ಮನೆ ಯೋಗಾಸನ ವಾತಾಯನಾಸನ

ವಾತಾಯನಾಸನ

0

ವಾತಾಯನಾಸನದ ಪೂರ್ಣ ಸ್ಥಿತಿಯಲ್ಲಿ ಶರೀರದ ಭಂಗಿಯು ಕುದುರೆಯ ಮುಖವನ್ನು ಹೋಲುವುದು.

Join Our Whatsapp Group

ಮಾಡುವ ಕ್ರಮ:

1)    ಮೊದಲು ಎರಡೂ ಕಾಲುಗಳನ್ನು ನೆಲದ ಮೇಲೆ ನೇರವಾಗಿ ಚಾಚಿ, ಎದೆ ಎತ್ತಿ ಕುಳಿತುಕೊಳ‍್ಳಬೇಕು.

2)   ಅನಂತರ ಯಾವುದಾದರೂ ಒಂದು ಕಾಲಿನ ಪಾದವನ್ನು, ಉದಹಾರಣೆಗೆ ಬಲಗಾಲಿನ ಪಾದವನ್ನು ಎಡತೊಡೆಯ ಮೇಲೆ ಇಟ್ಟು ಅರ್ಧ ಪದ್ಮಾಸನವನ್ನು ಮಾಡಬೇಕು.

3)    ದೇಹವನ್ನು ನೆಲದಿಂದ ಮೇಲಕ್ಕೆ ಸ್ವಲ್ಪ ಎತ್ತಿ, ಬಲಗಾಲಿನ ಮಂಡಿಯನ್ನು  ನೆಲದ ಮೇಲೆ ಇಡಬೇಕು. ಹಾಗೆಯೇ ಎಡಗಾಲಿನ ಪಾದವನ್ನು ಪೂರ್ಣವಾಗಿ ನೆಲದ ಮೇಲೆ ಬಲಗಾಲಿನ  ಮಂಡಿಯ ಸಮೀಪದಲ್ಲಿರುವಂತೆ ಇಡಬೇಕು.

4)   ಅನಂತರ ಆದಷ್ಟೂ ಎದೆ ಎತ್ತಿ ನೇರವಾಗಿ ಕುಳಿತುಕೊಳ್ಳಲು ಪ್ರಯತ್ನಿಸಬೇಕು.  ಈ ಸ್ಥಿತಿಯಲ್ಲಿ ಶರೀರದ ಭಂಗಿಯು ಕುರ್ಚಿಯೋಪಾದಿಯಲ್ಲಿರುವುದು. ಅನಂತರ ಎರಡೂ ಕೈಗಳನ್ನೂ ನಮಸ್ಕಾರ ಮುದ್ರೆಯಲ್ಲಿ ಅಥವಾ ಒಂದರಿಂದ ಇನ್ನೊಂದನ್ನು ಬಳಸುವಂತೆ ಮಾಡಬೇಕು. ಸುಮಾರು 30ರಿಂದ 40 ಸೆಕೆಂಡುಗಳ ವರೆಗೆ ಇದೇ ಸ್ಥಿತಿಯಲ್ಲಿದ್ದು ಅನಂತರ ಕಾಲುಗಳನ್ನು ಬದಲಿಸಬಹುದು.

ಲಾಭಗಳು:

ವಾತಾಯನಾಸನದ ಅಭ್ಯಾಸದಿಂದ ಕಾಲುಗಳಲ್ಲಿನ ವಕ್ರತೆಯು ನಿವಾರಣೆಯಾಗುವುದು, ರಕ್ತ ಸಂಚಾರ ಸುಗಮಗೊಳ್ಳುವುದು. ಕಾಲುಗಳು ಬಲಯುತವಾಗುವುದರೊಂದಿಗೆ ಕೀಲುಗಳ ನೋವುಗಳೂ ದೂರವಾಗುವವು.