭೆಯಲ್ಲಿ  ಜಿಲ್ಲಾಧ್ಯಕ್ಷ ಹೊಸೂರ್ ಕುಮಾರ್,  ಮುಖಂಡರಾದ ಪಿ.ಮರಂಕಯ್ಯ,  ನೇತ್ರಾವತಿ ಚಂದ್ರಶೇಖರ್, ಬೆಂಕಿಪುರ ಚಿಕ್ಕಣ್ಣ ಹೋರಾಟದ ಅನುಭವಗಳನ್ನು ಹಂಚಿಕೊಂಡರು.

ರಾಮೇಗೌಡ ಬಸವರಾಜು ವಿಜಯೇಂದ್ರ ಧನಂಜಯ್ ರಾಘವೇಂದ್ರ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಹಿಂದಿನ ಲೇಖನಕಾಂಗ್ರೆಸ್‌’ನಲ್ಲಿ ಮಾತ್ರ ದಲಿತ ಮುಖ್ಯಮಂತ್ರಿಯಾಗಲು ಸಾಧ್ಯ: ಡಾ.ಜಿ.ಪರಮೇಶ್ವರ್‌
ಮುಂದಿನ ಲೇಖನವೆಂಕಟಾಚಲ ಅವಧೂತರ ವರ್ಧಂತಿ: ವಿಶೇಷ ಚೇತನ ಮಕ್ಕಳಿಗೆ ಸಿಹಿ ವಿತರಣೆ